ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಐಯಿಹಾಸಿಕ 216ನೇ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ದಾಖಲೆ ಸಂಖ್ಯೆಯಲ್ಲಿ 9 ಲಕ್ಷ ಜನರು ಭೇಟಿ ನೀಡಿದ್ದಾರೆ.
ಲಾಲ್ ಬಾಗ್ ಗಾಜಿನ ಮನೆಯಲ್ಲಿ ಆಗಸ್ಟ್ 8 ರಿಂದ 19ರವರೆಗೆ ಜರುಗಿದ ಫಲಪುಷ್ಪ ಪ್ರದರ್ಶನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ವಿಷಯಾಧಾರಿತ ಅಲಂಕರ ಮಾಡಲಾಗಿತ್ತು.
12 ದಿನಗಳ ಕಾಲ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟಾರೆ 9 ಲಕ್ಷಕ್ಕೂ ಹೆಚ್ಚು ಸಾರ್ವಜನಿಕರು ಭೇಟಿ ನೀಡಿದ್ದರು. ಇದರಲ್ಲಿ 4,97,097 ವಯಸ್ಕರು ಮತ್ತು 4,10,122 ಮಕ್ಕಳು ಸೇರಿದಂತೆ ಒಟ್ಟಾರೆ 9,07,219 ಭೇಟಿ ನೀಡಿದ್ದಾರೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ತಿಳಿಸಿದ್ದಾರೆ.
ಟಿಕೆಟ್ ರೂಪದಲ್ಲಿ 3,049,2930 ರೂ. ಸಂಗ್ರಹವಾಗಿದ್ದರೆ, ಅಂಗಡಿ ಸೇರಿದಂತೆ ವಿವಿಧ ಮೂಲಗಳಿಂದ 40 ಲಕ್ಷ ರೂ. ಸೇರಿದಂತೆ ಪ್ರದರ್ಶನದಿಂದ ಒಟ್ಟಾರೆ ರೂ 3,44,92,320 ರೂ. ಸಂಗ್ರಹವಾಗಿದೆ ಎಂದು ಡಾ.ಎಂ.ಜಗದೀಶ್ ತಿಳಿಸಿದ್ದಾರೆ.