ತಂತ್ರಜ್ಞಾನ ನೀಡಿದ ಎಚ್ಚರಿಕೆ: ಉತ್ತರ ಪ್ರದೇಶದಲ್ಲಿ ತಪ್ಪಿದ ರೈಲು ದುರಂತ!

ಅಪಾಯ ಮಟ್ಟ ಮೀರಿ ಹಳಿಗಳು ಬಿಸಿಯಾಗಿವೆ ಎಂದು ತಂತ್ರಜ್ಞಾನ ನೀಡಿದ ಎಚ್ಚರಿಕೆಯಿಂದ ಉತ್ತರ ಪ್ರದೇಶದಲ್ಲಿ ರೈಲು ದುರಂತ ತಪ್ಪಿದೆ.

ರೈಲ್ವೆ ಗುಣಮಟ್ಟದ ಬಗ್ಗೆ ಎಚ್ಚರಿಕೆ ನೀಡುದ ಸ್ವಯಂಚಾಲಿತ ಯಂತ್ರಗಳನ್ನು ಹಳಿಗಳ ಮೇಲೆ ಹಾಕಲಾಗಿದೆ. ಈ ಯಂತ್ರಗಳು ಸೂಕ್ತ ಸಮಯದಲ್ಲಿ ನೀಡಿದ ಎಚ್ಚರಿಕೆ ಸಂದೇಶದಿಂದ ರೈಲು ದುರಂತ ತಪ್ಪಿದೆ.

ಮಿರ್ಜಾಪುರದ ಚುನಾರ್ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಸಮಯಪ್ರಜ್ಞೆಯಿಂದಾಗಿ ಸೀಮಾಂಚಲ್ ಎಕ್ಸ್ ಪ್ರೆಸ್ ಕೂಡಲೇ ನಿಲ್ಲಿಸಿದ್ದರಿಂದ ಭಾರೀ ದುರಂತವೊಂದು ತಪ್ಪಿದೆ.

ದೆಹಲಿಯಿಂದ ಬಿಹಾರದ ಜೋಗ್ಬಾನಿ ಕಡೆಗೆ ತೆರಳುತ್ತಿದ್ದ ರೈಲು ಶನಿವಾರ ಬೆಳಗ್ಗೆ 10 ಗಂಟೆಗೆ ಚುನಾರ್ ರೈಲು ನಿಲ್ದಾಣ ಬಿಡಬೇಕಿತ್ತು. ಈ ವೇಳೆ ರೈಲು ಹಳಿಗಳು ಬಿಸಿಲಿನ ತಾಪದಿಂದ ಬೆಂಡಾಗಿದೆ ಎಂದು ರೈಲಿ ಸ್ಲೀಪರ್ ಕೋಚ್ ಎಸ್-3ಗೆ ಅಳವಡಿಸಿದ್ದ ತಂತ್ರಜ್ಞಾನ ಎಚ್ಚರಿಕೆ ನೀಡಿವೆ.

ಮುಂದಿನ ಜಿನ್ಹಾ ನಿಲ್ದಾಣದಲ್ಲಿ ರೈಲು ನಿಲ್ಲಿಸಿದ ಚಾಲಕ ಎಚ್ಚರಿಕೆ ಸಂದೇಶ ಕುರಿತು ರೈಲು ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ. ಇದರಿಂದ ನಂತರ ಇದೇ ಹಳಿಯ ಮೇಲೆ ತೆರಳಬೇಕಿದ್ದ ಸೀಮಾಂಚಲ್ ರೈಲು ಸಂಚಾರವನ್ನು ತಡೆ ಹಿಡಿಯಲಾಗಿದ್ದು, ರೈಲು ದುರಂತವೊಂದು ತಪ್ಪಿದಂತಾಗಿದೆ.

ಬಿಸಿಲಿಗೆ ರೈಲು ಹಳಿಗಳು ಮೃದುವಾಗುತ್ತವೆ. ಈ ವೇಳೆ ಅತೀ ವೇಗದಿಂದ ಬರುವ ರೈಲುಗಳು ಹಳಿ ತಪ್ಪಿ ದುರಂತ ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹಳಿಗಳ ಗುಣಮಟ್ಟದ ಬಗ್ಗೆ ಮಾಹಿತಿ ನೀಡಲು ಮುನ್ನೆಚ್ಚರಿಕಾ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *