ರಾಯಚೂರು: ನಿನ್ನೆ ರಾತ್ರಿ ಕಿಡಿಗೇಡಿಗಳು ಮಸೀದಿಯೊಳಗೆ ಬಿಯರ್ ಬಾಟಲ್ ಎಸೆದು ಅಟ್ಟಹಾಸ ಮೆರೆದಿರುವ ಘಟನೆ ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಫಿರ್ದೋಸಿ ಮಸೀದಿಯಲ್ಲಿ ನಡೆದಿದೆ. ಫಿರ್ದೋಸಿ ಮಸೀದಿಯಲ್ಲಿ ಬಿಯರ್ ಬಾಟಲ್ ಒಡೆದು ಕಿಡಿಗೇಡಿಗಳು ದರ್ಪ ಮೆರೆದಿದ್ದು ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಮುಸ್ಲಿಂ ಸಮುದಾಯದ ಜನ ಸ್ಥಳದಲ್ಲಿ ಜಮಾಯಿಸಿದ್ದರು. ಸದ್ಯ ಇದೀಗ ಪೊಲೀಸರು ಈ ಘಟನೆ ಸಂಬಂಧ ಓರ್ವ ಅಪ್ರಾಪ್ತ ಸೇರಿ 7 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ತಡ ರಾತ್ರಿ ನಡೆಯುತ್ತಿದ್ದಂತೆ, ಕೂಡಲೇ ಕಿಡಿಗೇಡಿಗಳನ್ನ ಪತ್ತೆ ಹಚ್ಚಿ, ಕ್ರಮ ಕೈಗೊಳ್ಳುವಂತೆ ಜನರು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಅಧಿಕಾರಿಗಳು ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದ್ರು ಇನ್ನು ಘಟನೆ ಸಂಬಂಧ ಕೇಸ್ ದಾಖಲಾಗಿದ್ದು ಆರೋಪಿಗಳನ್ನ ಆದಷ್ಟು ಬೇಗ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಜನರು ಪ್ರತಿಭಟನೆ ನಿಲ್ಲಿಸಿದ್ದರು.
ಇದನ್ನೂ ಓದಿ: ರಾಜ್ಯದಲ್ಳಿ ಮಳೆ ಹೆಚ್ಚಾಗಿ 44,000 ಹೆಕ್ಟರ್ ಬೆಳೆ ಕೃಷಿ ಭೂಮಿಯಲ್ಲಿ ಹಾನಿಯಾಗಿದೆ: ಸಚಿವ ಕೃಷ್ಣ ಬೈರೇಗೌಡ
ಸದ್ಯ ಈಗ ಕಾರ್ಯಾಚರಣೆ ನಡೆಸಿ ಓರ್ವ ಅಪ್ರಾಪ್ತ ಸೇರಿ 7 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ರಾಯಚೂರು ಜಿಲ್ಲೆ ಸಿರವಾರ ಪೊಲೀಸರು ಸಾಗರ್, ಬಸವ, ವಿಜಯ್, ರಂಗನಾಥ್, ಸುರೇಶ್, ಸಾಬಯ್ಯ ಹಾಗೂ ಓರ್ವ ಆಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ನೋಡಿ: ಚೇಳೂರು : ಹಾಸ್ಟೆಲ್ ಸಂಖ್ಯೆ ಹೆಚ್ಚಿಸಿ – ವಿದ್ಯಾರ್ಥಿಗಳಿಂದ ಪತ್ರ ಚಳುವಳಿJanashakthi Media