ಬೆಂಗಳೂರು:ಈ ಬಾರಿ ಭಾರೀ ತಾಪಮಾನ ಏರಿಕೆಯಿಂದಾಗಿ ಬಿಸಿಲಿನ ರಣಕ್ಕೆ ತತ್ತರಿಸಿ ಹೋಗಿರುವ ಜನರಿಗೆ ಈ ಬಿಸಿಲು ಮತದಾನಕ್ಕೂ ಅಡ್ಡಿಮಾಡಲಿದೆಯೇ? ಎನ್ನುವ ಪ್ರಶ್ನೆ ಒಂದುಕಡೆಯಾದರೆ, ಹೇಗಪ್ಪಾ ಬಿಸಿಲಲ್ಲಿ ಕ್ಯೂ ನಿಲ್ಲೋದು ಮತದಾನಕ್ಕೆ ಅಂತ ಮತದಾನದ ಮುನ್ನಾ ದಿನವೇ ಮತದಾರರ ಗೊಣಗಾಟ ಕೇಳಿಬರುತ್ತಿದೆ. ಹೀಗಾಗಿ ರಾಜ್ಯದ ತಾಪಮಾನ ಮತದಾನಕ್ಕೆ ಅಷ್ಟೊಂದು ಪೂರಕವಾಗಿಲ್ಲ ಎನ್ನುವ ಹಿನ್ನಲೆಯಲ್ಲಿ ಚುಜನಾವಣಾ ಆಯೋಗ ಬಿಸಿಲಿನ ಮಾಹಿತಿಯನ್ನು ಸಂಗ್ರಹಿಸುತ್ತಿದೆ.
ಈ ಬಿಸಿಲು ಮತದಾನದ ಮತದಾರರ ಮೇಲೆ ಪರಿಣಾಮ ಬೀರುವ ದಟ್ಟ ಸಾಧ್ಯತೆಯನ್ನು ಅರಿತ ಭಾರತೀಯ ಚುನಾವಣಾ ಆಯೋಗ ಇತ್ತೀಚೆಗೆ “ವಿಶೇಷ ವಿಡೀಯೋ ಕಾನ್ಫರೆಸ್ ಅನ್ನು ಆಯೋಜಿಸಿತ್ತು.
ಶುಕ್ರವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದರೂ ಬೆಳಗ್ಗಿನ ಹೊತ್ತು ಮತ್ತು ಮಧ್ಯಾಹ್ನ 3 ರ ಬಳಿಕ ಅಂದರೆ ಬಿಸಿಲು ಸ್ವಲ್ಪ ಇಳಿಮುಖವಾದ ಬಳಿಕ ಮತ್ತೆ ಮತದಾನ ಪ್ರಕ್ರಿಯೆ ಹೆಚ್ಚಾಗುವ ಸಾಧ್ಯತೆಯಿದೆ.
ಬಿಸಿಲು ಜಾಸ್ತಿ ಇರುವ ಮತಗಟ್ಟೆಗಳಲ್ಲಿ ನೆರಳು ಹಾಗೂ ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡಲಾಗು ವುದು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ನೋಡಿ: ಕೇಂದ್ರದ ಬಿಜೆಪಿ ಸರ್ಕಾರ ಸ್ತ್ರೀಯರ ಸಬಲೀಕರಣವನ್ನು ಹತ್ತಿಕ್ಕುವ ಕೆಲಸ ಮಾಡಿದೆ – ಹೋರಾಟಗಾರರ ಆರೋಪ