ಫ್ಯಾಕ್ಟರಿ ಬರುತ್ತದೆ, ಕೆಲಸ ಸಿಗುತ್ತದೆ ಎಂದು ಭೂಮಿ ಕಳೆದುಕೊಂಡ ರೈತರು ಗ್ರಾಮದ ಜನರು

ಕೊಪ್ಪಳ: ತಮ್ಮೂರಿಗೆ ಫ್ಯಾಕ್ಟರಿ ಬರುತ್ತದೆ, ಕೆಲಸ ಸಿಗುತ್ತದೆ ಎನ್ನುವ ಆಸೆಗೆ ಬಿದ್ದ ರೈತರು ಜಮೀನನ್ನು ಕಳೆದುಕೊಂಡು ಮೋಸ ಹೋದ ಘಟನೆಯೊಂದು ವರದಿಯಾಗಿದೆ. ಫ್ಯಾಕ್ಟರಿ 

ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾ, ಕುಣಿಕೇರಿ, ಹಿರೆಬಗನಾಳ, ಚಿಕ್ಕಬಗನಾಳ ಗ್ರಾಮಸ್ಥರು, ತಮ್ಮೂರಲ್ಲಿ ಸ್ಟೀಲ್ ಪ್ಯಾಕ್ಟರಿ ಬರುತ್ತದೆ ಎಂದು ಎಕ್ಸ್ ಇಂಡಿಯಾ ಸ್ಟೀಲ್ ಕಂಪನಿ ಆರಂಭ ಆಗುತ್ತದೆ ಎಂಬ ಕೆಲ ಮಧ್ಯವರ್ತಿಗಳು ಕುಣಿಗೇರಿ ತಾಂಡಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಬಣ್ಣಬಣ್ಣದ ಭರವಸೆ ನೀಡಿದ್ದರಿಂದ 2008 ರಿಂದ 2011 ರವರಗೆ ನೂರಾರು ರೈತರು ತಮ್ಮ ಫಲವತ್ತಾದ ಮುನ್ನೂರು ಎಕರೆಗೂ ಹೆಚ್ಚು ಕೃಷಿ ಭೂಮಿಯನ್ನು ನೀಡಿದ್ದಾರೆ. ಆರಂಭದಲ್ಲಿ ಪ್ರತಿ ಎಕರೆಗೆ ಒಂದು ಲಕ್ಷ ನೀಡಿದ್ದ ದಲ್ಲಾಳಿಗಳು, ನಂತರ ಐದರಿಂದ ಆರು ಲಕ್ಷ ಎಕರೆಗೆ ಪ್ರತಿ ಎಕರೆ ಭೂಮಿಯನ್ನು ಖರೀದಿಸಿದ್ದಾರೆ.

ಇದನ್ನು ಓದಿ : ಸಿದ್ದರಾಮಯ್ಯ ಮೋದಿಗೆ ಪತ್ರ ಬರೆದ ಬೆನ್ನಲ್ಲೇ ಮೊಮ್ಮಗ ಪ್ರಜ್ವಲ್‌ಗೆ ಎಚ್ಚರಿಕೆ ನೀಡಿದ ಹೆಚ್.ಡಿ.ದೇವೇಗೌಡ

ಆದರೆ ಭೂಮಿ ಖರೀದಿಸುವಾಗ ಸ್ಟೀಲ್ ಕಂಪನಿ ಹೆಸರಲ್ಲಿ ಭೂಮಿಯನ್ನು ಖರೀದಿಸದ ಮಾಲೀಕರು, ಕೆಲ ವ್ಯಕ್ತಿಗಳ ಹೆಸರಲ್ಲಿ ಭೂಮಿಯನ್ನು ಖರೀದಿಸಿದ್ದರು. ಜೊತೆಗೆ ಭೂಮಿ ನೀಡಿದ ಪ್ರತಿಯೊಬ್ಬ ರೈತರಿಗೆ ಕೂಡಾ ಎಕ್ಸ್ ಇಂಡಿಯಾ ಕಂಪನಿ ಹೆಸರಲ್ಲಿ ಉದ್ಯೋಗ ನೀಡುವ ಪ್ರಮಾಣ ಪತ್ರವನ್ನು ಕೂಡಾ ನೀಡಿದ್ದರು. ಆದರೆ ಭೂಮಿಯನ್ನು ನೀಡಿ ದಶಕವಾದರೂ ಕೂಡಾ ಇಲ್ಲಿವರಗೆ ಯಾವುದೇ ಪ್ಯಾಕ್ಟರಿಯನ್ನು ಆರಂಭ ಮಾಡಿಲ್ಲ. ಪಾಳು ಬಿದ್ದ ಭೂಮಿಯನ್ನು ರೈತರೇ ಉಳುಮೆ ಮಾಡಿಕೊಳ್ಳುತ್ತಿದ್ದರು.

ಆದರೆ ಇದೀಗ ಪ್ಯಾಕ್ಟರಿ ಹೆಸರಲ್ಲಿ ಭೂಮಿ ಖರೀದಿಸಿದವರು, ಈ ವರ್ಷ ರೈತರಿಗೆ ಉಳುಮೆ ಮಾಡಲು ಅವಕಾಶ ನೀಡಿಲ್ಲಾ. ಇನ್ನು ಮುಂದೆ ನಿಮಗೆ ಭೂಮಿ ಉಳುಮೆಗೆ ಅವಕಾಶವಿಲ್ಲ. ಈ ಭೂಮಿ ತಮ್ಮದು ಎಂದು ಹೇಳಿ, ಭೂಮಿಯನ್ನು ಸರ್ವೇ ಮಾಡಿಸಿ ಬೇಲಿ ಹಾಕಲು ಬಂದಿದ್ದರು. ಇದು ಭೂಮಿ ಕಳೆದುಕೊಂಡವರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನು ನೋಡಿ : ದೇವೇಗೌಡ್ರೆ ಜನ ನಿಮಗೆ ಅಧಿಕಾರ ಕೊಟ್ರು – ನೀವು ವಿಕೃತಿ ಕಾಮಿಯನ್ನು ಕೊಟ್ರಿ. ನಿಮಗೆ ನಾವು ತಕ್ಕ ಪಾಠ ಕಲಿಸುತ್ತೇವೆ.

Donate Janashakthi Media

Leave a Reply

Your email address will not be published. Required fields are marked *