ಪಿಎಂ ಕುಸುಮ್ ಯೋಜನೆಗೆ ರಾಜ್ಯದಿಂದ 1.79 ಲಕ್ಷ ರೈತರಿಂದ ಅರ್ಜಿ: ಪ್ರಹ್ಲಾದ್ ಜೋಷಿ

ನವದೆಹಲಿ: ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಕರ್ನಾಟಕದಿಂದಲೇ 1.79 ಲಕ್ಷ ರೈತರು ಬೇಡಿಕೆ ಇಟ್ಟಿದ್ದಾರೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಲೋಕಸಭಾ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕರ್ನಾಟಕದಿಂದ ನಮಗೆ ಬರೋಬ್ಬರಿ 1,79,588 ಸೋಲಾರ್ ಪಂಪ್‌ ಅಳವಡಿಕೆಗೆ ಬೇಡಿಕೆ ಬಂದಿದೆ ಎಂದು ವಿವರಿಸಿದರು.

ವಿಫಲವಾಗಿದ್ರೆ ಬೇಡಿಕೆ ಏಕಿರುತ್ತಿತ್ತು? ವಿಪಕ್ಷದವರು ಪಿಎಂ ಕುಸುಮ್ ಯೋಜನೆ ಬಗ್ಗೆ ಇಲ್ಲ-ಸಲ್ಲದ ಮಾತನಾಡುತ್ತಾರೆ. ಹಾಗೊಂದು ವೇಳೆ ಈ ಯೋಜನೆ ವಿಫಲವಾಗಿದ್ದರೆ ಪ್ರಸ್ತುತ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ ಸರ್ಕಾರದವರು ಏಕೆ ಅಧಿಕೃತವಾಗಿ ನಮಗೆ ಇಷ್ಟೊಂದು ಬೇಡಿಕೆ ಕಳುಹಿಸುತ್ತಿದ್ದರು? ಎಂದು ಸಚಿವರು ಪ್ರಶ್ನಿಸಿದರು.

ಪಿಎಂ ಕುಸುಮ್ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಿದ್ದು, ಸ್ವತಂತ್ರ ಸೋಲಾರ್ ಪಂಪ್‌ಗಳ ಸ್ಥಾಪನೆಗೆ ರೈತರಿಗೆ ಹಣಕಾಸಿನ ನೆರವು ಕೂಡ ನೀಡಲಾಗಿದೆ. ರೈತರಿಗೆ ಇದು ಆಶಾದಾಯಕ ವಾಗಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಕಂಪ್ಯಾನಿಯನ್‌ ಆಫ್‌ ದಿ ಆರ್ಡರ್‌ ಆಫ್‌ ಫಿಜಿ ಪ್ರಶಸ್ತಿ ಪ್ರಧಾನ

ಸೂರ್ಯ ಘರ್ ಗೆ 1.30 ಕೋಟಿ ನೋಂದಣಿ: ಇನ್ನು, ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಗೆ ಜನರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜುಲೈ 2024ರವರೆಗೆ 1.30 ಕೋಟಿಗೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

ಸೂರ್ಯ ಘರ್ ಯೋಜನೆಗೆ ಈಗಾಗಲೇ 15 ಲಕ್ಷಕ್ಕೂ ಹೆಚ್ಚು ಗ್ರಾಹಕರ ಅರ್ಜಿ ಸ್ವೀಕರಿಸಲಾಗಿದೆ. ಸುಮಾರು 2.3 ಲಕ್ಷ ಸೌರ ಮೇಲ್ಛಾವಣಿ ಸ್ಥಾಪಿಸಲಾಗಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಐತಿಹಾಸಿಕ ನಿರ್ಧಾರಗಳಿಂದಾಗಿ, ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತ ನಂ.4ನೇ ಸ್ಥಾನದಲ್ಲಿದೆ. ಪವನ ಶಕ್ತಿ ಸಾಮರ್ಥ್ಯದಲ್ಲಿ  4ನೇ ಸ್ಥಾನ ಮತ್ತು ಸೌರ ಪಿವಿ ಸಾಮರ್ಥ್ಯದಲ್ಲಿ 5ನೇ ಸ್ಥಾನದಲ್ಲಿದ್ದೇವೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಎನ್ ಡಿಎ ಸರ್ಕಾರ 21000 ಕೋಟಿ ವೆಚ್ಚ ಮಾಡಲಿದೆ: ಯುಪಿಎ ಆಡಳಿತಾವಧಿಯ ಒಂದು ದಶಕದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಗೆ ಸರ್ಕಾರ ಕೇವಲ 6091 ಕೋಟಿ ರೂ. ವೆಚ್ಚ ಮಾಡಿತ್ತು. ಆದರೆ, ಎನ್ ಡಿಎ ಸರ್ಕಾರ ಈ ವರ್ಷವೇ ಬರೋಬ್ಬರಿ 21,000 ಕೋಟಿ ರೂ.ವೆಚ್ಚ ಮಾಡಲಿದೆ ಎಂದು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *