ದ್ವಿತೀಯ ಪಿಯುಸಿ 2 ನೇ ಪರೀಕ್ಷೆಯ ಫಲಿತಾಂಶ 2024 ಇಂದು ಪ್ರಕಟ

ಬೆಂಗಳೂರು :ಇಂದು (ಮೇ 21) ದ್ವಿತೀಯ ಪಿಯುಸಿ 2 ನೇ ಪರೀಕ್ಷೆಯ ಫಲಿತಾಂಶ 2024 ಅನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಪ್ರಕಟಿಸಿದೆ. ಏಪ್ರಿಲ್ 29 ಮತ್ತು ಮೇ 16 ರ ನಡುವೆ 2024 ರ ದ್ವಿತೀಯ ಪಿಯುವಿನ ಪೂರಕ ಪರೀಕ್ಷೆ ನಡೆದಿತ್ತು.

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಪಿಯುಸಿ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ – karresults.nic.in ನಿಂದ ಡೌನ್‌ಲೋಡ್ ಮಾಡಬಹುದು. ಈ ವರ್ಷ 2ನೇ ಪಿಯು ದ್ವಿತೀಯ ಪರೀಕ್ಷೆಗೆ ಒಟ್ಟು 1,49,824 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ಈ ಪೈಕಿ 1,48,942 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 52,505 ಮಂದಿ ಉತ್ತೀರ್ಣರಾಗಿದ್ದಾರೆ. 35.25 ರಷ್ಟು ಉತ್ತೀರ್ಣರಾಗಿದ್ದಾರೆ.

ಇದನ್ನು ಓದಿ : 20 ದಿನಗಳ ನಂತರ ಹಾಸನಕ್ಕೆ ಬಂದ ಎಚ್.ಡಿ.ರೇವಣ್ಣ

ಒಟ್ಟು 84,632 ಹುಡುಗರು ಮತ್ತು 64,310 ಹುಡುಗಿಯರು ಕರ್ನಾಟಕ ಪಿಯು ಪೂರಕ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ ಹುಡುಗರು 26,496 ಶೇಕಡಾ 31.31 ರಷ್ಟು ಉತ್ತೀರ್ಣರಾಗಿದ್ದಾರೆ ಮತ್ತು ಹುಡುಗಿಯರು 35.25% (26,009) ಅಂಕಗಳನ್ನು ಗಳಿಸಿದ್ದಾರೆ.

ಪಿಯು ಪೂರಕ ಪರೀಕ್ಷೆಯ ಫಲಿತಾಂಶ ಪರಿಶೀಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ. ಅಧಿಕೃತ ಫಲಿತಾಂಶದ ವೆಬ್‌ಸೈಟ್‌ – karresults.nic.in ಗೆ ಹೋಗಬೇಕು. ನಂತರದಲ್ಲಿ ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ, ನೋಂದಣಿ ಸಂಖ್ಯೆ ಮತ್ತು ಇತರ ಮಾಹಿತಿ ದಾಖಲಿಸಿ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನು ನೋಡಿ : ಲೈಂಗಿಕ ಹತ್ಯಾಕಾಂಡ : ದೌರ್ಜನ್ಯಕ್ಕೊಳಗಾದವರಿಗೆ ನಾವು ಧ್ವನಿಯಾಗುತ್ತೇವೆJanashakthi Media

Donate Janashakthi Media

Leave a Reply

Your email address will not be published. Required fields are marked *