ಜನತೆ ಮೇಲೆ ಬೆಲೆ ಏರಿಕೆ ಬರೆ: ಅಶ್ವತ್ಥನಾರಾಯಣ್

ಬೆಂಗಳೂರು: ಲೋಕಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯನವರು ರಾಜ್ಯದ ಜನತೆಯ ಮೇಲೆ ಬೆಲೆ ಏರಿಕೆಯ ಬರೆಯನ್ನು ಹಾಕಲು ಹೊರಟಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದ ಜನರ ವಿರುದ್ಧ ವಿಷ ಕಾರುವ, ದ್ವೇಷ ಸಾಧಿಸುವ ಹಾದಿಗೆ ಸಿದ್ದರಾಮಯ್ಯನವರು ಹೊರಟಿದ್ದಾರೆ ಎಂದು ಟೀಕಿಸಿದರು. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದರು. ಪೆಟ್ರೋಲ್- ಡೀಸೆಲ್ ಬೆಲೆ ಏರಿಸಿದರು. ವಿದ್ಯುತ್ ದರ ಏರಿಸಿದ್ದಾರೆ. ಇವತ್ತು 10 ಮಾದರಿಯ ಹಾಲಿಗೆ ಪ್ರತಿ ಲೀಟರ್‍ಗೆ ಎರಡು ರೂ. ದರ ಹೆಚ್ಚಿಸಿದ್ದಾರೆ ಎಂದು ಆಕ್ಷೇಪಿಸಿದರು.ಜನತೆ 

ಗ್ರಾಹಕರಿಗೆ ದರ ಏರಿಸಿದ್ದಾರೆ. ಈ ಹಾಲಿನ ಹೆಚ್ಚುವರಿ ದರವನ್ನು ರೈತರಿಗೆ ನೀಡುವಿರಾ ಎಂದು ಸಿದ್ದರಾಮಯ್ಯನವರು ಸ್ಪಷ್ಟಪಡಿಸಲಿ ಎಂದು ಅವರು ಒತ್ತಾಯಿಸಿದರು. 2 ರೂಪಾಯಿಯನ್ನು ನೇರವಾಗಿ ರೈತರಿಗೆ ಕೊಡುತ್ತೀರಾ ಎಂಬ ಬಗ್ಗೆ ರಾಜ್ಯ ಸರಕಾರ ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ : ಹಾಲಿನ ದರ ಹೆಚ್ಚಳ ಹಿಂಪಡೆಯುವಂತೆ ವಿಪಕ್ಷ ನಾಯಕ ಆರ್.ಅಶೋಕ್‌ ಆಗ್ರಹ

ರೈತರಿಗೆ ದ್ರೋಹ ಮಾಡುವ ಮತ್ತು ಗ್ರಾಹಕರಿಗೆ ಬರೆ ಹಾಕುವ ಕಾರ್ಯವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು. ಪಶು ಆಹಾರದ ದರವನ್ನೂ ಏರಿಸಲಾಗಿದೆ. ಇದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು. ರೈತರು ಖರೀದಿಸುವ ಪಶು ಆಹಾರದ ಬೆಲೆ ಕಡಿಮೆ ಮಾಡಬೇಕು; ಹೆಚ್ಚಿಸಿದ ದರವನ್ನು ನೇರವಾಗಿ ರೈತರಿಗೇ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತದೆ ಎಂಬುದಾಗಿ ತಿಳಿಸಿದರು.

ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಸಭಾ ಚುನಾವಣೆಗೆ ಮೊದಲು ರೈತರಿಗೆ ಕೊಡಬೇಕಾದ ಹಾಲು ಪ್ರೋತ್ಸಾಹಧನ 682 ಕೋಟಿಗೂ ಹೆಚ್ಚು ಬಾಕಿ ಇತ್ತು. ಅದು ಈಗ 800 ಕೋಟಿಗೆ ಬಂದು ನಿಂತಿದೆ. ಈ ಸರಕಾರವು ಅವರೇ ಹೇಳಿಕೊಂಡಂತೆ ರೈತರಿಗೆ ಚಿಪ್ಪು, ಚೆಂಬನ್ನು ಕೊಡುತ್ತಿದೆ ಎಂದು ವ್ಯಂಗ್ಯವಾಡಿದರು.

ಇದನ್ನು ನೋಡಿ : ಅಂಗನವಾಡಿಗಳಲ್ಲಿ ಎಲ್‌ಕೆಜಿ- ಯುಕೆಜಿ ಆರಂಭಿಸಿ – ಅಂಗನವಾಡಿ ನೌಕರರ ಬೃಹತ್‌ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *