ಬೆಂಗಳೂರು: ಭಾರತದ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ದೂರದರ್ಶನ ಪ್ರಸಾರ ಭಾರತಿಯ ದೂರದರ್ಶನ ತನ್ನ ಹಿಂದಿ ಮತ್ತು ಇಂಗ್ಲಿಷ್ ಚಾನೆಲ್ಗಳ ಲೋಗೋ ಮತ್ತು ಅಕ್ಷರದ ಬಣ್ಣಗಳನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿದೆ.
ನವೀಕರಿಸಿದ ಲೋಗೊಗಳು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಜಾರಿಗೆ ಬಂದಿದ್ದು, ಹಿಂದಿನ ಲೋಗೋ ಹಳದಿ ಮತ್ತು ನೀಲಿ ಬಣ್ಣದ್ದಾಗಿತ್ತು. ಲೋಗೋ ಜೊತೆಗೆ ಚಾನೆಲ್ನ ಸ್ಕ್ರೀನಿಂಗ್ ಬಣ್ಣವನ್ನೂ ಕೇಸರಿ ಬಣ್ಣದಿಂದ ಮಾಡಲಾಗಿದೆ.
ಪ್ರಸ್ತುತ ಬದಲಾವಣೆಯ ಕುರಿತು ದೂರದರ್ಶನ ವಿವರಣೆ ನೀಡಿದ್ದು, “ನಮ್ಮ ಮೌಲ್ಯಗಳು ಒಂದೇ ಆಗಿರುವಾಗ, ನಾವು ಈಗ ಹೊಸ ಅವತಾರದಲ್ಲಿ ಬಂದಿದ್ದೇವೆ. ಹಿಂದೆಂದಿಗಿಂತಲೂ ಸುದ್ದಿ ಪ್ರಯಾಣಕ್ಕೆ ಸಿದ್ಧರಾಗಿ. ಎಲ್ಲಾ ಹೊಸ ಡಿಡಿ ನ್ಯೂಸ್ ಅನ್ನು ಅನುಭವಿಸಿ! ” ಎಂದು ಡಿಡಿ ನ್ಯೂಸ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನು ಓದಿ : ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ: ನ್ಯಾಯ ಕೊಡಿಸಲು ರಾಷ್ಟ್ರಪತಿಗಳಿಗೆ ಕರವೇ ನಾರಾಯಣಗೌಡ ಮನವಿ
ದೂರದರ್ಶನವು ನಿಖರ ಮತ್ತು ಪ್ರಾಮಾಣಿಕ ಸುದ್ದಿಗಳನ್ನು ತರುತ್ತಿದೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಅಲ್ಲದೇ ಹೊಸ ನೋಟ ಮತ್ತು ಭಾವನೆಯ ಜೊತೆಗೆ ಸತ್ಯ ಮತ್ತು ಧೈರ್ಯದ ಪತ್ರಿಕೋದ್ಯಮವನ್ನು ಮಾಡುತ್ತಿದೆ ಎಂದು ಡಿಡಿ ನ್ಯೂಸ್ನ ಮಹಾನಿರ್ದೇಶಕರು ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ಡಿಡಿಯ ಇದ್ದಕ್ಕಿದ್ದಂತೆ ಕೇಸರಿ ಬಣ್ಣಕ್ಕೆ ಬದಲಾವಣೆಯಾಗಿದ್ದಕ್ಕೆ ವಿವಿಧ ವಲಯಗಳಿಂದ ವ್ಯಾಪಕ ಟೀಕೆಗಳು ದೂರದರ್ಶನ ವಿರುದ್ಧ ವ್ಯಕ್ತವಾಗುತ್ತಿವೆ. ದೂರದರ್ಶನ ತನ್ನ ಸುದ್ದಿ ಪ್ರಸಾರ ಮತ್ತು ಕಾರ್ಯಕ್ರಮಗಳಲ್ಲಿ ಆಡಳಿತ ಪಕ್ಷದ ಕಡೆಗೆ ಪಕ್ಷಪಾತವನ್ನು ಹೊಂದಿದೆ ಎಂದು ಆರೋಪಿಸಲಾಗಿದ್ದು, ಪ್ರತಿಪಕ್ಷದ ಆರೋಪಗಳು ಎಲ್ಲವೂ ಕೇಸರಿಮಯ ಎಂದಿವೆ.
ಇದನ್ನು ನೋಡಿ : ದ್ವೇಷ ಬಿಟ್ಟು ದೇಶ ಕಟ್ಟಿ – ಡಾ ಹಂಸಲೇಖ Janashakthi Media