ಅತಿ ಹೆಚ್ಚು ಬೆಂಬಲದ ಅಗತ್ಯವಿರುವವರಿಗೆ ಬೆಂಬಲವನ್ನು ಸದ್ದಿಲ್ಲದೆ ಕುಗ್ಗಿಸುವ ಕಡಿತಗಳು

ಪ್ರಮುಖ ಸರ್ಕಾರಿ ಯೋಜನೆಗಳು ವೆಚ್ಚದಲ್ಲಿ ಗಮನಾರ್ಹವಾದ ಕಡಿತವನ್ನು ಕಂಡಿದ್ದು, ಸದ್ದಿಲ್ಲದೆ ಮಾಡಿರುವ ಈ ಕಡಿತಗಳು ಸಾಮಾಜಿಕ ಬೆಂಬಲದ ಸ್ವರೂಪವನ್ನೇ ಬದಲಿಸಿವೆ. ಈ ಕಾರ್ಯಕ್ರಮಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಸಮಾಜದ ಕೆಳಸ್ತರದವರು, ನೆರವಿನಲ್ಲಿ ಇಂತಹ ಕಡಿತದ ಪರಿಣಾಮಗಳನ್ನು ನಿಭಾಯಿಸಲು ಹೆಣಗಾಡುತ್ತಿದ್ದಾರೆ. ಬೆಂಬಲ

ಪ್ರಮುಖ ಯೋಜನೆಗಳಲ್ಲಿನ ಈ ಕೆಳಗಿನ ಕಡಿತಗಳು ಬೆಂಬಲದ ಅತಿ ಹೆಚ್ಚು ಅಗತ್ಯವಿರುವವರಿಗೆ ಬೆಂಬಲವನ್ನು ಕುಗ್ಗಿಸುವ ಗೊಂದಲದ ಪ್ರವೃತ್ತಿಯನ್ನು ಬಹಿರಂಗಪಡಿಸುತ್ತವೆ ಎಂದು ನವ ದೆಹಲಿಯ ಸೆಂಟರ್ ಫಾರ್ ಫಿನಾನ್ಶಿಯಲ್ ಅಕೌಂಟೆಬಿಲಿಟಿ (ಸಿಎಫ್‍ಎ)ಯಲ್ಲಿ ಡಾಟಾ ಅನಲಿಸ್ಟ್ (ದತ್ತಾಂಶ ವಿಶ್ಲೇಷಕ) ರಾಗಿರುವ ಪ್ರಯಾಗ್‍ ರಾಜ್. ‘ದಿವೈರ್’ನಲ್ಲಿ ಅವರ ಲೇಖನ Charts: The Modi Govt Has Reduced Spending For Almost All Major Social Sector Heads (ಜುಲೈ 25)ದಲ್ಲಿನ ಒಂದು ಪಟ್ಟಿ ಇಲ್ಲಿದೆ:

ಮನರೇಗ

ಒಂದೊಮ್ಮೆ ಗ್ರಾಮೀಣ ಉದ್ಯೋಗದ ಆಧಾರಸ್ತಂಭವಾಗಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಾಗಿನ ವೆಚ್ಚವು 2015-16 ರಲ್ಲಿನ ಒಟ್ಟು ವೆಚ್ಚದ 2.09% ರಿಂದ 2024-25 ರ ಬಜೆಟ್ ಅಂದಾಜುಗಳಲ್ಲಿ ಕೇವಲ 1.78% ಕ್ಕೆಇಳಿದಿದೆ.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿ ಆತ್ಮಹತ್ಯೆ ಮಾಡಿಕೊಂಡ ಹಿರಿಯ ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ

ಎನ್ಎಸ್ಎಪಿ( ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ)

ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲರ ಪಿಂಚಣಿ ಯೋಜನೆ, ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ ಮತ್ತು ಅನ್ನಪೂರ್ಣವನ್ನು ಒಳಗೊಂಡಿರುವ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವು 0.48% ರಿಂದ 0.20% ಕ್ಕೆ ನಿಧಿಯ ಕುಸಿತವನ್ನು ಕಂಡಿದೆ.

ಸಮಗ್ರ ಶಿಕ್ಷಾ ಅಭಿಯಾನ

SSA, RMSA ಮತ್ತು ಶಿಕ್ಷಕರ ಶಿಕ್ಷಣವನ್ನು ಏಕೀಕರಿಸಲು 2018 ರಲ್ಲಿ ಪ್ರಾರಂಭಿಸಲಾದ ಈ ಸಮಗ್ರ ಯೋಜನೆಯು 2015-16 ರಲ್ಲಿೊಟ್ಟು ಬಜೆಟ್‍ ಅಂದಾಜಿನ 1.46% ರಿಂದ 2024-25 ರಲ್ಲಿ 0.78% ಕ್ಕೆ ಕಡಿತಗೊಂಡಿದೆ.

ಪಿಎಂಪೋಶನ್

ಮಧ್ಯಾಹ್ನದ ಊಟದ ಯೋಜನೆಯನ್ನು ಬದಲಿಸುವ ಕಾರ್ಯಕ್ರಮದ ವೆಚ್ಚದಲ್ಲಿ 0.51% ರಿಂದ 0.26% ಕ್ಕೆ ತೀವ್ರ ಕಡಿತವಾಗಿದೆ.

ಪೋಷಕಾಂಶ ಆಧಾರಿತ ಸಬ್ಸಿಡಿ ಯೋಜನೆ

ರೈತರಿಗೆ ಸಬ್ಸಿಡಿ ರಸಗೊಬ್ಬರಗಳನ್ನು ಒದಗಿಸುವ ಈ ಯೋಜನೆಗೆ ಬಜೆಟ್ ಹಂಚಿಕೆಯು 1.23% ರಿಂದ 0.93% ಕ್ಕೆ ಕಡಿಮೆಯಾಗಿದೆ.

ಯೂರಿಯಾ ಸಬ್ಸಿಡಿ

ರೈತರಿಗೆ ನಿರ್ಣಾಯಕ ಅಂಶವಾಗಿದ್ದು, ವೆಚ್ಚವನ್ನು 2.82%  ರಿಂದ 2.47% ಕ್ಕೆ ಇಳಿಸಲಾಗಿದೆ.

ಬೆಳೆವಿಮೆ

ರೈತರ ಆತ್ಮಹತ್ಯೆ ದರಗಳು ಹೆಚ್ಚುತ್ತಿರುವಾಗ, ಈ ಬಹುಮುಖ್ಯ ಸುರಕ್ಷತಾ ಕ್ರಮವು 0.17% ರಿಂದ 0.30% ಕ್ಕೆ ತುಸು ಹೆಚ್ಚಳವನ್ನು ಕಂಡಿದೆ.

ಪ್ರಧಾನ ಮಂತ್ರಿ ಸ್ವಾಸ್ಥ್ಯ ಯೋಜನೆ

0.09% ರಿಂದ 0.05% ಕ್ಕೆ ಕಡಿತಗೊಳಿಸಲಾಗಿದೆ.

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ

ಹೆಚ್ಚುತ್ತಿರುವ ನಿರುದ್ಯೋಗ ದರಗಳ ಹೊರತಾಗಿಯೂ, ಈ ಯೋಜನೆಯ ಬಜೆಟ್ ಅನ್ನು 0.07% ರಿಂದ 0.05% ಕ್ಕೆ ಇಳಿಸಲಾಗಿದೆ. ಅದೇನೇ ಇರಲಿ, ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ.

ಪಿಎಂ ಕಿಸಾನ್

ರೈತ ಕುಟುಂಬಗಳಿಗೆ ಹಣಕಾಸಿನ ನೆರವು ನೀಡಲು 2019 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಗೆ ಹಂಚಿಕೆಯು 2019-20 ರಲ್ಲಿ ಒಟ್ಟು ಬಜೆಟ್‍ ವೆಚ್ಚದ 1.8% ರಿಂದ 2024-25 ರಲ್ಲಿ 1.2% ಕ್ಕೆ ಕುಸಿದಿದೆ.

 

ಆತಂಕ ಬೇಡ,

ನೀವು ನಮ್ಮ ಪ್ರಾರ್ಥನೆಗಳಲ್ಲಿ

ಸದಾ ಇರುತ್ತೀರಿ,

ನಮ್ಮ ಪೋಸ್ಟರುಗಳಲ್ಲಿಯೂ

ಕೃಪೆ;

ಸಜಿತ್‍ ಕುಮಾರ್

ಡೆಕ್ಕನ್‍ ಹೆರಾಲ್ಡ್

 

 

 ಇದನ್ನೂ ನೋಡಿ: ಫುಡ್ ಕ್ರಿಯೇಶನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಿರುಕುಳ ವಿರೋಧಿಸಿ ಕಾರ್ಮಿಕರ ಪ್ರತಿಭಟನೆJanashakthi Media

Donate Janashakthi Media

Leave a Reply

Your email address will not be published. Required fields are marked *