ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಿಳಿದು ಕೆಲಸ ಮಾಡಬೇಕಿದ್ದ ಬಿಬಿಎಂಪಿ ಬೆಚ್ಚಗೆ ಮಲಗಿದ್ದರೆ, ಪೊಲೀಸರು ಮಳೆ-ಗಾಳಿ ಎನ್ನದೇ ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಭಾರೀ ಮಳೆಯಿಂದ ಸಾರ್ವಜನಿಕರ ಪರದಾಟ ನೋಡಲಾಗದೇ ಸಂಚಾರಿ ಪೊಲೀಸ್ ಇನ್ ಸ್ಪೆಕ್ಟರ್ ಮಳೆ ನೀರು ತೆಗೆದು ರಸ್ತೆ ಗುಂಡಿ ಮುಚ್ಚಿದ್ದಾರೆ.
ಪೊಲೀಸಪ್ಪನ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಾಕ್ತವಾಗುತ್ತಿದ್ದು, ಕಠಿಣ ಸಂದರ್ಭದಲ್ಲಿ ರಸ್ತೆಗಿಳಿದು ಕೆಲಸ ಮಾಡಬೇಕಿದ್ದ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಛೀಮಾರಿ ಹಾಕುತ್ತಿದ್ದಾರೆ.
ಬೆಳ್ಳಂದೂರು ಟ್ರಾಫಿಕ್ ಇನ್ ಸ್ಪೆಕ್ಟರ್ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕೋಡಿ ಬಳಿ ಮಳೆ ನೀರು ನಿಂತು ಸಂಚಾರ ಅವ್ಯವಸ್ಥೆಯಾಗಿತ್ತು. ಇದನ್ನು ಗಮನಿಸದ ಇನ್ ಸ್ಪೆಕ್ಟರ್ ಖುದ್ದು ರಸ್ತೆಗಿಳಿದು ರಸ್ತೆ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಸಂಚಾರಿ ಪೊಲೀಸ್ ಇನ್ ಸ್ಪೆಕ್ಟರ್ ರಸ್ತೆ ಗುಂಡಿ ನೀರನ್ನ ಹೊರ ಹಾಕುತ್ತಿರುವ ವೀಡಿಯೊ ವೈರಲ್ ಆಗಿದ್ದು, ಇನ್ಸ್ ಪೆಕ್ಟರ್ ಕಾಳಜಿ-ಕಳಕಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.