ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನ ಶೇ.25 ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

ಸ್ನಾತಕೋತ್ತರ ವೈದ್ಯಕೀಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಸೀನಿಯರ್ ರೆಸಿಡೆಂಟ್ ವೈದ್ಯರ ಶಿಷ್ಯವೇತನ (ಸ್ಟಿಪೆಂಡ್) ಶೇ.25ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಶಿಷ್ಯವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮುಷ್ಕರಕ್ಕೆ ಕರೆ ನೀಡಿದ್ದರು. ಪರಿಷ್ಕೃತ ವೇತನವ ಆಗಸ್ಟ್ 1ರಿಂದಲೇ ಜಾರಿಗೆ ಬಂದಿದ್ದು, ಶೇ.25ರಷ್ಟು ಹೆಚ್ಚಳವಾಗಲಿದೆ. ಸರ್ಕಾರ ಶಿಷ್ಯವೇತನ ಹೆಚ್ಚಳ ಮಾಡಿದಬೆನ್ನಲ್ಲೇ  ವೈದ್ಯರು ಮುಷ್ಕರನ್ನು ಹಿಂಪಡೆದಿದ್ದಾರೆ.

ಪರಿಷ್ಕೃತ  ವೇತನ:

ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು:

ಕೋರ್ಸ್‍ಗಳು – ಮಾಸಿಕ ವೇತನ

1ನೇ ವರ್ಷ – ರೂ. 45,000 ದಿಂದ 56,250

2ನೇ ವರ್ಷ- ರೂ. 50,000 ದಿಂದ 62,500

3ನೇ ವರ್ಷ- ರೂ. 55,000 ದಿಂದ 68,750

ಸೂಪರ್ ಸ್ಪೆಷಾಲಿಟಿ ವೈದ್ಯ ವಿದ್ಯಾರ್ಥಿಗಳು:

ಕೋರ್ಸ್‍ಗಳು – ಮಾಸಿಕ ವೇತನ

1ನೇ ವರ್ಷ – ರೂ. 55,000 ದಿಂದ 68,750

2ನೇ ವರ್ಷ- ರೂ. 60,000 ದಿಂದ 75,000

3ನೇ ವರ್ಷ- ರೂ. 65,000 ದಿಂದ 81,250

ಸೀನಿಯರ್ ರೆಸಿಡೆಂಟ್ಸ್  – ರೂ. 60,000 ದಿಂದ 75,000

ಮಂಜೂರಾದ ಸೀಟುಗಳು

ಸ್ನಾತಕೋತ್ತರ 3,540

ಸೂಪರ್ ಸ್ಪೆಷಾಲಿಟಿ 445

ಸೀನಿಯರ್ ರೆಸಿಡೆಂಟ್ 527

ಒಟ್ಟು 4,312  ಸೀಟುಗಳು

Donate Janashakthi Media

Leave a Reply

Your email address will not be published. Required fields are marked *