ದಲಿತ ಯುವಕ ಮೇಲಿನ ಹಲ್ಲೆ ಖಂಡಿಸಿ ಡಿಹೆಚ್‌ಎಸ್ ರಾಜ್ಯದ್ಯಾಂತ ಪ್ರತಿಭಟನೆ

ರಾಮನಗರ: ಕನಕಪುರ ತಾಲೂಕು ಮಾಳಗಾಳು ದಲಿತ ಯುವಕ ಅನೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಆತನ ಕತ್ತನೇ ಕಡಿಯಲು ಪ್ರಯತ್ನಸಿ ಕೈ ಕಡಿದ ಅಮಾನುಷ ಕೃತ್ಯವನ್ನು ದಲಿತ ಹಕ್ಕುಗಳ ಸಮಿತಿ ತೀವ್ರವಾಗಿ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಅಇದೆ.

ದಲಿತರು ಸ್ವಾಭಿಮಾನದಿಂದ ತೆಲೆಎತ್ತಿ ಬದುಕುವುದು ಒಂದು ಸಾಮಾಜಿಕ ಸಂಗತಿಯಾಗಿದೆ. ಇದನ್ನು ಸಹಿಸದ ಜಾತಿವಾದಿಗಳು ಈ ದೌರ್ಜನ್ಯ ವೆಸಗಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಣ್ಣ ಎನ್, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಚ್.ಜಿ. ನಾಗಣ್ಣ, ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಮಾದೇಶ್ ಮತ್ತು ಜಿಲ್ಲಾ ಕಾರ್ಯದರ್ಶಿ ನಾಗರಾಜು. ಪಿ ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಷೇತ್ರದಲ್ಲಿ ನಡೆದಿರುವುದು ಗೃಹಮಂತ್ರಿಗಳು ಸ್ವತಃ ದಲಿತರಾದರು ದಲಿತ ಜನಾಂಗಕ್ಕೆ ರಕ್ಷಣೆ ನೀಡುವಲ್ಲಿ ವಿಫಲರಾಗಿರುವುದು ವಿಷಾದದ ಸಂಗತಿ ಎಂದು ಸಂಘಟನೆ ಆರೋಪಿಸಿದೆ. ಯುವಕ

ಈ ಕೃತ್ಯ ಎಸಗಿದ ರೌಡಿಶೀಟರ್ ಹರ್ಷ ಅಲಿಯಾಸ್ ಕೈಮಾ ಮತ್ತು ಕರುಣೇಶ್ ಅಲಿಯಾಸ್ ಕನ್ನು ಎಂಬ ಸಮಾಜ ಘಾತಕ ರೌಡಿಗಳನ್ನು ದೌರ್ಜನ್ಯ ತಡೆಕಾಯ್ದೆ ಅಡಿಯಲ್ಲಿ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ನದ್ದು ಹಾದಿ ತಪ್ಪಿದ ಯಾತ್ರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಬಂಡಾರಿ

ಕೈ ಕಳೆದುಕೊಂಡ ಅನೀಶ್‌ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಮಾಳಗಾಳು ಗ್ರಾಮದಲ್ಲಿ ಬಿಗುವಿನ ವಾತಾವರಣವನ್ನು ನಿವಾರಣೆ ಮಾಡಿ ಜನತೆಗೆ ರಕ್ಷಣೆ ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಹಾಗೂ ಗೃಹ ಸಚಿವರಿಗೆ ಡಿಎಚ್ಎಸ್ ಆಗ್ರಹಿಸಿದೆ.

ಇದನ್ನೂ ನೋಡಿ: ದೃಶ್ಯ ಮಾಧ್ಯಮಗಳಲ್ಲಿ ನಿರಂಜನ ರ ಕತೆ, ಕಾದಂಬರಿ – ಬಿ.ಸುರೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *