ಬೆಂಗಳೂರು/ಶಿವಮೊಗ್ಗ: ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾ ಶಿರಹಟ್ಟಿಯ ಬಾಳೆಹೊಸೂರು ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮಿ ನಾಮಪತ್ರವನ್ನು ಹಿಂಪಡೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಮನವಿ ಮೇರೆಗೆ ಸ್ವಾಮಿ ನಾಮಪತ್ರದಿಂದ ಹಿಂದೆ ಸರಿದಿದ್ದಾರೆ.
ಸ್ವಾಮಿಯ ನಾಮಪತ್ರ ಸಲ್ಲಿಕೆಗೆ ಸೂಚಕರಾಗಿದ್ದ ಸಚ್ಚಿನ್ ಪಾಟೀಲ್ ಮತ್ತು ಅಮೃತ ಬಳ್ಳೊಳ್ಳಿ ಮೂಲಕ ನಾಮಪತ್ರ ವಾಪಸ್ ಪಡೆದಿದ್ದಾರೆ.
ಇದನ್ನು ಓದಿ : ಪ್ರವೇಶ ಶುಲ್ಕ ಪಡೆದ ಯೋಗ ಶಿಬಿರಗಳಿಗೆ ʼಸೇವಾ ತೆರಿಗೆʼ ಪಾವತಿಸಬೇಕು ಎಂದು ಪತಂಜಲಿ ಯೋಗಪೀಠಕ್ಕೆ ಸೂಚಿಸಿದ ಸುಪ್ರೀಂಕೋರ್ಟ್
ಈ ಕುರಿತು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಫಕೀರೇಶ್ವರ ಮಠ ಜಾತ್ಯಾತೀತ ಮಠವಾಗಿದ್ದು, ಅದರ ಸ್ವಾಮೀಜಿ ಧಿಂಗಾಲೇಶ್ವರ ಸ್ವಾಮೀಜಿಗಳು ಸಹ ಜಾತ್ಯಾತೀತರಾಗಿದ್ದು, ಜಾತ್ಯಾತೀತ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ತಮ್ಮ ನಾಮಪತ್ರ ಹಿಂಪಡೆಯಲು ಮನವಿ ಮಾಡಿರುವುದಾಗಿಯೂ ಅವರ ಬೆಂಬಲದ ಅಗತ್ಯವಿರುವುದಾಗಿಯೂ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇದನ್ನು ನೋಡಿ : ರಾಮ ನವಮಿ ವಿಶೇಷ : ರಾಮಯ್ಯ ಬಾರಯ್ಯ ಮೋದಿಯ ಕೇಳಯ್ಯ Janashakthi Media