ವಡಕರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಡಕರ ಕ್ಷೇತ್ರದ ಎಲ್‌ಡಿಎಫ್ ಅಭ್ಯರ್ಥಿ ಕೆ ಕೆ ಶೈಲಜಾ ಅವರ ಮೇಲೆ ಇತ್ತೀಚೆಗೆ ನಡೆದ ಸೈಬರ್ ದಾಳಿ ಹಾಗೂ ಅಶ್ಲೀಲ ಅಪಪ್ರಚಾರದಲ್ಲಿ ತೊಡಗಿರುವ ಈ ದಾಳಿಗಳು ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೈಬರ್ ದಾಳಿ
ಈ ದಾಳಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ತೀವ್ರವಾಗಿ ಖಂಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್, ಚುನಾವಣಾ ಪ್ರಚಾರದ ಸಮಯದಲ್ಲಿ ಜವಾಬ್ದಾರಿಯುತ ನಡವಳಿಕೆಯ ಅಗತ್ಯವಿದೆ ಆದರೆ, ಈ ರೀತಿಯ ದಾಳಿ ಹೇಯ ಕೃತ್ಯ ಎಂದು ಖಂಡಿಸಿ,ಟೀಚರ್ ಶೈಲಜಾಗೆ ತಮ್ಮ ಬೆಂಬಲವಿರುವುದಾಗಿ ಪುನರುಚ್ಚರಿಸಿದರು.ಅಲ್ಲದೇ ಸೈಬರ್ ಕಿರುಕುಳಕ್ಕೆ ಕಾರಣರಾದವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಪಿಣರಾಯಿ ವಿಜಯನ್ ಒತ್ತಾಯಿಸಿದರು.
ಇದನ್ನು ಓದಿ : ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು
ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸುತ್ತಾ, ಸೀತಾರಾಂ ಯೆಚೂರಿ, ಸೈಬರ್ ದಾಳಿಯನ್ನು ಖಂಡನೀಯ ಎಂದರು. ರಾಜಕೀಯ ವ್ಯಕ್ತಿಗಳ ಇಮೇಜ್‌ಗೆ ಕಳಂಕ ತರುವ ಉದ್ದೇಶದಿಂದ ಇಂತಹ ದುರುದ್ದೇಶಪೂರಿತ ತಂತ್ರಗಳನ್ನು ಖಂಡಿಸುವಲ್ಲಿ ಎಲ್ಲರೂ ಒಗ್ಗಟ್ಟಾಗಿ ಏಕತೆಯನ್ನು ಮರೆಯಬೇಕೆಂದು ಕರೆ ನೀಡಿದರು. ಕೆ.ಕೆ ಶೈಲಜಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಖಚಿತ ಎಂಬ ಕಾರಣಕ್ಕೆ ಈ ದಾಳಿಗಳು ನಡೆಯುತ್ತಿವೆ ಎಂದು ಯೆಚೂರಿ ಸ್ಪಷ್ಟಪಡಿಸಿದರು.
ರಾಜಕೀಯ ಭಾಷಣದಲ್ಲಿ ನೈತಿಕ ಮಾನದಂಡಗಳನ್ನು ಎತ್ತಿಹಿಡಿಯುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಯೆಚೂರಿ, ಯಾವುದೇ ರೀತಿಯ ಆನ್‌ಲೈನ್ ನಿಂದನೆ ಅಥವಾ ಕಿರುಕುಳದ ವಿರುದ್ಧ ಒಗ್ಹಟ್ಟಿನ ಧನಿಯಾಗಬೇಕೆಂದು ಐಕ್ಯರಂಗವನ್ನು ಒತ್ತಾಯಿಸಿದರು.
ಕೆ. ಕೆ ಶೈಲಜಾ ವಿರುದ್ಧದ ಸೈಬರ್ ದಾಳಿಯ ಘಟನೆಗಳು ಚುನಾವಣಾ ಅವಧಿಯಲ್ಲಿ ತಪ್ಪು ಮಾಹಿತಿ ಮತ್ತು ಮಾನಹಾನಿಕರ ವಿಷಯವನ್ನು ಹರಡುತ್ತಿರುವ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ದುರುಪಯೋಗದ ಬಗ್ಗೆ ಸೀತಾರಾಮ್ ಯೆಚೂರಿ ಕಳವಳ ವ್ಯಕ್ತಪಡಿಸಿದರು.
ಇದನ್ನು ನೋಡಿ : 2024ರ ಚುನಾವಣೆಯಲ್ಲಿಎಡಪಕ್ಷಗಳ ಪಾತ್ರವೇನು? Janashakthi Media