ನೀಟ್ ಕೋಚಿಂಗ್ ನೀಡುವ ಹೆಸರಿನಲ್ಲಿ ಹಣ ವಂಚನೆ; ಎಸ್‌ಎಫ್‌ಐ ಆಕ್ರೋಶ

ಬೆಂಗಳೂರು : ನೀಟ್ ಕೋಚಿಂಗ್ ನೀಡುವ ಹೆಸರಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ರೂ. 1 ಲಕ್ಷದ 30 ಸಾವಿರ ಹಣ ವಂಚಿಸಿರುವ ಘಟನೆ ನಡೆದಿದೆ. ಎಸ್ಎಫ್ಐ ಸಂಘಟನೆ ಇದನ್ನ ವಿರೋಧಿಸಿ ಹೋರಾಟ ನಡೆಸಿದ ನಂತರದಲ್ಲಿ ಹತ್ತಿರದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಮಮೂರ್ತಿನಗರ ಹತ್ತಿರದ #DSRAcademy ಹೆಸರಿನ ನೀಟ್ ಕೋಚಿಂಗ್ ಸೆಂಟರ್ ನಲ್ಲಿ ಕೋಚಿಂಗ್ ನೀಡುವ ಹೆಸರಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ರೂ. 1 ಲಕ್ಷದ 30 ಸಾವಿರ ಹಣವನ್ನು ಪಡೆದುಕೊಂಡಿದ್ದರು.

ಒಟ್ಟು 30 ವಿದ್ಯಾರ್ಥಿಗಳಿಂದ ಲಕ್ಷಾಂತರ ಹಣವನ್ನು ಪಡೆದು ವಿದ್ಯಾರ್ಥಿಗಳಿಗೆ ಕೋಚಿಂಗ್ ಕೊಡಲು ನಿರಾಕರಣೆ ಮಾಡಿ ಪಾಲಕರು ಬಂದು ಹಣವನ್ನು ಕೇಳಿದರೆ ಅದನ್ನು ಕೊಡಲಾಗುವುದಿಲ್ಲ ಎಂದು ಬೆದರಿಸಿದ್ದಾರೆ.

ಇದನ್ನು ಓದಿ : 14 ಗಂಟೆಗಳ ಕೆಲಸದ ದಿನ: ಐಟಿ ಉದ್ಯೋಗಿಗಳಿಂದ ವ್ಯಾಪಕ ಆಕ್ರೋಶ

ಪಾಲಕರು ಎಸ್ಎಫ್ಐ ಸಂಘಟನೆಯನ್ನು ಸಂಪರ್ಕಿಸಿದಾಗ ವಿದ್ಯಾರ್ಥಿ ಮುಖಂಡರು ಕೋಚಿಂಗ್ ಎದರುಗಡೆ ಹೋರಾಟ ಮಾಡಿ ಹತ್ತಿರದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಹಾಗೆಯೇ ಹಣ ಪಾವತಿ ಮಾಡುತ್ತೇವೆಂದು ಚೆಕ್ ನ್ನು ಕೊಡಿಸುವ ಪ್ರಯತ್ನ ಮಾಡಿದ್ದಾರೆ.

ನೀಟ್ ಎನ್ನುವುದೇ ಅಕ್ರಮ. ಇಂತಹ ಪರೀಕ್ಷೆಯ ಹೆಸರಿನಲ್ಲಿ ನೂರಾರು ಕೋಚಿಂಗ್ ಸೆಂಟರ್ ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಕೋಚಿಂಗ್ ಸೆಂಟರ್ ಗಳು ಮನಸೋ ಇಚ್ಛೆ ಶುಲ್ಕವನ್ನು ನಿಗಧಿ ಮಾಡಿ ಸರ್ಕಾರದ ಹಿಡಿತಕ್ಕೂ ಸಿಗದೇ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿವೆ.

ರಾಜ್ಯ ಸರ್ಕಾರ ನೀಟ್ ವಿರುದ್ಧ ನಿರ್ಣಯ ತೆಗೆದುಕೊಂಡಿರುವದನ್ನು ಸ್ವಾಗತಿಸುತ್ತಾ ಇಂತಹ ಕೋಚಿಂಗ್ ಸೆಂಟರ್ ಗಳನ್ನು ನಿಯಂತ್ರಣ ಮಾಡಬೇಕು. ಪಾಲಕರು ನೀಟ್ ಕೋಚಿಂಗ್ ಹೆಸರಿನಲ್ಲಿ ನಡೆಯುವ ಮಾಫಿಯಾಗಳಿಗೆ ಬಲಿಯಾಗಲಾರದಂತೆ ಜಾಗೃತ ವಹಿಸಬೇಕು ಎಂದು ಎಸ್‌ಎಫ್‌ಐ ತಿಳಿಸಿದೆ.

ಇದನ್ನು ನೋಡಿ : ನಮ್ಮ ಕಷ್ಟ ಸರ್ಕಾರಕ್ಕೆ ಅರ್ಥ ಆಗಲ್ವಾ? – ಗ್ರಾಪಂ ನೌಕರರ ಆಕ್ರೋಶ, 2ನೇ ದಿನಕ್ಕೆ ಕಾಲಿಟ್ಟ ಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *