ಹಾಲಿನ ದರ ಹೆಚ್ಚಳ:ನಾಳೆಯಿಂದಲೇ ಪರಿಷ್ಕೃತ ದರ ಜಾರಿ

ಬೆಂಗಳೂರು: ಗ್ರಾಹಕರು ದೈನಂದಿನ ಬಳಸುವ ಹಾಲಿನ ದರ ಹೆಚ್ಚಳವಾಗಿದೆ. ಹಾಲಿನ ಬೆಲೆ ಹೆಚ್ಚಿಸಿರುವುದಾಗಿ ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ಸ್ಪಷ್ಟಪಡಿಸಿದ್ದಾರೆ. ಒಂದು ಲೀಟರ್‌ ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ 50 ಎಂಎಲ್‌ ಹೆಚ್ಚಿಸಿರುವ ಮಂಡಳಿ ಲೀಟರ್‌ಗೆ 2 ರೂ.ನಂತೆ ಬೆಲೆ ಹೆಚ್ಚಿಸಿದ್ದು, ಜೂನ್‌ 26 ರಿಂದಲೇ ಹೊಸ ಬೆಲೆ ಅನ್ವಯವಾಗಲಿದೆ.

ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ಬೆಲೆ 22ರಿಂದ 24 ರೂ.ಗೆ ಏರಿಕೆಯಾಗಲಿದೆ. ಮೊಸರು, ಇನ್ನಿತರ ಯಾವುದೇ ಹಾಲಿನ ಉತ್ಪನ್ನದ ಬೆಲೆ ಏರಿಕೆ ಮಾಡಲ್ಲ. ಕೇರಳದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರುಪಾಯಿ ಇದೆ. ಗುಜರಾತ್ನಲ್ಲಿ ಅಮುಲ್ ಒಂದು ಲೀಟರ್ಗೆ 56 ರೂ. ಮಹಾರಾಷ್ಟ್ರದಲ್ಲಿ 56 ರೂ. ದೆಹಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ಇದೆ ಎಂದು ಎಂದು ಭೀಮಾನಾಯ್ಕ್ ಹೇಳಿದರು. ಹೆಚ್ಚಳ

ನಗರದಲ್ಲಿಂದು ದರ ಏರಿಕೆ ಪ್ರಕಟಿಸಲು ಭೀಮಾನಾಯ್ಕ್‌ ಸುದ್ದಿಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌, ಕರ್ನಾಟಕ ಹಾಲು ಮಂಡಳಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ಹಾಲು ಉತ್ಪಾದನೆಯಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರಸಕ್ತ 98.17 ಲಕ್ಷ ಲೀಟರ್‌ ಸಂಗ್ರಹವಾಗಿದ್ದು. ಸದ್ಯದಲ್ಲಿಯೇ ಒಂದು ಕೋಟಿ ಸಂಗ್ರಹದ ಗುರಿ ಮುಟ್ಟಲಿದ್ದೇವೆ. ರಾಜ್ಯದಲ್ಲಿ 27 ಲಕ್ಷ ಹಾಲು ಉತ್ಪಾದಕರು ಇದಕ್ಕೆ ಕಾರಣವಾಗಿದ್ದಾರೆ. ಸದ್ಯ ಶೇಖರಣೆಯಾಗಿರುವ ಹಾಲಿನಲ್ಲಿ 30 ಲಕ್ಷ ಲೀಟರ್‌ ಅನ್ನು ಪೌಡರ್‌ಗೆ ಕಳುಹಿಸುತ್ತಿದ್ದೇವೆ. ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಡೆಡ್ ಆಗುತ್ತಿದೆ. 37ಲಕ್ಷ ಹಾಲು ಉತ್ಪಾದಕ ರು ಗ್ರಾಹಕರಿಗೆ ತೊಂದರೆಯಾಗಬಾರದು.ಇಬ್ಬರು ಕೂಡ ನಮಗೆ ಎರಡು ಕಣ್ಣಿದ್ದಂತೆಯೇ. ಅರ್ಧ ಲೀ ಹಾಲಿನ ಪ್ಯಾಕೆಟ್ ನಲ್ಲು 550 ml ಇರಲಿದೆ.ನಾಳೆಯಿಂದ ಪರಿಷ್ಕೃತ ಬೆಲೆ ಜಾರಿಯಾಗಲಿದೆ. ಹೆಚ್ಚಳ

ಇದನ್ನು ಓದಿ : ಅಂಗನವಾಡಿಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಮುಖ್ಯಮಂತ್ರಿ ಸಹಮತ

ಪರಿಷ್ಕೃತ ಹಾಲಿನ ದರ ಹೀಗಿದೆ..

  • ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ
  • ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ
  • ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ
  • ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ
  • ಶುಭಂ ಹಾಲು 48ರಿಂದ 50 ರೂ
  • ಸಮೃದ್ದಿ ಹಾಲು 51ರಿಂದ 53ರೂ
  • ಶುಭಂ (ಟೋನ್ಡ್ ಹಾಲು) 49ರಿಂದ 51ರೂ
  • ಸಂತೃಪ್ತಿ ಹಾಲು 55 ರಿಂದ 57 ರೂ
  • ಶುಭಂ ಗೋಲ್ಡ್ ಹಾಲು 49ರಿಂದ 51ರೂ
  • ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ

ಸುದ್ದಿಗೋಷ್ಠಿಯಲ್ಲಿ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ ಜಗದೀಶ್, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಇದನ್ನು ನೋಡಿ : ಅಂಗನವಾಡಿಗಳ ಕತ್ತು ಹಿಸುಕಬೇಡಿ – ಕಾರ್ಯಕರ್ತರನ್ನು ತರಬೇತಿಗೊಳಿಸಿ Janashakthi Media

Donate Janashakthi Media

Leave a Reply

Your email address will not be published. Required fields are marked *