ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಜೈಲಿನಿಂದ ಬಿಡುಗಡೆ

ಯು.ಎಸ್  ಬೇಹುಗಾರಿಕೆ ಆರೋಪ ತಪ್ಪೊಪ್ಪಿಗೆ ನಂತರ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಯುನೈಟೆಡ್ ಕಿಂಗ್‌ಡಮ್‌ನ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬೇಹುಗಾರಿಕೆ ಕಾನೂನನ್ನು ಉಲ್ಲಂಘಿಸಿದ ಏಕೈಕ ಆರೋಪ ಒಪ್ಪಿಕೊಂಡ ನಂತರ ಆಸ್ಟ್ರೇಲಿಯಾಕ್ಕೆ ಮನೆಗೆ ಪ್ರಯಾಣಿಸಿದರು.

ಯು.ಎಸ್ ಅಧೀನದಲ್ಲಿರುವ ಆಸ್ಟ್ರೇಲಿಯಾ ಬಳಿ ಇರುವ ಉತ್ತರ ಮರಿಯಾನಾ ದ್ವೀಪಗಳ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರಕಾರ, 52 ವರ್ಷದ ಅಸ್ಸಾಂಜೆ ರಹಸ್ಯ ಯುಎಸ್‌ ರಾಷ್ಟ್ರೀಯ ರಕ್ಷಣಾ ದಾಖಲೆಗಳನ್ನು ಪಡೆಯಲು ಮತ್ತು ಬಹಿರಂಗಪಡಿಸಲು ಪಿತೂರಿಯ ಆರೋಪ  ಒಪ್ಪಿಕೊಂಡಿದ್ದಾರೆ.

ಅಸ್ಸಾಂಜೆಯನ್ನು ಸೋಮವಾರ ಯುಕೆಯ ಹೈ-ಸೆಕ್ಯುರಿಟಿ ಬೆಲ್ಮಾರ್ಷ್ ಜೈಲಿನಿಂದ ಬಿಡುಗಡೆ ಮಾಡಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ಅಸ್ಸಾಂಜೆ ದೇಶದಿಂದ ಹಾರಿಹೋದರು. ಬುಧವಾರ ಬೆಳಗ್ಗೆ 9 ಗಂಟೆಗೆ (ಮಂಗಳವಾರ 23:00 GMT) US ಪೆಸಿಫಿಕ್ ಪ್ರಾಂತ್ಯದ ಸೈಪಾನ್‌ನಲ್ಲಿರುವ ನ್ಯಾಯಾಲಯದಲ್ಲಿ ಅಸ್ಸಾಂಜೆ ಹಾಜರಾದರು. ಜೂಲಿಯನ್ ಅಸ್ಸಾಂಜೆ ಸ್ವತಂತ್ರರಾಗಿದ್ದಾರೆ, ”ಎಂದು ವಿಕಿಲೀಕ್ಸ್ ತನ್ನ ಎಕ್ಸ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.

“1901 ದಿನಗಳನ್ನು ಕಳೆದ ನಂತರ ಅಸ್ಸಾಂಜೆ ಜೂನ್ 24 ರ ಬೆಳಿಗ್ಗೆ ಬೆಲ್ಮಾರ್ಷ್ ಗರಿಷ್ಠ ಭದ್ರತಾ ಜೈಲಿನಿಂದ ಹೊರಟರು.  ಲಂಡನ್‌ನ ಹೈಕೋರ್ಟ್‌ನಿಂದ ಅವರಿಗೆ ಜಾಮೀನು ನೀಡಲಾಯಿತು. ಮಧ್ಯಾಹ್ನದ ಹೊತ್ತಿಗೆ ಸ್ಟಾನ್‌ಸ್ಟೆಡ್ ವಿಮಾನ ನಿಲ್ದಾಣದಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ಅಲ್ಲಿ ವಿಮಾನವನ್ನುಏರಿದ ಅಸ್ಸಾಂಜೆ ಯುಕೆಗೆ ತೆರಳಿದರು.

ವಿಕಿಲೀಕ್ಸ್ X ನಲ್ಲಿ ಪೋಸ್ಟ್ ಮಾಡಿದ ವಿಡೀಯೊದಲ್ಲಿ ಅಸ್ಸಾಂಜೆ ನೀಲಿ ಶರ್ಟ್ ಮತ್ತು ಜೀನ್ಸ್ ಧರಿಸಿ ಖಾಸಗಿ ಜೆಟ್ ಹತ್ತುವ ಮೊದಲು ದಾಖಲೆಗೆ ಸಹಿ ಹಾಕುವ ದೃಶ್ಯವಿದೆ. ವಿಚಾರಣೆಯ ನಂತರ ಅವರು ಆಸ್ಟ್ರೇಲಿಯಾಕ್ಕೆ ಹಿಂತಿರುಗುತ್ತಾರೆ ಎಂದು ವಿಕಿಲೀಕ್ಸ್ ಹೇಳಿಕೆಯು ಸೈಪನ್‌ನಲ್ಲಿನ ವಿಚಾರಣೆಯನ್ನು ಉಲ್ಲೇಖಿಸಿದೆ.

ವಿಕಿಲೀಕ್ಸ್ ಸಂಸ್ಥಾಪಕನನ್ನು ಯುಎಸ್ ಭೂಪ್ರದೇಶಕ್ಕೆ ಹಾರಿಸುವ ಮೊದಲು ಇಂಧನ ತುಂಬುವುದಕ್ಕಾಗಿ ಅಸ್ಸಾಂಜೆ ಅವರನ್ನು ಹೊತ್ತ ವಿಮಾನ ಮಂಗಳವಾರ ಬ್ಯಾಂಕಾಕ್‌ನಲ್ಲಿ ಇಳಿಯಿತು.

“ಜೂಲಿಯನ್ ಈಸ್ ಫ್ರೀ!!!!”, ಬೆಂಬಲಿಗರಿಗೆ ಧನ್ಯವಾದ ಹೇಳಿ ಅಸ್ಸಾಂಜೆ ಪತ್ನಿ ಸ್ಟೆಲ್ಲಾ X ನಲ್ಲಿ ಬರೆದುಕೊಂಡಿದ್ದಾರೆ. ” ನಿಮಗೆ ನಮ್ಮ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪದಗಳಿಂದ ಸಾಧ್ಯವಿಲ್ಲ – ಹೌದು, ನೀವು, ಇದನ್ನು ನನಸಾಗಿಸಲು ವರ್ಷಗಳಿಂದ ನನಗೆ ಬೆಂಬಲ ನೀಡಿದ್ದೀರಿ” ಎಂದಿದ್ದಾರೆ.

2006 ರಲ್ಲಿ ವಿಕಿಲೀಕ್ಸ್‌ನ ಪ್ರಾರಂಭದೊಂದಿಗೆ ಅಸ್ಸಾಂಜೆ ಪ್ರಾಮುಖ್ಯತೆಯನ್ನು ಪಡೆದರು.  ಅತಿ ರಹಸ್ಯ ಡಾಕ್ಯುಮೆಂಟ್‌ಗಳು ಮತ್ತು ವಿಡೀಯೊಗಳನ್ನು ಅನಾಮಧೇಯವಾಗಿ ಸಲ್ಲಿಸಲು ಆನ್‌ಲೈನ್ ‘ವಿಸ್ಲ್‌ಬ್ಲೋವರ್’ ವೇದಿಕೆಯನ್ನು ರಚಿಸಿದರು.

ಬಾಗ್ದಾದ್‌ನಲ್ಲಿ ಇಬ್ಬರು ಪತ್ರಕರ್ತರು ಸೇರಿದಂತೆ ಹನ್ನೆರಡು ಜನರನ್ನು ಕೊಂದ   US Apache ಹೆಲಿಕಾಪ್ಟರ್ ದಾಳಿಯ ದೃಶ್ಯಗಳು, ವೇದಿಕೆಯ ಪ್ರತಿಷ್ಠೆಯನ್ನು ಹೆಚ್ಚಿಸಿತು. 2010 ರಲ್ಲಿ ಅಫ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿನ ಯುದ್ಧಗಳ ಕುರಿತು ಲಕ್ಷಾಂತರ ಅತಿ ರಹಸ್ಯ ಯುಎಸ್‌ ರಾಜತಾಂತ್ರಿಕ ಕೇಬಲ್‌ಗಳು, ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಅದರ ಖ್ಯಾತಿಯನ್ನು ಭದ್ರಪಡಿಸಿದವು. ‘ಪ್ರಬಲರನ್ನು ಹೊಣೆಗಾರರನ್ನಾಗಿಸುವ’ ವಿಕಿಲೀಕ್ಸ್ ಅನೇಕ ದೇಶಗಳ ಬಗ್ಗೆ ವಿಷಯವನ್ನು ಪ್ರಕಟಿಸಿತು, ಆದರೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಸಮಯದಲ್ಲಿ ಯುಎಸ್, 2019 ರಲ್ಲಿ ಬೇಹುಗಾರಿಕೆ ಕಾಯಿದೆಯನ್ನು ಉಲ್ಲಂಘಿಸಿದ 17 ಆರೋಪಗಳನ್ನು ಅವರ ಮೇಲೆ ಹೊರಿಸಲಾಯಿತು.

ವಿಕಿಲೀಕ್ಸ್‌ಗೆ ಅತಿ ರಹಸ್ಯ ದಾಖಲಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ಏಳು ವರ್ಷಗಳ ಕಾಲ ಜೈಲಿನಲ್ಲಿದ್ದ ಮಾಜಿ ಸೇನಾ ಗುಪ್ತಚರ ವಿಶ್ಲೇಷಕರಾದ ಚೆಲ್ಸಿಯಾ ಮ್ಯಾನಿಂಗ್ ಅವರೊಂದಿಗೆ ಅವರು ಪಿತೂರಿ ನಡೆಸಿದ್ದರು ಎಂದು ಯುಎಸ್ ವಕೀಲರು ವಾದಿಸಿದರು. 2017 ರಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಶಿಕ್ಷೆಯನ್ನು ಕಡಿಮೆಗೊಳಿಸಿದಾಗ ಅವರು ಬಿಡುಗಡೆಯಾದರು.

ಈ ಆರೋಪಗಳು ಆಕ್ರೋಶಕ್ಕೆ ಕಾರಣವಾಯಿತು.  ಮಾಹಿತಿಯನ್ನು ಕದಿಯುವ ಅಥವಾ ಸೋರಿಕೆ ಮಾಡುವ ಸರ್ಕಾರಿ ನೌಕರರ ವಿರುದ್ಧ ಸಾಮಾನ್ಯವಾಗಿ ಬಳಸುವ ಆರೋಪಗಳನ್ನು, ವಿಕಿಲೀಕ್ಸ್‌ನ ಪ್ರಕಾಶಕ ಮತ್ತು ಮುಖ್ಯ ಸಂಪಾದಕರಾಗಿ  ಅವರು ಎದುರಿಸಬಾರದು ಎಂದು ಅಸ್ಸಾಂಜೆ ಬೆಂಬಲಿಗರು ವಾದಿಸಿದರು. ಪತ್ರಿಕಾ ಸ್ವಾತಂತ್ರ್ಯದ ವಕೀಲರು, ಏತನ್ಮಧ್ಯೆ, ಅಸ್ಸಾಂಜೆ ವಿರುದ್ಧ ಕ್ರಿಮಿನಲ್ ಆರೋಪ ಹೊರಿಸುವುದು ವಾಕ್ ಸ್ವಾತಂತ್ರ್ಯಕ್ಕೆ ಬೆದರಿಕೆಯಾಗಿದೆ ಎಂದು ವಾದಿಸಿದರು.

“ವಿಕಿಲೀಕ್ಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಅದ್ಭುತ ಕಥೆಗಳನ್ನು ಪ್ರಕಟಿಸಿತು, ಅವರ ಕ್ರಿಯೆಗಳಿಗೆ ಪ್ರಬಲರನ್ನು ಹೊಣೆಗಾರರನ್ನಾಗಿ ಮಾಡುತ್ತದೆ” ಎಂದು ವಿಕಿಲೀಕ್ಸ್ ತನ್ನ ಹೇಳಿಕೆಯಲ್ಲಿ ಪ್ರಕಟಿಸಿತು.

“ಮುಖ್ಯ ಸಂಪಾದಕರಾಗಿ, ಜೂಲಿಯನ್ ಈ ತತ್ವಗಳಿಗಾಗಿ ಮತ್ತು ಮಾಹಿತಿ ಪಡೆಯುವ ಜನರ ಹಕ್ಕಿಗಾಗಿ ಗಂಭೀರ ಬೆಲೆ ತೆತ್ತರು.. ಅವರು ಆಸ್ಟ್ರೇಲಿಯಕ್ಕೆ ಹಿಂದಿರುಗುತ್ತಿದ್ದಂತೆ, ತಮ್ಮ ಬೆಂಬಲಕ್ಕೆ ನಿಂತ, ತಮಗಾಗಿ ಹೋರಾಡಿದ ಮತ್ತು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಸಂಪೂರ್ಣವಾಗಿ ಬದ್ಧರಾಗಿರುವ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದ್ದಾರೆ.

 

 

Donate Janashakthi Media

Leave a Reply

Your email address will not be published. Required fields are marked *