ಓರೊಪೌಚೆ ವೈರಸ್ ಗೆ ಯುರೋಪ್ ನಲ್ಲಿ 20 ಮಂದಿ ಸಾವು

ಸೋಮಾರಿ (sloths) ಪ್ರಾಣಿಯ ಮೇಲಿನ ಸಣ್ಣ ನೊಣದ ಮಾದರಿಯ ಕೀಟಗಳಿಂದ ಹರಡುತ್ತಿರುವ ಹೊಸ ವೈರಸ್ ಗೆ ಯುರೋಪ್ ರಾಷ್ಟ್ರಗಳು ತತ್ತರಿಸುತ್ತಿದ್ದು, ಅತ್ಯಂತ ಕ್ಷಿಪ್ರವಾಗಿ ಹರಡುತ್ತಿರುವ ಈ ವೈರಸ್ ನಿಂದ 20 ಮಂದಿ ಅಸುನೀಗಿದ್ದಾರೆ.

ಜೂನ್ ಮತ್ತು ಜುಲೈ ತಿಂಗಳಲ್ಲಿ ಯುರೋಪ್ ನಲ್ಲಿ ಹೊಸದಾಗಿ ಕಾಣಿಸಿಕೊಂಡ ಈ ವೈರಸ್ ನಿಂದ ಸ್ಪೇನ್, ಇಟಲಿ, ಜರ್ಮನಿ ಮತ್ತು ಬ್ರಿಟನ್ ಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ.

ಮಿಡ್ಜ್ ಸಣ್ಣ ರೀತಿಯ ನೊಣವಾಗಿದ್ದು, ಹವಾಮಾನ ವೈಪರಿತ್ಯದಿಂದ ಈ ವೈರಸ್ ಅತ್ಯಂತ ಕ್ಷಿಪ್ರವಾಗಿ ಹರಡುತ್ತಿದ್ದು, ಸ್ಪೇನ್‌ನಲ್ಲಿ 12, ಇಟಲಿಯಲ್ಲಿ 5 ಮತ್ತು ಜರ್ಮನಿ 2 ಸಾವಿನ ಪ್ರಕರಣಗಳು ವರದಿಯಾಗಿವೆ.

ವೈರಸ್ ಪ್ರಾಥಮಿಕವಾಗಿ ಸೊಳ್ಳೆಗಳು ಸೇರಿದಂತೆ ಕೀಟ ಕಡಿತದ ಮೂಲಕ ಹರಡುತ್ತದೆ. ಮಸುಕಾದ ಗಂಟಲಿನ ಸೋಮಾರಿ ಪ್ರಾಣಿ, ಸಸ್ತನಿಗಳು ಮತ್ತು ಪಕ್ಷಿಗಳಿಂದ ಈ ವೈರಸ್ ಹುಟ್ಟಿಕೊಳ್ಳುತ್ತಿದ್ದು, ಪ್ರಸ್ತುತ ವೈರಸ್‌ಗೆ ಯಾವುದೇ ಲಸಿಕೆ ಲಭ್ಯವಿಲ್ಲ. ಇದು ಜಿಕಾ ವೈರಸ್ ಮತ್ತು ಡೆಂಗ್ಯೂ ಜ್ವರದಂತಹ ಒಂದೇ ಕುಟುಂಬಕ್ಕೆ ಸೇರಿದೆ.

ರೋಗ ಲಕ್ಷಣಗಳು

ಜ್ವರ ತೀವ್ರ. ತಲೆನೋವು, ಕೀಲು ಮತ್ತು ಸ್ನಾಯು ನೋವು, ಶೀತ ವಾಕರಿಕೆ ಮತ್ತು ವಾಂತಿ ತಲೆ ತಿರುಗುವಿಕೆ ಫೋಟೋಫೋಬಿಯಾ (ಬೆಳಕಿಗೆ ಸೂಕ್ಷ್ಮತೆ) ಹೆಚ್ಚಿನ ಪ್ರಕರಣಗಳು ಸೌಮ್ಯವಾಗಿರುತ್ತವೆ. ಒಂದು ವಾರದೊಳಗೆ ಕಡಿಮೆಯಾಗುತ್ತದೆ. ತೀವ್ರವಾದ ಪ್ರಕರಣಗಳಲ್ಲಿ ಮೆನಿಂಜೈಟಿಸ್‌ ನಂತಹ (ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ರಕ್ಷಣಾತ್ಮಕ ಪೊರೆಗಳು ಉರಿಯೂತಕ್ಕೆ ಒಳಗಾಗುತ್ತದೆ.) ಮಾರಣಾಂತಿಕ ತೊಡಕುಗಳಿಗೆ ಕಾರಣವಾಗುತ್ತವೆ.

Donate Janashakthi Media

Leave a Reply

Your email address will not be published. Required fields are marked *