ಬೆಂಗಳೂರು: ಬೆಂಗಳೂರಿನ ಕ್ರಿಯಾಮಾಧ್ಯಮ ಪುಸ್ತಕ ಪ್ರೀತಿಯ ಸಭಾಂಗಣದಲ್ಲಿ ಶನಿವಾರದ ಸಂಜೆ ಸಂವಿಧಾನದ ರಕ್ಷಣೆ ಸೇರಿದಂತೆ ಮಹಿಳೆಯರ ದುಃಸ್ಥಿತಿ ಕುರಿತ ಚರ್ಚೆಗೆ ವೇದಿಕೆಯಾಯಿತು. ಇದೇ ವೇಳೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹೊರ ತಂದಿರುವ “ಭಾರತದ ಮಹಿಳೆಯರ ಸ್ಥಿತಿ-ಗತಿಗಳು” ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.
ಕವಯತ್ರಿ, ಸ್ತ್ರೀವಾದಿ ಲೇಖಕಿ ಎಚ್.ಎಲ್. ಪುಷ್ಪಾ ಮಾತನಾಡಿ,ಮಹಿಳೆಯರ ಹತ್ಯೆ ಶೋಷಣೆಯನ್ನು ಚುನಾವಾಣಾ ದೃಷ್ಟಿಯಿಂದ ವಿವಿಧ ರೂಪ ನೀಡಲಾಗುತ್ತಿದೆ “ಸಂವಿಧಾನ ಚೆಂಡಾಗಿ” ಪರಿಣಮಿಸಿದೆ. ಸಂವಿಧಾನ ಕಾಮಧೇನು ಇದ್ದಂತೆ. ಸಂವಿಧಾನವನ್ನು ಉಳಿಸಲು ನಾವೆಲ್ಲ ಹೋರಾಡಬೇಕಿದೆ. ಮಹಿಳೆಯರು ಪ್ರಗತಿಪರ ಚಿಂತನೆಗಳನ್ನು ಹೊಂದುವುದು ತೀರಾ ಅಗತ್ಯವಾಗಿದೆ ಎಂದು ಕರೆ ನೀಡಿದರು.
ಲೇಖಕಿ ಡಾ.ವಸುಂಧರಾ ಭೂಪತಿ ಮಾತನಾಡಿ,ಹುಬ್ಬಳ್ಳಿಯ ನೇಹಾಕುಲಕರ್ಣಿ ಹತ್ಯೆಯನ್ನು ನಾವೆಲ್ಲಾ ಖಂಡಿಸಲೇಬೇಕೇ ಹೊರತು ಅದನ್ನು ರಾಜಕಾರಣಗೊಳಿಸುವುದು ಸರಿಯಲ್ಲ. ಈಗಿನ ಕೇಂದ್ರದ ಬಿಜೆಪಿ ಜನವಿರೋಧಿ ನೀತಿಯಿಂದಾಗಿ ಹತ್ತುವರ್ಷಗಳಲ್ಲಿ ಮಹಿಳೆಯರು 40ಲಕ್ಷ ಉದ್ಯೋಗ ಕಳೆದುಕೊಂಡಿದ್ದಾರೆ. ನೋಟು ಅಮಾನ್ಯೀಕರಣದಿಂದ ಸುಮಾರು 1ಕೋಟಿಗೂ ಹೆಚ್ಚುನಷ್ಟವಾಗಿದೆ.ರೈತರ ಆತ್ಮಹತ್ಯೆ ಸುದ್ದಿಯಾಗುತ್ತದೆಯೇ ಹೊರತು ರೈತಮಹಿಳೆಯರ ಸಂಕಷ್ಟಗಳನ್ನು ಯಾರೂ ನೋಡುತ್ತಿಲ್ಲ. ಅಸ್ಸಾಂನ ಕಾರ್ಯಾಚರಣೆಯಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಅತಂತ್ರರಾಗಿದ್ದಾರೆ, ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕಾಂಶದ ಕೊರತರ,ಆಶಾಕಾರ್ಯಕರ್ತರ ಕಾಯಂ ಆತಿ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಜೆಪಿಯವರ ಕೈಗೆ ರಾಜ್ಯದ ಜನರೇ ಚೊಂಬು ಕೊಟ್ಟು ಕಳುಹಿಸುತ್ತಾರೆ: ಪ್ರೊ. ಎಂ.ವಿ. ರಾಜೀವ್ ಗೌಡ
ಇಡೀ ದೇಶದಲ್ಲಿಎರಡು ಸರ್ಕಾರಿ ಲಕ್ಷ ಶಾಲೆಗಳು ಮುಚ್ಚಿಹೋಗಿದ್ದು,ಬಾಲಕಿಯರೂ ಇನ್ನೂ ಶಾಲೆಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ನಿರ್ಣಾಯಕರಾಗುತ್ತಾರೆ. ಆ ಕಾರಣಕ್ಕಾಗಿ ಕೋಮುವಾದಿ ಸರ್ಕಾರ ಬೇಡ.ಸ್ವಾತಂತ್ರ ಸಮಾನತೆ ದೂರಮಾಡುವ ಸರ್ಕಾರಗಳು ನಮಗೆ ಬೇಡ ಎಂದರು.
ದಲಿತ ಮಹಿಳೆಯರ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಮಾತನಾಡಿ, ಮಹಿಳೆಯರು ಮಾತನಾಡುವ ಧ್ವನಿಯೆತ್ತುವ ಅನಿವಾರ್ಯತೆ ಈ ಹತ್ತುವರ್ಷಗಳ ಜನವಿರೋಧಿ ಸರ್ಕಾರ ಮಾಡುತ್ತಿದೆ.ಕೇಂದ್ರದ ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿ ನೀಡಿದ್ದೇವೆ ಎನ್ನುವುದನ್ನು ಹಬ್ಬಿಸಿ ಚುಮಾವಣಾ ತಂತ್ರವನ್ನಾಗಿ ಮಾಡಿತ್ತು. ಮಹಿಳೆಯರ ಸೌಲಭ್ಯ,ವೇತನ ಕಡಿಮೆಯಾಗಿ ವಿಶ್ರಾಂತಿರಹಿತ ಮಹಿಳಾ ದೃಷ್ಟಿಕೋನ ಶುರುವಾಗಿದೆ. ಮನರೇಗಾದಲ್ಲಿ ಮಹಿಳೆಯರ ಕೆಲಸವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಸೃಷ್ಟಿಸಲಾಗಿದೆ. ದೇಶದ ಆರ್ಥಿಕತೆಯಲ್ಲಿ ಮಹಿಳೆಯರು ಭಾಗವಹಿಸಿದಂತೆ ಮಾಡಲಾಗಿದೆ ಎಂದರು.
ದೇಶದ ಆರ್ಥಿಕತೆ,ರಾಜಕೀಯತೆ.ಸಾಮಾಜಿಕತೆಯಲ್ಲಿ ಸ್ತ್ರೀಯರ ಸಬಲೀಕರಣವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಮಹಿಳೆಯ ಪ್ರಾತಿನಿಧ್ಯ ಕಸಿದುಕೊಳ್ಳಲಾಗತ್ತಿದೆ ಎಂದು ಇಂದಿರಾ ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು
ಲೇಖಕಿ ಎನ್.ಗಾಯತ್ರಿ ಮಾತನಾಡಿ,ಕಳೆದ ವರ್ಷ ಸಂವಿಧಾನ ರಚನೆಯ ಸಂಭ್ರಮದ ,75ನೇ ವರ್ಷವನ್ನು ಆಚರಿಸಿದೆವು. ಇದೆ ವೇಳೆ ಸಂವಿಧಾನದ ಮೇಲೆ ಆಳುವವರು ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ. ಸಂವಿಧಾನವನ್ನು ನಾವೀಗ ಸಂರಕ್ಷಣೆ ಮಾಡಬೇಕಿದೆ. ಕಳೆದ ಹತ್ತುವರ್ಷಗಳಲ್ಲಿ ಭಾರತೀಯ ಮಹಿಳೆಯರ ಹಾದಿ ಬಹಳ ಕಠಿಣವಾಗಿದೆ. ಪ್ರಜಾಸತ್ತಾ ತ್ಮಕ ಸಂವಿಧಾನವನ್ನು ಉಳಿಸಲು ಹೋರಾಡಬೇಕಿದೆ ಎಂದರು.
ಹಿರಿಯ ಪತ್ರಕರ್ತೆ ಮಂಜುಳಾ ಸಿ.ಜೆ ಮಾತನಾಡಿ,ರಾಜಕೀಯ ಪಕ್ಷಗಳು ರಾಜಕಾರಣಕ್ಕಾಗಿ ಮಾತ್ರ ಈಗ ಚುನಾವಣಾ ದೃಷ್ಟಿಯಿಂದ ಮಹಿಳಾ ಓಲೈಕೆಗೆ ಮುಂದಾಗಿದ್ದಾರೆ. ಹೀಗಾಗಿ ಮಹಿಳೆಯರು ಸಹ ರಾಜಕಾರಣವನ್ನು ಅರ್ಥಮಾಡಿಕೊಳ್ಳಲೇಬೇಕು. ಸಂಸತ್ತಿನಲ್ಲಿ ಶಾಸನಗಳನ್ನು ಮಹಿಳೆಯರ ಪರ ಮಾಡಬೇಕು. ಹೀಗಾಗಿ ಮಹಿಳೆಯರು ತಮ್ಮ ಹಕ್ಕಿಗಾಗಿ ಸಂವಿಧಾನವನ್ನು ಉಳಿಸುವ ಅನಿವಾರ್ಯತೆಯನ್ನು ನಾವು ಅರಿಯಬೇಕು. ಸ್ವಾಯತ್ತತೆಯ ಸಂಸ್ಥೆಗಳು ರಾಜಕೀಯಗೊಳ್ಳುತ್ತಿರುವುದು ಈ ದೇಶದ ಜನರ ದುಃಸ್ಥಿತಿಯಾಗಿದೆ ಎಂದು ಮಂಜುಳಾ ಬೇಸರವ್ಯಕ್ತಪಡಿಸಿದರು.
ವೇದಿಕೆಯ ಮೇಲೆಜನವಾದಿ ಮಹಿಳಾ ಸಂಘಟನೆಯ ರಾಜ್ಯಾಕಾರ್ಯದರ್ಶಿ ದೇವಿ, ವಕೀಲರಾದ ಅಖಿಲಾ ವಿದ್ಯಾಸಂದ್ರ, ಕೆ.ಎಸ್. ವಿಮಲಾ, ಬಸ್ಸಮ್ಮ, ದಲಿತ ಸಂಘಟನೆಯ ನಿರ್ಮಲಾ ಸೇರಿದಂತೆ ಅನೇಕರಿದ್ದರು.
ಇದನ್ನೂ ನೋಡಿ: ಗ್ಲೆನ್‌ಮಾರ್ಕ್ ನಿಂದ ಚುನಾವಣಾ ಬಾಂಡ್ ಖರೀದಿ : ಕೇಂದ್ರ ಸರ್ಕಾರದ ಕೊಲೆಗಡುಕತನ ಬಯಲು – ಬಾನು ಮುಷ್ತಾಕ್