ಬೆಂಗಳೂರು: ಸಹವಾಸದಿಂದ ಸನ್ಯಾಸಿನೂ ಕೆಡುತ್ತಾನೆ ಎನ್ನುವ ಮಾತಿದೆಯಲ್ಲ, ಅದನ್ನು ಸಿಎಂ ಸಿದ್ದರಾಮಯ್ಯ ತಮ್ಮ ಅನುಭವದ ಮಾತುಗಳಿಂದಲೇ ಸ್ಪಷ್ಟಪಡಿಸಿದ್ದಾರೆ. ಸಹವಾಸ ದೋಷದಿಂದ ತಾವು ಸಿಗರೇಟ್ ಸೇಢದುತ್ತಿದ್ದ ಕಥೆಯೊಂದನ್ನು ಸಿಎಂ ಹಂಚಿಕೊಂಡರು.
ಸಹವಾಸದೋಷ ಅವರನ್ನು ಧೂಮಪಾನಿಯನ್ನಾಗಿ ಅಂದರೆ ಸಿಗರೇಟ್ ಸೇದುವಂತೆ ಮಾಡಿತ್ತು ಎನ್ನುವುದನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ವಿದೇಶದಲ್ಲಿ ಹೋದಾಗ ಸ್ನೇಹಿತರು ಸಿಗರೇಟ್ ಪ್ಯಾಕ್ ತಂದಿದ್ದರಂತೆ. ಕಡಿಮೆ ಅವಧಿಯಲ್ಲಿಯೇ ಅವರು ಹೆಚ್ಚು ಸಿಗರೇಟ್ ಸೇದುಬಿಟ್ಟರಂತೆ.
ಇದನ್ನೂ ಓದಿ: ಶ್ರೀರಾಮುಲು ಸೋಲಿಗೆ ಕಾರಣರಾದವರ್ಯಾರು ಗೊತ್ತಾ ?
ನಗರದಲ್ಲಿಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಹವಾಸದೋಷ, ಚಟ ಎಷ್ಟು ಕೆಟ್ಟದ್ದು ಅನ್ನೋದು ಮನವರಿಕೆಯಾದ ಮೇಲೆ ಅದನ್ನು 1987 ಆಗಸ್ಟ್ 27 ಕ್ಕೆ ಅದೇ ದಿನ ಸಿಗರೇಟ್ ಸೇದೋದನ್ನ ಬಿಟ್ಟರಂತೆ ಅದೂ ಸಂಪೂರ್ಣವಾಗಿ ಅಂದ್ರು.
ಇನ್ನು 2018 ರ ಅ.1 ರಂದು ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ನಮ್ಮ ಮನೆಯಲ್ಲಿ ಸಾಕಷ್ಟು ಜನ ಕೆಲಸಗಾರರು ಇರುತ್ತಿದ್ದರು. ಅವರೊಂದಿಗೆ ಸೇರಿ ಗದ್ದೆ ಕೆಲಸ ಮಾಡುತ್ತಿದ್ದೆ. ಅವ್ರು ಕೆಲಸದ ವೇಳೆ ಬೀಡಿ ಸೇದುತ್ತಿದ್ದರು. ಅವರಿಂದ ನಾನೂ ಬಿಡಿ ಸೇದುವುದನ್ನು ಕಲಿತೆ. ಕಾಲೇಜಿಗೆ ಸೇರುವಷ್ಟರಲ್ಲಿ ನನ್ನ ಜತೆ ಸಿಗರೇಟ್ ಚಟ ಬಂತು. ಆವತ್ತು ಬೀಡಿ ಸೇದದೇ ಇದ್ದಿದ್ದರೆ, ಸಿಗರೇಟ್ ಮುಟ್ಟುತ್ತಿರಲಿಲ್ಲ” ಎಂದು ಈ ಹಿಂದೆ ಸಿದ್ದರಾಮಯ್ಯ ಸಿಎಂ ಆದ ವೇಳೆ ಖಾಸಗಿ ವಾಹಿನಿಯ ಸಂದರ್ಶನದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
“ನಾನು ವಿದ್ಯಾರ್ಥಿಯಾಗಿದ್ದಾಗ ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದೆ, ಆದರೆ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ತಿಳಿವಳಿಕೆ ಬಂದ ನಂತರ ಕ್ರಮೇಣವಾಗಿ ಅದರಿಂದ ದೂರವಾದೆ ಎಂದಿದ್ದರು”
ಅಷ್ಟೇ ಅಲ್ಲ, ದಿನವೊಂದಕ್ಕೆ 40 ಸಿಗರೇಟ್ ಸೇದುತ್ತಿದ್ದಿದ್ದಾಗಿಯೂ ಹೇಳಿರುವ ಸಿದ್ದರಾಮಯ್ಯ, 31 ವರ್ಷದ ಹಿಂದೆ ಒಂದು ದಿನ ನಾನು ಧೂಮಪಾನ ಮಾಡುವುದನ್ನು ನಿಲ್ಲಿಸಿದೆ, ಈಗ ನನ್ನ ಪಕ್ಕ ಯಾರಾದರೂ ಧೂಮಪಾನ ಮಾಡಿದರೆ ಅದರ ವಾಸನೆ ಸಹ ನನ್ನಿಂದ ಸಹಿಸಸಾಗದು ಎಂದು ಹೇಳಿದ್ದಾರೆ.
ಕೆಟ್ಟ ಚಟಗಳಿಗೆ ಯುವ ಜನತೆ ಬೇಗ ದಾಸರಾಗುತ್ತಾರೆ, ಸಿಗರೇಟ್ ಮೇಲೆ ಅಪಾಯ ಎಂದು ಎಚ್ಚರಿಕೆ ಬರಹವಿದ್ದರೂ ಸೇವನೆ ಬಿಡುವುದಿಲ್ಲ, ಆದಷ್ಟು ಬೇಗನೇ ದೂಮಪಾನ ಬಿಡಬೇಕು ಹಾಗೂ ಆರೋಗ್ಯ. ತಪಾಸಣೆ ಮಾಡಿಸಿಕೊಳ್ಳಬೇಕು ಇಲ್ಲದಿದ್ದರೇ ಕ್ಯಾನ್ಸರ್ ವಿಪರೀತ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ ಎಂದು ಹೇಳಿದ್ದರು.
ಇದನ್ನೂ ನೋಡಿ: ಇಂದಿನ ಬಂಡವಾಳಶಾಹಿಯನ್ನು ಅರ್ಥಮಾಡಿಕೊಳ್ಳಲು ಬಂಡವಾಳ ಪುಸ್ತಕವನ್ನು ಓದಲೇಬೇಕು -ಡಾ. ಜಿ.ರಾಮಕೃಷ್ಣ Janashakthi Media