‘ಒಳ ಮೀಸಲಾತಿ’ ಕುರಿತು ಸುಪ್ರೀಂ ಕೋರ್ಟ್ ತೀರ್ಪು; ಡಿ.ಎಚ್.ಎಸ್ ಸ್ವಾಗತ

ಬೆಂಗಳೂರು: ‘ಒಳ ಮೀಸಲಾತಿ’ ಕುರಿತು ಸುಪ್ರೀಂ ಕೋರ್ಟ್ ತೀರ್ಪು ದಲಿತರ ದೀರ್ಘಕಾಲದ ಹೋರಾಟಕ್ಕೆ ಸಂದ ಜಯವಾಗಿದೆ. ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನಸಂಖ್ಯಾಧಾರದಲ್ಲಿ ಮೀಸಲಾತಿ ಜಾರಿಯಾಗಬೇಕೆಂದು ದಲಿತ ಸಂಘಟನೆಗಳು ಹೋರಾಟ ನಡೆಸಿದ್ದವು. ಈ ಕುರಿತು ಗುರುವಾರ (ಆಗಷ್ಟ್ 1) ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಈ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಅದ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿಎನ್. ರಾಜಣ್ಣ ಹೇಳಿದರು.

ಸಂವಿಧಾನದ ಆಶಯಗಳಿಗೆ ಬದ್ದವಾಗಿದ್ದು, ದಲಿತ ಹಕ್ಕುಗಳ ಸಮಿತಿ – ಕರ್ನಾಟಕ (ಡಿ.ಹೆಚ್.ಎಸ್) ಈ ತೀರ್ಪನ್ನು ಸ್ವಾಗತಿಸುತ್ತದೆ. ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 57 ಉಪ ಜಾತಿ ಗುಂಪುಗಳಿದ್ದು, ಸೌಲಭ್ಯಗಳು ಸಿಗದ ಕಟ್ಟ ಕಡೆಯ ಜನಕ್ಕೆ ಅವರವರ ಗುಂಪುಗಳ ಜನಸಂಖ್ಯೆ ಆಧಾರದಲ್ಲಿ ಉದ್ಯೋಗ, ಅಭಿವೃದ್ಧಿ ಸೌಲಭ್ಯಗಳು ಸಿಗಬೇಕೆಂದು ನಾವು ಒತ್ತಾಯಿಸಿದ್ದೆವು ಎಂದರು.

ಈ ಬಗ್ಗೆ ಅಂದಿನ ಸರ್ಕಾರ ನ್ಯಾಯಮೂರ್ತಿ ಡಾ.ಸದಾಶಿವ ಆಯೋಗ ನೇಮಿಸಿ ವರದಿ ಪಡೆಯಲಾಗಿತ್ತು. ವರದಿ ಮಂಡಿಸಿ 3 ದಶಕಗಳು ಕಳೆದು ಹೋದವು. ನೆರೆ ರಾಜ್ಯವಾದ ಆಂಧ್ರ ಪ್ರದೇಶದಲ್ಲಿ ಈ ಹೋರಾಟ ತೀವ್ರಗೊಂಡಿತ್ತು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನಿರಂಕುಶ , ಭ್ರಷ್ಟ ಆಳ್ವಿಕೆಯ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸಾಮೂಹಿಕ ಬಂಡಾಯ

ಆಗ ಕೇಂದ್ರ ಸರ್ಕಾರ ನ್ಯಾಯಮೂರ್ತಿ ಉಷಾ ಮಹೆತಾರವರ ನೇತ್ರದಲ್ಲಿ ಆಯೋಗ ನೇಮಿಸಿತ್ತು . ಆಯೋಗವು ಕೇಂದ್ರ ಸರ್ಕಾರಕ್ಕೆ ತನ್ನ ಅಭಿಪ್ರಾಯವನ್ನು ಮಂಡಿಸಿ 341(3) ತಿದ್ದುಪಡಿ ಮಾಡಲು ಸೂಚಿಸಿ ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ತೀರ್ಮಾನ ಮಾಡಬೇಕೆಂದು ವರದಿ ನೀಡಿತ್ತು. ಇದು ಬಿಜೆಪಿ ಕೇಂದ್ರ ಸರ್ಕಾರದಲ್ಲಿ ಮೂಲಗುಂಪಾಗಿತ್ತು.

ಇದು ಹೊಲೆ, ಮಾದಿಗರು ಸೇರಿದಂತೆ ಸಣ್ಣ ಸಣ್ಣ ಉಪ ಜಾತಿ ಜನಸಂಖ್ಯೆ ಆಧಾರದಲ್ಲಿ ಎಲ್ಲಾ ಎಸ್ಸಿ,ಎಸ್ಟಿ ಗುಂಪುಗಳಿಗೆ ಅನ್ವಯಿಸಿದ ವಿಷಯವಾಗಿದೆ . ಇದರ ಜಾರಿಗೆ ಮುಂದೆಯು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾದ ಆದ್ಯ ಕರ್ತವ್ಯ ನಮ್ಮ ಎಲ್ಲಾ ಸಂಘಟನೆಗಳ ಮೇಲಿದೆ ಎಂದಿದ್ದಾರೆ.

ಮುಖ್ಯಮಂತ್ರಿ ಶ್ರೀ. ಸಿದ್ದರಾಮಯ್ಯನವರು ಈ ತೀರ್ಪನಂತೆ ವರದಿಯನ್ನು ಜಾರಿಗೊಳಿಸಲು ಭರವಸೆ ನೀಡಿರುವುದು ಸ್ವಾಗತರ್ಹವಾಗಿದೆ. ಯಾವ ಒತ್ತಡಕ್ಕೂ ಮಣಿಯದೆ ಜಾರಿಗೆ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ: ಸೂರಿ ದಾರಿಯಲ್ಲಿ ಕಾರ್ಮಿಕರು ಸಂಘಟಿತರಾಗಬೇಕು – ಪುರುಷೋತ್ತಮ ಬಿಳಿಮಲೆ, Janashakthi Media

Donate Janashakthi Media

Leave a Reply

Your email address will not be published. Required fields are marked *