6 ನೇ ದಿನಕ್ಕೆ ಕಾಲಿಟ್ಟ ‘ದೋಸ್ತಿ’ ಪಕ್ಷಗಳ ಪಾದಯಾತ್ರೆ; ಭಾಗಿಯಾಗದೇ ದೂರ ಉಳಿದಿರವ ಮಾಜಿ ಸಂಸದೆ ಸುಮಲತಾ

ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ‘ದೋಸ್ತಿ’ ಪಾದಯಾತ್ರೆ 6 ನೇ ದಿನಕ್ಕೆ ಕಾಲಿಟ್ಟಿದ್ದು, ಶಂಖನಾದದ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. “ಬಿಜೆಪಿಗೆ ಸೇರಿದ್ದು ನನ್ನ ಜೀವನದಲ್ಲೇ ಮಹತ್ವದ ಸುದಿನ” ಎಂದು ಹೇಳಿಕೆ ನೀಡಿದ್ದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಈಗ ಬಿಜೆಪಿ ಮುಂದಾಳತ್ವದಲ್ಲಿ ತಮ್ಮ ಭಾಗದಲ್ಲೇ ‘ಮೈಸೂರು ಚಲೋʼ ಪಾದಯಾತ್ರೆ ಹಾದುಹೋಗುತ್ತಿದ್ದರೂ ಎಲ್ಲೂ ಕಾಣಿಸಿಕೊಳ್ಳದಿರುವುದು ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಮಂಡ್ಯ ತಾಲೂಕಿನ ತೂಬಿನಕೆರೆಯಿಂದ ಇಂದು ಪಾದಯಾತ್ರೆ ಹೊರಟಿದ್ದು, ಕೆಲವು ಬಿಜೆಪಿ ನಾಯಕರು ಕಾರ್ಯಕರ್ತರ ಜೊತೆ ಭರ್ಜರಿ ಸ್ಟೆಪ್ ಹಾಕಿದರು. ಪಾದಯಾತ್ರೆಯಲ್ಲಿ ಮಂಡ್ಯದ ಮಾಜಿ ಸಂಸದೆ ಸುಮಲತಾ ಭಾಗಿಯಾಗದೇ ದೂರ ಉಳಿದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇಂದಾದರೂ ಸುಮಲತಾ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ವಯ್ನಾಡ್ ಭೂಕುಸಿತ: ಕೇರಳ ಸರಕಾರದ ವಿರುದ್ಧ ಮತ್ತೊಂದು ಸುತ್ತಿನ ದೋಷಾರೋಪಣೆ ಪ್ರಯತ್ನ!

ಮೊದಲನೇ ದಿನ ಬೆಂಗಳೂರಿನ ಕೆಂಗೇರಿ ಬಳಿ ಕೆಂಪಮ್ಮ ದೇವಸ್ಥಾನದ ಬಳಿ ನಗಾರಿ ಬಾರಿಸುವ ಮೂಲಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಿಎಂ, ಕೇಂದ್ರ ಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡಿದ್ದರು. ಇದಾದ ಬಳಿಕ ಬಿಜೆಪಿ-ಜೆಡಿಎಸ್ ನಾಯಕರು ಒಟ್ಟಾಗಿ ಪಾದಯಾತ್ರೆ ಹೊರಟಿದ್ದರು.ಇಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ‘ದೋಸ್ತಿ’ ಪಾದಯಾತ್ರೆ 6 ನೇ ದಿನಕ್ಕೆ ಕಾಲಿಟ್ಟಿದೆ.

ಇದನ್ನೂ ನೋಡಿ: ಕಟ್ಟಡ ಕಟ್ಟೋವಾಗ ಬಿದ್ದರೂ ಕೇಳೋರಿಲ್ಲ | ಕಟ್ಟಡ ಕಾರ್ಮಿಕರ ಪ್ರತಿಭಟನೆ |CITU AITUC INTU AICCTU

Donate Janashakthi Media

Leave a Reply

Your email address will not be published. Required fields are marked *