ಬಜೆಟ್‌ನಲ್ಲಿ ತಾರತಮ್ಯ: ಸಂಸತ್‌ ಎದುರು ವಿಪಕ್ಷಗಳ ಪ್ರತಿಭಟನೆ

ನವದೆಹಲಿ: ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ತಾರತಮ್ಯ ಮಾಡಿದೆ ಎಂದು ಆರೋಪಿಸಿ ವಿಪಕ್ಷಗಳು ಜುಲೈ 24 ರಂದು  ಸಂಸತ್ತಿನ ಎದುರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷದ, ಎನ್‌ಸಿಪಿ, ಎಡಪಕ್ಷಗಳು, ಡಿಎಂಕೆ ನಾಯಕರು ಸೇರಿದಂ  ಸೇರಿದಂತೆ ಹಲವು  ಸಂಸದರು ಪ್ರತಿಭಟನೆ ನಡೆಸಿದರು.  ಸಂಸತ್ತಿನ ದ್ವಾರದಲ್ಲಿ  ‘ನಮಗೆ ಭಾರತ ಬಜೆಟ್ ಬೇಕು ಎನ್‌ಡಿಎ ಬಜೆಟ್ ಅಲ್ಲ’, ‘ಎನ್‌ಡಿಎಯಿಂದ ಬಜೆಟ್‌ನಲ್ಲಿ ಭಾರತಕ್ಕೆ ದ್ರೋಹ’ ಎಂಬ ಫಲಕಗಳನ್ನು ಹಿಡಿದು ಪ್ರತಿಭಟಿಸಿದರು.

ಈ ಕುರಿತು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ಈ ಬಜೆಟ್‌ ಜನ ವಿರೋಧಿಯಾಗಿದೆ, ಇದರಿಂದ ಯಾರಿಗೂ ನ್ಯಾಯ ದೊರೆತಿಲ್ಲ. ವಿಶೇಷ ಪ್ಯಾಕೇಜ್‌ ಬಗ್ಗೆ ಹೇಳಿದರೇ ಹೊರತು, ರಾಜ್ಯಗಳಿಗೆ ನೀಡುವ ವಿಶೇಷ ಸ್ಥಾನಮಾನದ ಬಗ್ಗೆ ಉಲ್ಲೇಖಿಸಲೇ ಇಲ್ಲ. ಇದೊಂದು ವಂಚನೆಯ ಬಜೆಟ್ ಆಗಿದ್ದು, ಜನರಿಗೆ ಅನ್ಯಾಯವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಒಕ್ಕೂಟ ಬಜೆಟ್ : ಒಂದು ಪ್ರತಿಗಾಮಿ ಸಂಕುಚನಕಾರಿ ಬಜೆಟ್ – ಸಿಪಿಐ(ಎಂ)

‘ಒಕ್ಕೂಟ ಸರ್ಕಾರವನ್ನು ಉಳಿಸಿಕೊಳ್ಳಲು ಕೇಂದ್ರ ಬಜೆಟ್‌ ಮೂಲಕ ಎಲ್ಲಾ ತತ್ವಗಳನ್ನು ಉಲ್ಲಂಘಿಸಿದೆ. ಸರ್ಕಾರವನ್ನು ರಕ್ಷಿಸಿಕೊಳ್ಳುವುದು ಬಜೆಟ್‌ನ ಉದ್ದೇಶವಾಗಿತ್ತು. ‌ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಅನುದಾನ ನೀಡುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ ಇತರ ರಾಜ್ಯಗಳಿಗೂ ನ್ಯಾಯ ಸಿಗಬೇಕು. ಅದಕ್ಕಾಗಿಯೇ ನಾವು ಈ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್‌ ಹೇಳಿದರು.

‘ಬಜೆಟ್‌ನಲ್ಲಿ ಯುವಕರಿಗೆ ಸುಳ್ಳು ಭರವಸೆಗಳನ್ನು ನೀಡಲಾಗಿದೆ’ ಎಂದು ಎಸ್‌ಪಿ ಸಂಸದೆ ಜಯಾ ಬಚ್ಚನ್ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ನೋಡಿ: ಬಲವಂತದ ಭೂಸ್ವಾಧೀನ ವಿರೋಧಿಸಿ ಹೋರಾಟ : ಸಿಎಂ ಮನೆಗೆ ಹೊರಟಿದ್ದ ರೈತರ ಮೇಲೆ ಪೋಲಿಸ್ ದೌರ್ಜನ್ಯJanashakthi Media

Donate Janashakthi Media

Leave a Reply

Your email address will not be published. Required fields are marked *