ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ತಲುಪಿದ ನಂತರ ಅನರ್ಹಗೊಂಡು ಪದಕ ವಂಚಿತರಾದ ಡ ಆಘಾತದ ಬೆನ್ನಲ್ಲೇ ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಕುಸ್ತಿಗೆ ವಿದಾಯ ಘೋಷಿಸಿದ್ದಾರೆ.
ಮಹಿಳೆಯರ 50 ಕೆಜಿ ವಿಭಾಗದ ಫ್ರೀಸ್ಟೈಲ್ ನಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದ್ದ ವಿನೇಶ್ ಪೊಗಟ್ 100 ಗ್ರಾಂ ತೂಕ ಹೆಚ್ಚು ಇದೆ ಎಂಬ ಕಾರಣಕ್ಕೆ ಫೈನಲ್ ನಲ್ಲಿ ಸ್ಪರ್ಧಿಸುವುದರಿಂದ ಅನರ್ಹಗೊಂಡು ಕೊನೆಯ ಕ್ಷಣದಲ್ಲಿ ಪದಕದಿಂದ ವಂಚಿತರಾದರು.
2001ರಲ್ಲಿ ಮೊದಲ ಬಾರಿ ಕುಸ್ತಿ ಅಖಾಡಕ್ಕೆ ಇಳಿದಿದ್ದ ವಿನೇಶ್ ಪೊಗಟ್ 2024ರಲ್ಲಿ ತಮ್ಮ ವೃತ್ತಿಜೀವನವನ್ನು ಆಘಾತಕಾರಿ ಘಟನೆಯೊಂದಿಗೆ ವಿದಾಯ ಹೇಳಿದ್ದಾರೆ.
ವಿನೇಶ್ ಪೊಗಟ್ ಒಲಿಂಪಿಕ್ಸ್ ಗೆ ಮೇಲ್ಮನವಿ ಸಲ್ಲಿಸಿದ್ದು, ಫಲಿತಾಂಶ ನಿರೀಕ್ಷಿಸಲಾಗಿತ್ತದೆ. ಗುರುವಾರ ಸಂಜೆಯೊಳಗೆ ಫಲಿತಾಂಶ ನಿರೀಕ್ಷೆಯಲ್ಲಿದ್ದರೂ ಈ ಆಘಾತದಲ್ಲಿ ಕ್ರೀಡೆಯಲ್ಲಿ ಮುಂದುವರಿಯುವ ಅಸಕ್ತಿ ಇಲ್ಲ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕೊನೆಯ ಬಾರಿಗೆ ಸ್ಪರ್ಧಿಸುವ ಕುರಿತು ಮೊದಲೇ ನಿರ್ಧರಿಸಿದ್ದೆ. ಆದರೆ ಈ ರೀತಿ ವೃತ್ತಿಜೀವನ ಅಂತ್ಯಗೊಳ್ಳುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಪೊಗಟ್ ಹೇಳಿದ್ದಾರೆ.