ಬೆಂಗಳೂರು: ಭೂಗತವಾಗಿದ್ದ ಲೈಂಗಿಕ ಪ್ರಕರಣದ ಆರೋಪಿ ಅಶ್ಲೀಲ ಪೆನ್ಡ್ರೈವ್ ಪ್ರಕರಣದ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಇದ್ದಕ್ಕಿದ್ದಂತೆ ವಿಡೀಯೋ ಮೂಲಕ ಹಾಜರಾಗಿದ್ದಾರೆ.
ಅಜ್ಞಾತ ಸ್ಥಳವೊಂದರಲ್ಲಿ ತನ್ನ ಹೇಳಿಕೆಯನ್ನು ಬಿಟ್ಟಿರುವ ಪ್ರಜ್ವಲ್ ರೇವಣ್ಣ, ರಾಜಕೀಯವಾಗಿ ತನ್ನನ್ನು ಮುಗಿಸಬೇಕು ಷಡ್ಯಂತ್ರ ನಡೆದಿದೆ. ಯಾರೂ ಕೂಡ ತಪ್ಪು ತಿಳಿಯಬಾರದು ಇದೇ ಶುಕ್ರವಾರ ಎಸ್ಐಟಿ ಮುಂದೆ ಹಾಜರಾಗುವುದಾಗಿ ಸ್ಪಷ್ಟಪಡಿಸಿದ್ದಾರೆ.
ತಾತ ತಂದೆ-ತಾಯಿ, ಕುಮಾರಣ್ಣ, ನಾಡಿನ ಜನತೆ, ಕಾರ್ಯಕರ್ತರಿಗೆ ಕ್ಷಮಾಪಣೆ ಕೇಳಿರುವ ಪ್ರಜ್ವಲ್ ರೇವಣ್ಣ, ಮೇ 24 ರಂದು ನಡೆದ ಮತದಾನದ ಸಂದರ್ಭದಲ್ಲಿ ನನ್ನ ವಿರುದ್ಧ ಯಾವುದೇ ಆರೋಪ ದೂರುಗಳಿರಲಿಲ್ಲ. ಪೂರ್ವನಿಯೋಜಿತದಂತೆ ನಾನು ವಿದೇಶಕ್ಕೆ ಹೋದೆ. ನಾನು ಹೋದ ಬಳಿಕ ಮೂರುನಾಲ್ಕು ದಿನದ ಬಳಿಕ ನನ್ನ ವಿರುದ್ಧ ಪಿತೂರಿ ರಾಜಕೀಯ ಷಡ್ಯಂತ್ರಗಳು ನಡೆದಿವೆ. ಮಾಧ್ಯಮಗಳು ವಿಡೀಯೋ ಯ್ಯೂಟ್ಯೂಬ್ ಮೂಲಕ ನನಗೆ ವಿಚಾರ ತಿಳಿಯಿತು.
ಇದನ್ನು ಓದಿ : ಪೆನ್ಡ್ರೈವ್ ಪ್ರಕರಣದ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕೈವಾಡವಿದೆ; ಕೆ. ಎಸ್. ಈಶ್ವರಪ್ಪ
ವಿದೇಶದಲ್ಲಿ ಎಲ್ಲಿದ್ದೆ ಎಂದು ಸರಿಯಾಗಿ ಮಾಹಿತಿ ನೀಡದ್ದಕ್ಕೆ ಕ್ಷಮಿಸಬೇಕು. ಎಸ್ ಐಟಿ ರಚನೆಯಾದ ಬಳಿಕ ಕಾಂಗ್ರೆಸ್ನ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ವೇದಿಕೆ ಕಾರ್ಯಕ್ರಮಗಳಲ್ಲಿ ನನ್ನ ವಿರುದ್ಧ ಬಹಿರಂಗ ವೇದಿಕೆಗಳಲ್ಲಿ ಆರೋಪ ಮಾಡಲಾರಂಭಿಸಿದರು.
ರಾಜಕೀಯವಾಗಿ ನಾನು ಬೆಳೆಯಬಾರದು ಎಂಬ ದುರುದ್ದೇಶದಿಂದ ನನ್ನನ್ನು ಕುಗ್ಗಿಸಲು ಹಾಸನದಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಯಾರೂ ತಪ್ಪು ತಿಳಿಯಬಾರದು. ಇದೇ ಶುಕ್ರವಾರ ಮೇ 31 ರ ಬೆಳಿಗ್ಗೆ 10.00 ಕ್ಕೆ ಎಸ್ಐಟಿ ವಿಚಾರಣೆಗೆ ಹಾಜರಾಗುತ್ತೇನೆ. ನಾನು ವಿದೇಶಕ್ಕೆ ಹೋದ ಮೇಲೆ ಎಸ್ಐಟಿ ರಚನೆಯಾಗಿದೆ. ಅದಕ್ಕೂ ಮೊದಲು ಆಗಿರಲಿಲ್ಲ.
ಎಸ್ಐಟಿ ಮುಂದೆ ಹಾಜರಾಗಲು ನನ್ನ ವಕೀಲರ ಮೂಲಕ ಮನವಿ ಮಾಡಿದ್ದೆ. ಅದರಂತೆ ಹಾಜರಾಗುತ್ತಿದ್ದೇನೆ. ಪಿತೂರಿಯ ಷಡ್ಯಂತ್ರದ ವಿಚಾರದಿಂದ ಮಾನಸಿಕವಾಗಿ ಡಿಪ್ರೆಷನ್ನಿಂದ ಐಸೋಲೇಷನ್ನಲ್ಲಿದ್ದೆ ಹಾಗಾಗಿ ನಾನು ಇಷ್ಟುದಿನ ಮುಂದೆ ಬರಲು ಸಾಧ್ಯವಾಗಿರಲಿಲ್ಲ. ನ್ಯಾಯಲಯದ ಮೇಲೆ ನನಗೆ ನಂಬಿಕೆಯಿದೆ. ನ್ಯಾಯಾಲಯದ ಮೂಲಕವೇ ಎಲ್ಲವನ್ನೂ ಬಗೆಹರಿಸಿಕೊಳ್ಳುತ್ತೇನೆ. ಎಸ್ಐಟಿಯ ವಿಚಾರಣೆಗೆ ನಾನು ಸಹಕರಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ಇದನ್ನು ನೋಡಿ : ದೇವೇಗೌಡ್ರೆ ಜನ ನಿಮಗೆ ಅಧಿಕಾರ ಕೊಟ್ರು – ನೀವು ವಿಕೃತಿ ಕಾಮಿಯನ್ನು ಕೊಟ್ರಿ. ನಿಮಗೆ ನಾವು ತಕ್ಕ ಪಾಠ ಕಲಿಸುತ್ತೇವೆ.