ಪುಸ್ತಕ ಪ್ರೀತಿ ಕಡ್ಡಾಯವಾಗಲೀ, ಸಾರ್ವಜನಿಕವಾಗಿ ಜಾರಿಯಾಗಲಿ

ಸಂಧ್ಯಾ ಸೊರಬ

ಬೆಂಗಳೂರು: ಸಾಮಾನ್ಯವಾಗಿ ಜನಪ್ರತಿನಿಧಿಗಳು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು, ಚಲನಚಿತ್ರ ನಟನಟಿಯರು, ಗಾಯಕರು, ಪ್ರಸಿದ್ಧ ಎನಿಸಿಕೊಂಡಿರುವವರು ಸೇರಿದಂತೆ ಜನಪ್ರತಿನಿಧಿಗಳು ಸೆಲಿಬ್ರೇಟಿ ಎಂದುಕೊಳ್ಳುವವರಿಗೆ ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ಅಥವಾ ಅವರನ್ನು ಭೇಟಿಯಾದಾಗಲೋ ಗುಲಾಬಿ, ಸುಗಂಧರಾಜ ಸೇರಿದಂತೆ ಇನ್ನಿತರೆ ಹೂವಿನ ಹಾರ, ಗಂಧದ ಹಾರ, ಮುತ್ತು ಅದು ಇದೂ ಹಾರ ಅದು ಇದು ಶಾಲು, ಪೇಟ ಹಾಕುವುದು ಒಂದು ಪರಿಪಾಠಿಯಂತೆ ಬೆಳೆದುಬಂದಿದೆ. ಪುಸ್ತಕ

ಈ ಪ್ರೇಮ ಎಷ್ಟರ ಮಟ್ಟಿಗೆ ಹೋಗಿರುತ್ತದೆ ಅಂದರೆ, ಅವರ ದೇಹವನ್ನೇ ಮುಚ್ಚುವಂತೆ ಒಮ್ಮೊಮ್ಮೆ ನೀವು ನೋಡಿರಬಹುದು ಅವರ ಮುಖವಿನ್ನೇನೂ ಮುಚ್ಚಿಹೋಗುತ್ತದೆ ಅನ್ನೋ ಮಟ್ಟಿಗೆ ಹಾರಗಳು ಶಾಲುಗಳು ಅವರನ್ನು ಏರಿಬಿಟ್ಟಿರುತ್ತವೆ. ಸಾರ್ವಜನಿಕ ಸಮಾರಂಭಗಳಾದರಂತೂ ಕೆಲವರು ಅತ್ತ ತೆಗೆಯಲು ಆಗದೇ ಅವುಗಳನ್ನು ಹೊರಲು ಆಗದೇ ಸಂಕಟಪಟ್ಟಿದ್ದೂ ಇದೆ. ಇನ್ನುಕೆಲವರು ಆಗಾಗ್ಗೆ ಅವುಗಳನ್ನು ತೆಗೆದು ತೆಗೆದು ಹೊಸ ಹೊಸವುಗಳ ಧಾರಣಕ್ಕೆ ಅವಕಾಶ ಮಾಡಿಕೊಟ್ಟದ್ದೂ ಇದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರಿಂದ ಅಂತರ್ಜಾತಿ ವಿವಾಹ ದಂಪತಿಗಳ ನೋಂದಣಿ ವೆಬ್ಸೈಟ್‌ಗೆ ಚಾಲನೆ

ಇಷ್ಟೆಲ್ಲ ಪೀಠಿಕೆ ಯಾಕಂದ್ರೆ, ಸಿಎಂ ಸಿದ್ದರಾಮಯ್ಯ ಕಳೆದ ಬುಧವಾರ ಬೆಂಗಳೂರು ಸಿಟಿ ರೌಂಡ್ಸ್‌ ಹೋಗೋ ಮುನ್ನ ದಿನ ತಾವು ನಾಳೆಯಿಂದ ಗೌರವಾರ್ಥವಾಗಿ ಹೂವುಗಳು, ಶಾಲುಗಳು ಹಾರಗಳನ್ನು ಸ್ವೀಕರಿಸದಿರಲು ನಿರ್ಧರಿಸಿದ್ದೇನೆ. ಅದರ ಬದಲಿಗೆ ಪುಸ್ತಕದ ರೂಪದಲ್ಲಿ ತಮ್ಮ ಪ್ರೀತಿ ಅಭಿಮಾನವನ್ನು ತೋರಿಸಬಹುದು ಎಂದಿದ್ದಾರೆ.

ಹೀಗೆ ಸಿದ್ದರಾಮಯ್ಯ ಹೇಳಿದ್ದು ಮೊದಲೇನಲ್ಲ, ಈ ಹಿಂದೆ ಸರ್ಕಾರ ಬಂದಾಗಲೇ ಹೇಳಿದ್ದರು. ಗೃಹಸಚಿವ ಜಿ.ಪರಮೇಶ್ವರ್‌ ಕೂಡ ಸಿಎಂ ಹಾದಿಯಲ್ಲೇ ಸಾಗಿ ತಮಗೂ ಬೇಡ ಎಂದಿದ್ದರು. ಈಗ ಮತ್ತೊಮ್ಮೆ ಸಿಎಂ ಪುನರುಚ್ಛರಿಸಿದ್ದಾರಾದರೂ ಇದರ ಪಾಲನೆ ಎಷ್ಟರ ಮಟ್ಟಿಗೆ ಸಾಧ್ಯ ಎನ್ನುವ ಪ್ರಶ್ನೆ ಮತ್ತೆಮತ್ತೆ ಎದುರಾಗಿದೆ.

ಈ ಹಿಂದೆಯೂ ಕೂಡ ಅದೂ ಸ್ಟೈಲಿಷ್‌ ರಾಜಕಾರಣಿ ಎಂದು ಕರೆಯಿಸಿಕೊಂಡಿದ್ದ ಎಸ್.ಎಂ.ಕೃಷ್ಣ ಈ ಹಿಂದೆ ಸಿಎಂ ಆಗಿದ್ದಾಗಲೇ ಈ ಮಾತನ್ನು ಮೊದಲಿಗೆ ಹೇಳಿದ್ದರು ಎನ್ನುವುದು ಉಲ್ಲೇಖನೀಯ. ಸುಗಂಧರಾಜ ಹೂವಿನ ಅಲರ್ಜಿ ತಮಗಿದೆ ಅನ್ನೋದು ಅವರು ಆಗ ನೀಡಿದ್ದರು.ಆದರೆ ವೈಯಕ್ತಿಕ ಬೇರೆಯೇ ಕಾರಣ ಇತ್ತು ಎನ್ನುವ ಅವರ ಆಪ್ತ ಮೂಲಗಳು ಹೇಳಿದ್ದು ಇದೆ. ಕಾರಣಗಳು ಅದೇನೇ ಇರಲೀ, ಪಾಲನೆ ಮಾತ್ರ ಇಂದಿನವರೆಗೂ ಯಾವುದೇ ಸಿಎಂನಿಂದ ಕಟ್ಟುನಿಟ್ಟಾಗಿ ಜಾರಿಯಾಗಿ ಪುಸ್ತಕಪ್ರೀತಿ ಕಂಡುಬಂದಿರುವುದು ಕಡಿಮೆಯೇ ಅಥವಾ ಇಲ್ಲವೇ ಎನ್ನಬಹುದೇನೋ.

ಇನ್ನು ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಾವು ಸಿಎಂ ಆದ ಹೊಸದರಲ್ಲಿ ಇದಕ್ಕಾಗಿ ಸರ್ಕಾರಿ ಆದೇಶವನ್ನೇ ಹೊರಡಿಸಿಬಿಟ್ಟಿದ್ದರು.  ಸರ್ಕಾರಿ ಕಾರ್ಯಕ್ರಮದಲ್ಲಿ ಹಾರ, ತುರಾಯಿಗಳ ಬದಲಾಗಿ ಪುಸ್ತಕಗಳನ್ನು ನೀಡಿ ಎಂದು ಆದೇಶ ಹೊರಡಿಸಲಾಗಿತ್ತು.ಆದರೆ, ಈ ಆದೇಶ ಪಾಲನೆಯಾಗಿದ್ದು ಕಾಣಲೇ ಇಲ್ಲ. ಇನ್ನೂ ಕೆಲವು ಸಚಿವರು ಅದನ್ನು ಪಾಲಿಸ ಹೊರಟರೂ ಅದು ಆಗಲೇಯಿಲ್ಲ.ಜನರ ಅಭಿಮಾನಿಗಳ ಬೆಂಬಲಿಗರ ಪ್ರೀತಿ ಗೌರವಕ್ಕೆ ಕಟ್ಟುಬಿದ್ದು ಒಮ್ಮೊಮ್ಮೆ ಅದನ್ನು ಸ್ವೀಕರಸಲೇಬೇಕಾಗುತ್ತದೆ ಎನ್ನುವುದು ಕೆಲವರ ಅಂಬೋಣವಾದರೂ ಪುಸ್ತಕ ಪ್ರೀತಿಯ ಜಾಗೃತಿ ಕಾಣಲೇ ಇಲ್ಲ.

ಪ್ರೀತಿ, ಅಭಿಮಾನವನ್ನು ಹೀಗೆ ಹಾರದ ರೂಪದಲ್ಲಿ ತೋರುವುದು ಸಹಜವಾದರೂ ಪುಸ್ತಕದ ರೂಪದಲ್ಲಿ ಅದನ್ನು ಸ್ವೀಕರಿಸುತ್ತೇನೆ ಎನ್ನುವುದು ಬರೀ ಟ್ವಿಟ್ಟರ್‌ ಹೇಳಿಕೆಗೂ ಅಥವಾ ಪತ್ರಿಕಾ ಪ್ರಕಟಣೆಗೋ ಸುದ್ದಿ ರೂಪಕ್ಕೋ ಮಾತ್ರವೇ ಸೀಮಿತವಾಗದೇ, ಅಭಿಯಾನದಂತಾಗಲೀ, ಪುಸ್ತಕ ಪ್ರೀತಿ ಹರಡಲೀ ಪರಿಸರ ನೈರ್ಮಲ್ಯವಾಗದಿರಲೀ. ಇದನ್ನು ಸಾರ್ವಜನಿಕರಾದಿಯಾಗಿ, ಜನಪ್ರತಿನಿಧಿಗಳು ಎಲ್ಲರೂ ಪಾಲಿಸಲೀ ಎನ್ನುವ ಆಶಯ ಜನಶಕ್ತಿ ಮೀಡಿಯದ್ದಾಗಿದೆ.

ಇದನ್ನೂ ನೋಡಿ: ಪ್ರಜ್ವಲ್ ರೇವಣ್ಣ ಲೈಂಗಿಕ ಹತ್ಯಾಕಾಂಡ ಗೊತ್ತಿದ್ದು ಬಿಜೆಪಿ ಯಾಕೆ ಟಿಕೆಟ್ ನೀಡಿತು? ವಿಡಿಯೋ ಹಂಚಿದವರಿಗೂ ಶಿಕ್ಷೆಯಾಗಲಿ

Donate Janashakthi Media

Leave a Reply

Your email address will not be published. Required fields are marked *