ಕಲಬುರಗಿ: ತಮ್ಮ ಪರಿವಾರವನ್ನೆ ನೋಡಿಕೊಳ್ಳಲು ಆಗದ ಮೋದಿ ರಾಜಕಾರಣಕ್ಕಾಗಿ ಚುನಾವಣೆಗಾಗಿ ಮಾತ್ರವೇ ದೇಶದ ಜನರನ್ನು ತಮ್ಮ ಪರಿವಾರ ಎಂದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚ್ಯವಾಗಿ ಹೇಳಿದರು. ರಾಜಕಾರಣ
ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರದ ಕಪನೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಮತಯಾಚಿಸಿ ಬಳಿಕ ನಡೆದ ಸಮಾರಂಭವನುದ್ದೇಶಿಸಿ ಪ್ರಿಯಾಂಕ್ ಖರ್ಗೆ ಮಾತಾಡಿದರು. ರಾಜಕಾರಣ
ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗಿಳಿಸಿದೆ. ಅಗತ್ಯದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಸರಬರಾಜು ಮಾಡಲಿಲ್ಲ. ಆದರೂ ಕೂಡಾ ರಾಜ್ಯ ಸರ್ಕಾರ ಪ್ರತಿಯೊಬ್ಬರು ಅಕ್ಕಿ ಖರೀದಿ ಮಾಡಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಿದೆ. ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಮಹಿಳೆಯರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ದೇವಾಲಯಗಳ ಹುಂಡಿ, ಅರ್ಚಕರ ಆರತಿ ತಟ್ಟೆ ಎರಡೂ ತುಂಬುತ್ತಿವೆ ಎಂದರು.
ಜಾಧವ್ ವಂದೇ ಭಾರತ ಟ್ರೇನ್ ಬಿಡಿಸಿದ್ದೆ ದೊಡ್ಡ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ. ‘ವಂದೇ ಭಾರತ ನಡೆದಿದ್ದು ಕೇವಲ ಒಂದೇ ವಾರ’ ಎಂದು ಟೀಕಿಸಿದರು.
ಕಾಂಗ್ರೆಸ್ ಏನು ಮಾಡಿದೆ ಎಂದು ಜಾಧವ್ ಕೇಳುತ್ತಿದ್ದಾರೆ, ಅವರು ಓದಿದ್ದು ಕಾಂಗ್ರೆಸ್ ಕಟ್ಟಿದ ಕಾಲೇಜಿನಲ್ಲಿ. ನಂತರ ಕೆಲಸ ದೊರಕಿದ್ದು ಕೂಡಾ ಕಾಂಗ್ರೆಸ್ ಸ್ಥಾಪಿಸಿದ ಆಸ್ಪತ್ರೆಗೆ ಯಲ್ಲಿ. ಆಮೇಲೆ ರಾಜಕೀಯ ಪ್ರವೇಶ ಮಾಡಿದ್ದು ಕಾಂಗ್ರೆಸ್ ನಲ್ಲಿ ತದನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಸೇರಿದ್ದು ಕೂಡಾ ಕಾಂಗ್ರೆಸ್ ನಲ್ಲೇ ಹಾಗೂ ಶಾಸಕ ಆಗಿದ್ದು ಕೂಡಾ ಕಾಂಗ್ರೆಸ್ ನಿಂದಲೇ. ಜಾಧವ ಅವರೇ ಕಾಂಗ್ರೆಸ್ ಮತ್ತೇನು ಮಾಡಬೇಕು ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ರಾಜಕಾರಣ
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮತಯಾಚನೆ ಮಾಡಿ ಮಾತನಾಡಿದರು. ಇದು ಅತ್ಯಂತ ಮಹತ್ವದ ಚುನಾವಣೆ. ಇದು ಕೇವಲ ನನ್ನ ಚುನಾವಣೆಯಲ್ಲ. ದೇಶ ಹಾಗೂ ಕಲಬುರಗಿ ಜಿಲ್ಲೆಯ ಅಭಿವೃದ್ದಿಗಾಗಿ ನಡೆಯುತ್ತಿರುವ ಚುನಾವಣೆ. ಹಾಗಾಗಿ ಈ ಸಲ ತಮ್ಮನ್ನು ಆಯ್ಕೆ ಮಾಡಿ ಅಭಿವೃದ್ದಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಇದನ್ನು ಓದಿ : ಭಯದಿಂದ ಜೆಡಿಎಸ್ನವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ; ಡಿಸಿಎಂ ಡಿ.ಕೆ. ಶಿವಕುಮಾರ್
ಸಂಸದರಾಗಿ ಆಯ್ಕೆಯಾಗಿ ಹೋದ ಮೇಲೆ ಉಮೇಶ ಜಾಧವ್ ಐದು ವರ್ಷದಲ್ಲಿ ಏನು ಕೆಲಸ ಮಾಡಿದ್ದೀರಿ ಅದರ ಲೆಕ್ಕ ಕೊಡಿ ಎಂದು ಜನರು ಆಗ್ರಹಿಸುತ್ತಿದ್ದಾರೆ. ಆದರೆ ಜನರಿಗೆ ಉತ್ತರ ನೀಡಲು ಅವರಿಂದ ಆಗುತ್ತಿಲ್ಲ ಹಾಗಾಗಿ ಹೋದಲೆಲ್ಲ ಅವರಿಗೆ ಗೋ ಬ್ಯಾಕ್ ಎಂದು ಅವರ ಪಕ್ಷದ ಕಾರ್ಯಕರ್ತರೇ ಕೂಗುತ್ತಿದ್ದಾರೆ. ಕಳೆದ ಐದು ವರ್ಷದ ಅವಧಿಯಲ್ಲಿ ಅಭಿವೃದ್ದಿ ಕೆಲಸಗಳು ನಿಂತು ಹೋಗಿದ್ದು, ತಮಗೆ ಒಂದು ಅವಕಾಶ ನೀಡಿ ಸಂಸದರನ್ನಾಗಿ ಆಯ್ಕೆ ಮಾಡಿ ಕಳಿಸಿದರೇ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಅವರು ಹೇಳಿದರು.
ಸಚಿವ ರಹೀಂ ಖಾನ್ ಮಾತನಾಡಿ, ಖರ್ಗೆ ಕುಟುಂಬವು ಇಡೀ ಕಲ್ಯಾಣ ಕರ್ನಾಟಕ ಹಾಗೂ ನಾಡಿನ ಜನರ ಸೇವೆ ಮಾಡುತ್ತಿದೆ. ಈಗ ಮತ್ತೊಮ್ಮೆ ನಿಮ್ಮ ಬಳಿಗೆ ಮತಯಾಚನೆಗೆ ಬಂದಿದ್ದೇವೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿದೆ. ಗಟ್ಟಿಮುಟ್ಟಾಗಿದ್ದ ಯಡಿಯೂರಪ್ಪ ಅವರನ್ನ ಅಧಿಕಾರದಿಂದ ಇಳಿಸಿದರು. ಆದರೆ, ಕಾಂಗ್ರೆಸ್ ನಿಜಲಿಂಗಪ್ಪ, ವಿರೇಂದ್ರ ಪಾಟೀಲ, ಬಿ.ಡಿ. ಜತ್ತಿ ಸೇರಿದಂತೆ ಹಲವರನ್ನು ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡಿತ್ತು ಎಂದರು. ರಾಜಕಾರಣ
ಶಾಸಕಿ ಕನೀಜ್ ಫಾತೀಮಾ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಗೆಲ್ಲಿಸಿ ಕಳಿಸಿ ಎಂದು ಮನವಿ ಮಾಡಿದರು. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ದೇಶದ ಜನರ ಒಳಿತಿಗಾಗಿ ಹಾಗೂ ಸಂವಿಧಾನದ ರಕ್ಷಣೆಗಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಕೇವಲ ಅಲ್ಪಸಂಖ್ಯಾತರ ವಿರೋಧಿ ಯಲ್ಲ ಅದು ಎಲ್ಲರ ವಿರೋಧಿಯಾಗಿದೆ ಎಂದರು. ರಾಜಕಾರಣ
ಇದೆ ಸಂದರ್ಭದಲ್ಲಿ ಬಿಜೆಪಿಯಿಂದ ಹಲವಾರು ಕಾರ್ತಕರ್ತರು ಕಾಂಗ್ರೆಸ್ ಪಕ್ಷಕ್ಕೆ ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು. ವೇದಿಕೆಯ ಮೇಲೆ ಎಂ ಎಲ್ ಸಿ ಅರವಿಂದ ಅರಳಿ, ಡಿಸಿಸಿ ಅದ್ಯಕ್ಷ ಜಗದೇವ ಗುತ್ತೇದಾರ, ರೇಣುಕಪ್ಪ ಪೊಲೀಸ್ ಪಾಟೀಲ್, ದೇವೇಂದ್ರಪ್ಪ ಮರತೂರು, ರಾಜು ಕಪನೂರು, ದೇವೆಂದ್ರಪ್ಪ ಕಪನೂರು, ರಾಜಗೋಪಾಲರೆಡ್ಡಿ, ಲಚ್ಚಪ್ಪ ಜಮಾದಾರ, ರಮೇಶ ಬಿರಾದಾರ ಸೇರಿದಂತೆ ಹಲವರಿದ್ದರು.
ಇದನ್ನು ನೋಡಿ : ಮೈ ತುಂಬಾ ದ್ವೇಷ ತುಂಬಿಕೊಂಡಿರುವ ತೇಜಸ್ವಿ ಸೂರ್ಯನನ್ನು ಸೋಲಿಸುವುದೆ ಕೆಆರ್ಎಸ್ ಪಕ್ಷದ ಗುರಿ Janashakthi Media