ಚಾಮರಾಜನಗರ: ಆದಿಕಾರಿಗಳ ಮೇಲೆ ಹಲ್ಲೆ, ಪೀಠೋಪಕರಣಗಳ ಧ್ವಂಸ ಮಾಡಿ ಮತದಾನಕ್ಕೆ ವಿರೋಧ ವ್ಯಕ್ತಪಡಿಸಿದ್ದ ಚಾಮರಾಜನಗರ ಜಿಲ್ಲೆಯ ಇಂಡಿಗನತ್ತ ಗ್ರಾಮದ ಜನರು ಇಂದು ಏಪ್ರಿಲ್ 29 ಕ್ಕೆ ಮರುಮತದಾನಕ್ಕೆ ಕಾರಣವಾಗಿದ್ದರೂ, ಮತ್ತೆ ಮತದಾನದಿಂದ ಗ್ರಾಮಸ್ಥರು ದೂರವೇ ಉಳಿದಂತೆ ಕಂಡುಬಂದಿತು.
ಇಂಡಿಗನತ್ತ ಗ್ರಾಮದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 7 ರಿಂದ ಮರು ಮತದಾನ ಆರಂಭವಾಗಿದ್ದರೂ ಮತದಾರರು ಅಷ್ಟಾಗಿ ಮತದಾನ ಕೇಂದ್ರದತ್ತ ಸುಳಿಯಲಿಲ್ಲ. ಮತಗಟೆ 146 ರಲ್ಲಿ ಇಂಡಿಗನತ್ತ ಹಾಗೂ ಮಂದಾರೆ ಗ್ರಾಮಗಳ 528 ಮತದಾರರಿಗೆ ಮರುಮತದಾನ ಸೃಷ್ಟಿಯಾಗಿತ್ತು. ಒಟ್ಟು 528 ಮತದಾರರ ಪೈಕಿ 279 ಪುರುಷರು, 249 ಮಹಿಳಾ ಮತದಾರರಿದ್ದು, ಸಂಜೆ 4ರವರೆಗೆ 56 ಮತಗಳು ಮಾತ್ರವೇ ಚಲಾವಣೆಗೊಂಡಿವೆ ಎಂಬ ಮಾಹಿತಿ ದೊರೆತಿದೆ.
ಇದನ್ನು ಓದಿ : ಪೂರ್ಣ ಬರಪರಿಹಾರ ಬಿಡುಗಡೆಯಾಗುವವರೆಗೆ ಹೋರಾಟ ನಡೆಸಿ, ನಿಮ್ಮ ಜೊತೆ ನಾವಿದ್ದೇವೆ – ಮುಖ್ಯಮಂತ್ರಿ ಚಂದ್ರು
ಕಳೆದ ಮತದಾನದ ದಿನದಂದು ಇಂಡಿಗನತ್ತ ಗ್ರಾಮಸ್ಥರು ಮತಗಟ್ಟೆಯನ್ನೇ ಧ್ವಂಸಗೊಳಿಸಿದ್ದರು. ಅಲ್ಲದೇ 250 ಕ್ಕೂಹೆಚ್ಚಿನ ಜನರ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು. ಮತ್ತೆ ಪೊಲೀಸರ ಭಯದಿಂದ ಗ್ರಾಮವನ್ನೇ ಬಿಟ್ಟು ತಲಮರಿಸಿಕೊಂಡಿರುವ ಇಂಡಿಗನತ್ತ ಗ್ರಾಮಸ್ಥರು ಮತದಾನ ಕೇಂದ್ರದತ್ತ ಅಷ್ಟಾಗಿ ಸುಳಿಯಲಿಲ್ಲ. ಇನ್ನು ಮೆಂದಾರೆ ಗ್ರಾಮಸ್ಥರಿಗೆ ಬಿಗಿ ಪೊಲೀಸ್ ಭದ್ರತೆ ನೀಡಿ ಪೊಲೀಸರು ಮತದಾನ ಮಾಡಿಸಿದರು. ಮೆಂದಾರೆ ಗ್ರಾಮದಿಂದ ಪೊಲೀಸರ ಭದ್ರತೆ ಮೂಲಕ ಕರೆತಂದು ಮತದಾನ ಮಾಡಿಸಲಾಯಿತು.
ಕಳೆದ ಮೊದಲ ಹಂತದ ಏಪ್ರಿಲ್ 26 ರ ಮತದಾನದ ದಿನದಂದು ಮೆಂದಾರೆ ಹಾಡಿ ಜನಗಳ ಮೇಲೆ ಇಂಡಿಗನತ್ತ ಗ್ರಾಮಸ್ಥರು ಹಲ್ಲೆ ಮಾಡಿದ್ದರು. ಗಲಾಟೆ ಹಿನ್ನಲೆ 250 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ 36 ಜನರನ್ನು ಪೊಲೀಸರು ವಶಕ್ಕೆ ಪಡೆಸಿಕೊಂಡಿದ್ದರು. ಸದ್ಯ ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ಇಂಡಿಗನತ್ತ ಗ್ರಾಮಸ್ಥರು ಮರುಮತದಾನಕ್ಕೆ ಮುಂದಾಗಲಿಲ್ಲ ಎನ್ನುವುದು ತಿಳಿದುಬಂದಿತು.
ಇದನ್ನು ನೋಡಿ : ಮಂಗಳೂರು | ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರ ದಾಂಧಲೆ Janashakthi Media