ಮುಡಾ ಹಗರಣ : ಭ್ರಷ್ಟಾಚಾರದಲ್ಲಿ ಎಷ್ಟೇ ದೊಡ್ಡವರಾಗಿದ್ದರೂ ಬಿಡುವ ಪ್ರಶ್ನೆ ಇಲ್ಲ – ಬಿಕೆ ಹರಿಪ್ರಸಾದ್

ಬೆಂಗಳೂರು: ಭ್ರಷ್ಟಾಚಾರದ ವಿಚಾರದಲ್ಲಿ ಝಿರೋ ಟಾಲರೆನ್ಸ್ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಹಾಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸೈಟ್​ ಹಂಚಿಕೆಯ ಹಗರಣದಲ್ಲಿ  ಯಾರು ಎಷ್ಟೇ ದೊಡ್ಡವರಾಗಿದ್ದರೂ ಕ್ರಮ ಆಗಬೇಕು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಬಿಕೆ ಹರಿಪ್ರಸಾದ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಮುಡಾ ಹಾಗೂ ವಾಲ್ಮೀಕಿ ಹಗರಣದ ವಿಚಾರವಾಗಿ, ಈ ಎರಡು ಹಗರಣದ ಬಗ್ಗೆ ನಾನು ಹೈಕಾಮಂಡ್‌ ಜೊತೆ ಚರ್ಚೆ ನಡೆಸಿದ್ದೇನೆ ಎಂದರು. ಈ ವಿಚಾರವಾಗಿ ಸಿದ್ದರಾಮಯ್ಯ ಸೇರಿ ಹಲವು ಮಂತ್ರಿ, ಶಾಸಕರು ಹಾಗೂ ಕಾಂಗ್ರೆಸ್ ನಾಯಕರು ಹಗರಣ ಬಗ್ಗೆ ಹಲವಾರು ರೀತಿಯ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಸಿಎಂ , ಡಿಸಿಎಂ ಬಹಳ ದೊಡ್ಡ ನಾಯಕರು ಅವರಿಗೆಲ್ಲ ಸಲಹೆ ನೀಡಲು ಆಗತ್ತಾ ನಾವು? ಮುಡಾ ಹಗರಣ, ವಾಲ್ಮೀಕಿ ಹಗರಣದಲ್ಲಿ ದನಿ ಎತ್ತಬೇಕು. ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮೆಲ್ಲರ ನಾಯಕ ರಾಹುಲ್ ಝೀರೋ ಟಾಲರೆನ್ಸ್ ಅಂತ ಹೇಳಿದ್ದಾರೆ. ಅದು ಯಾರೇ ಎಷ್ಟೇ ದೊಡ್ಡವರಿದ್ದರೂ ಸಹ ಕ್ರಮ ಆಗಬೇಕು ಎಂದು ಮಾರ್ವಿಕವಾಗಿ ಹೇಳಿದ್ದಾರೆ.

ಇದನ್ನು ಓದಿ : ಪರವಾನಗಿ ರದ್ದಾದ 14 ಉತ್ಪನ್ನಗಳ ಮಾರಾಟ ಸ್ಥಗಿತ: ಸುಪ್ರೀಂ ಕೋರ್ಟ್​ಗೆ ಪತಂಜಲಿ ಹೇಳಿಕೆ

ಬಡವರಿಗೆ ಜಾಗ ಕೊಡುತ್ತೇವೆ ಅಂದ್ರೆ ಚರ್ಚೆ ಆಗುತ್ತೆ, ಇಲ್ಲದಿದ್ದರೆ ಇಲ್ಲ/ ಮೈಸೂರು ಮಾತ್ರವಲ್ಲ, ಬೆಂಗಳೂರಿನಲ್ಲಿ ಎಷ್ಟೆಲ್ಲ ಡಿನೋಟಿಫೈ ಆಗಿದೆ. ಯಾರ ಯಾರ ಕಾಲದಲ್ಲಿ ಎಷ್ಟೆಲ್ಲ ಡಿನೋಟಿಪೈ ಆಗಿದೆ ನೋಡಿ. ಬೆಂಗಳೂರು ಪ್ಯಾಲೇಸ್​ಗೆ ಜಾಗ ಕೊಡಲು ಎಷ್ಟು ವರ್ಷ ಆಗ್ತಿದೆ. ದೊಡ್ಡವರಿಗೆ ಒಂದು ಕಾನೂನು ಬಡವರಿಗೆ ಇನ್ನೊಂದು ಕಾನೂನು. ಎಲ್ಲರಿಗೂ ಒಂದೇ ಕಾನೂನು ಇರಬೇಕು. 135 ಸೀಟು ಬಂದಿದೆ ಅಂದ್ರೆ, ಅದಕ್ಕೆ ದುರ್ಬಲ ವರ್ಗದವರೇ ಕಾರಣ. SC, ST, ಅಲ್ಪಸಂಖ್ಯಾತರಿಮದಲೇ ಕಾಂಗ್ರೆಸ್​ಗೆ ಹೆಚ್ಚು ಮತ ಬಂದಿದೆ. ದುರ್ಬಲ ವರ್ಗದವರಿಗೆ ಅನ್ಯಾಯ ಆಗಬಾರದು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ಗೆ ಕಿವಿ ಮಾತು ಹೇಳಿದರು.

ವಾಲ್ಮೀಕಿ ನಿಗಮದಲ್ಲಿ ಯಾರದ್ದೇ ತಪ್ಪಿದ್ದರೂ ಕ್ರಮ ಆಗಬೇಕ. ಇದರಲ್ಲಿ ವಿರೋಧ ಪಕ್ಷಗಳು ವಿಫಲವಾದ್ರೂ ಸಹ ನಾವು ಬಿಡುವುದಿಲ್ಲ. ಸಮುದಾಯಕ್ಕೆ ಅನ್ಯಾಯ ಆಗಬಾರದು. ವಾಲ್ಮೀಕಿ ಸಮಾಜ ಮುಂದೆ ಬರುವುದೇ ಕಷ್ಟ, ಎಂದು ಸಮುದಾಯಕ್ಕೆ ಅನ್ಯಾಯ ಆಗುತ್ತಿದ್ರೆ ಸಹಿಸಲು ಸಾಧ್ಯವಿಲ್ಲ. ಸಾಕ್ಷಿ ಸಮೇತ ತಪ್ಪು ಹೊರ ಬಂದರೆ ನಾವೂ ಸಹ ಚರ್ಚೆ ಮಾಡಲು ತಯಾರಿದ್ದೇವೆ. ಸಾಕ್ಷಿ ಸಮೇತ ಹೊರ ಬರಬೇಕು. ವಾಲ್ಮೀಕಿ ಸಮುದಾಯ ಸೇರಿ ಯಾವುದೇ ದುರ್ಬಲ ವರ್ಗಕ್ಕೆ ಅನ್ಯಾಯ ಆಗಿದ್ರೆ ವಿರೋಧ ಪಕ್ಷದವರಿಗಿಂತ ಹೆಚ್ಚು ನಾವೇ ಧ್ವನಿ ಎತ್ತುತ್ತೇವೆ. ಬಹಳ ಗಂಭೀರ ಆಪಾದನೆ ಇದು. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ವಿಚಾರಣೆ ಪಾರದರ್ಶಕವಾಗಿ ನಡೆಯಬೇಕು ಎಂದು ಹೇಳಿದರು.

ಇದನ್ನು ನೋಡಿ : ರೈಲು ಚಾಲಕರಿಗೆ ವಿಶ್ರಾಂತಿ ಇಲ್ಲ! ನಿದ್ದೆ ಇಲ್ಲ!! ಹಾಗಾಗಿಯೇ ಅಪಘಾತಗಳು ಹೆಚ್ಚಾಗುತ್ತಿವೆ!!! Janashakthi Media

Donate Janashakthi Media

Leave a Reply

Your email address will not be published. Required fields are marked *