ಬೆಂಗಳೂರು: ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೂರು ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ.
ಬಿಎಂಟಿಸಿಯ ನಾನ್ ಎಸಿ ಬಸ್ಗಳು 1/7/2024 ರಿಂದ ಹೊಸ ಮಾರ್ಗದಲ್ಲಿ ಸಂಚಾರ ನಡೆಸಲಿವೆ ಎಂದು ಬಿಎಂಟಿಸಿ ಸಂಸ್ಥೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪ್ರಯಾಣಿಕರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಚಕ್ರ-1, ಚಕ್ರ-1ಎ, 225-ಎಫ್ ಎಂಂದು ಮಾರ್ಗವನ್ನು ವಿಭಾಗ ಮಾಡಲಾಗಿದೆ. ಈ ಮಾರ್ಗದ ಬಸ್ಗಳು ನೆಲಮಂಗಲ-ನೆಲಮಂಗಲವನ್ನು ವಿವಿಧ ಮಾರ್ಗದ ಮೂಲಕ, ಜಾಲಹಳ್ಳಿ ಕ್ರಾಸ್-ನೆಲಮಂಗಲವನ್ನು ಸಂಪರ್ಕ ಕಲ್ಪಿಸುತ್ತಿವೆ.
ಚಕ್ರ-1ಎ ಮಾರ್ಗದ ಬಸ್ ನೆಲಮಂಗಲ-ನೆಲಮಂಗಲ ನಡುವೆ ಸಂಚಾರ ನಡೆಸಲಿವೆ. 1 ಬಸ್ 9 ಟ್ರಿಪ್ ಸಂಚಾರ ನಡೆಸಲಿದೆ. ಈ ಬಸ್ ಬಸವನಹಳ್ಳಿ, ಬೊಮ್ಮಶೆಟ್ಟಿಹಳ್ಳಿ ಕ್ರಾಸ್, ಹಸ್ಕೂರು ಕ್ರಾಸ್, ಹೊನ್ನಸಂದ್ರ ಕ್ರಾಸ್, ನಾಗನೂರು ಕ್ರಾಸ್, ನಾಗನೂರು, ನಂದರಾಮಪಾಳ್ಯ, ಬಿನ್ನಿಮಂಗಲ ಮಾರ್ಗದಲ್ಲಿ ಸಂಚಾರ ನಡೆಸಲಿದೆ.
ಚಕ್ರ-2ಎ ಮಾರ್ಗ ಬಸ್. ನೆಲಮಂಗಲ-ನೆಲಮಂಗಲ ನಡುವೆ ಸಂಚಾರ ನಡೆಸಲಿದೆ. 1 ಬಸ್ ಈ ಮಾರ್ಗದಲ್ಲಿ 9 ಟ್ರಿಪ್ ಸಂಚಾರ ನಡೆಸಲಿದೆ. ಈ ಬಸ್ ಬಿನ್ನಿಮಂಗಲ, ನಂದರಾಮಪಾಳ್ಯ, ನಾಗನೂರು, ನಾಗನೂರು ಕ್ರಾಸ್, ಹೊನ್ನಸಂದ್ರ ಕ್ರಾಸ್, ಹಸ್ಕೂರು ಕ್ರಾಸ್, ಬೊಮ್ಮಶೆಟ್ಟಿಹಳ್ಳಿ ಕ್ರಾಸ್, ಬಸವನಹಳ್ಳಿ ಮೂಲಕ ಸಂಚಾರ ನಡೆಸುತ್ತದೆ.
ಇದನ್ನು ಓದಿ : ಅಶ್ಲೀಲ ವಿಡೀಯೋಗಳ ಪೆನ್ಡ್ರೈವ್ ಗಳನ್ನು ಯಾರು ಹಂಚಿದ್ದಾರೆಂದು ಗೊತ್ತಿದೆ : ಪರಮೇಶ್ವರ್ ಮಾರ್ಮಿಕ ಹೇಳಿಕೆ
225-ಎಫ್ ಬಸ್. ಜಾಲಹಳ್ಳಿ ಕ್ರಾಸ್-ನೆಲಮಂಗಲ ನಡುವೆ ಸಂಚಾರ ನಡೆಸಲಿದೆ. ಈ ಮಾರ್ಗದಲ್ಲಿ 1 ಬಸ್ 8 ಟ್ರಿಪ್ ಸಂಚಾರ ನಡೆಸಲಿದೆ. ಮಾರಿಷನ್ ಫ್ಯಾಕ್ಟರಿ, ಮಾದನಾಯಕನಹಳ್ಳಿ, ಮಾಕಳಿ, ನಾಗನೂರು ಕ್ರಾಸ್, ನಾಗನೂರು, ನಂದರಾಮನಪಾಳ್ಯ, ಬಿನ್ನಿಮಂಗಲ ಮೂಲಕ ಸಂಚಾರ ನಡೆಸಲಿದೆ.
ಚಕ್ರ-1 ಮಾರ್ಗದ ಬಸ್ ನೆಲಮಂಗಲದಿಂದ 7.30, 8.30, 9.35, 11.05, 12.05, 13.30, 14.30, 15.55 ಮತ್ತು 17 ಗಂಟೆಗೆ ಹೊರಡಲಿದೆ.
ಚಕ್ರ-1ಎ ಮಾರ್ಗದ ಬಸ್ ನೆಲಮಂಗಲದಿಂದ 8, 9, 10.05, 11.35, 12.35, 14.00, 15.00, 16.30, 17.35ಕ್ಕೆ ಹೊರಡಲಿದೆ.
225-ಎಫ್ ಬಸ್ ಜಾಲಹಳ್ಳಿ ಕ್ರಾಸ್ನಿಂದ 10.10, 12.45, 15.20 ಮತ್ತು 17.40ಕ್ಕೆ ಹೊರಡಲಿದೆ. ನೆಮಲಂಗಲದಿಂದ 09.05, 11.40, 14.15, 16.35ಕ್ಕೆ ಹೊರಡಲಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಯಾಣಿಕರ ಬೇಡಿಕೆಯಂತೆ ಜೂನ್ 22ರಂದು ಹೊಸ ಮಾರ್ಗವನ್ನು ಪರಿಚಯಿಸಿತ್ತು. ಬಸ್ ಹೊರಡುವ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಒಂದು ಮಾರ್ಗದ ಬಸ್ 302-ಕೆ ಶಿವಾಜಿನಗರ- ಕೆ ಚನ್ನಸಂದ್ರ ನಡುವೆ ಸಂಚಾರ ನಡೆಸುತ್ತದೆ. ಈ ಮಾರ್ಗದ ಬಸ್ ಐಟಿಸಿ, ಸೇವಾನಗರ, ಬಾಣಸವಾಡಿ, ಹೊರಮಾವು, ಜಯಂತಿ ನಗರ, ಕಲ್ಕೆರೆ ಮೂಲಕ ಸಂಚಾರ ನಡೆಸುತ್ತದೆ.
2ನೇ ಮಾರ್ಗ 401-ಎನ್. ಬನಶಂಕರಿ ಬಸ್ ನಿಲ್ದಾಣ- ಮಲ್ಲೇಶ್ವರ ಬಸ್ ನಿಲ್ದಾಣ 18ನೇ ಕ್ರಾಸ್. ಈ ಮಾರ್ಗದ ಬಸ್ ವಿಜಯನಗರ, ಮಾಗಡಿ ರಸ್ತೆ ಟೋಲ್ಗೇಟ್, ಇಎಸ್ಐ, ನವರಂಗ್ ಮೂಲಕ ಸಂಚಾರ ನಡೆಸುತ್ತದೆ.
ಇದನ್ನು ನೋಡಿ : ಸೌಹಾರ್ದತೆಯ ತಾಣ, ಮೊಹಮ್ಮದ್ ಗವಾನ್ ಮದರಸಾ Janashakthi Media