ಅಣಕು ಮತದಾನದ ವೇಳೆ ಬಿಜೆಪಿಗೆ ಮತ : ಇವಿಎಂ ಬಗ್ಗೆ ಹೆಚ್ಚಾದ ಅನುಮಾನ

ಕೇರಳ : ಕಾಸರಗೋಡಿನಲ್ಲಿ ಅಣಕು ಮತದಾನದ ಸಂದರ್ಭದಲ್ಲಿ ಯಾವುದೆ ಬಟನ್‌ ಒತ್ತಿದರು ಅದು ಬಿಜೆಪಿ ಪರವಾಗಿ ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಇವಿಎಂಗಳನ್ನು  ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್, ಭಾರತೀಯ ಚುನಾವಣಾ ಆಯೋಗಕ್ಕೆ  ಆದೇಶಿಸಿದೆ.

VVPAT (ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳು ಬಿಜೆಪಿಯ ಕಮಲದ ಚಿಹ್ನೆಗೆ ತಲಾ ಒಂದು ಹೆಚ್ಚುವರಿ ಸ್ಲಿಪ್ ಅನ್ನು ಮುದ್ರಿಸಿವೆ. ಎರಡನೇ ಸುತ್ತಿನ ಅಣಕು ಮತದಾನದ ವೇಳೆಯೂ ಅದೇ ಮೂರು ದೋಷಪೂರಿತ VVPAT ಯಂತ್ರಗಳು ಮತ್ತೊಮ್ಮೆ ಕಮಲದ ಚಿಹ್ನೆಯೊಂದಿಗೆ ಹೆಚ್ಚುವರಿ ಚೀಟಿಯನ್ನು ಮುದ್ರಿಸಿವೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ ನಂತರ ನ್ಯಾ.ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠವು ಇವಿಎಂ ಸಮಸ್ಯೆಯನ್ನು ಪರಿಶೀಲಿಸುವಂತೆ ಇಸಿಐಗೆ ಸೂಚಿಸಿತು.

ಇದನ್ನು ಓದಿ : ಕೆ.ಕೆ.ಶೈಲಜಾ ವಿರುದ್ಧ ಸೈಬರ್ ದಾಳಿ : ಕಣ್ಣೂರಿನಲ್ಲಿ ಐಯುಎಂಎಲ್ ನಾಯಕನ ಮೇಲೆ ಪ್ರಕರಣ ದಾಖಲು

ಪ್ರತಿ ಮತವನ್ನು ಚುನಾವಣಾ ಸಮಯದಲ್ಲಿ ವಿವಿಪ್ಯಾಟ್ ಸ್ಲಿಪ್‍ಗಳೊಂದಿಗೆ ತಾಳೆ ಮಾಡಲು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್ ಪ್ರತಿಯೊಂದು ಇವಿಎಂ ಮತವನ್ನು ವಿವಿಪ್ಯಾಟ್ ಸ್ಲಿಪ್‍ಗಳಿಗೆ ಹೋಲಿಸಿ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು.

ಈ ಕುರಿತು ಕಾಸರಗೋಡು ಲೋಕಸಭಾ ಕ್ಷೇತ್ರದ ಎಲ್‌ಡಿಎಫ್ ಅಭ್ಯರ್ಥಿ ಹಾಗೂ ಸಿಪಿಎಂ ಮುಖಂಡ ಎಂ.ವಿ.ಬಾಲಕೃಷ್ಣನ್ ಅವರು ದೋಷಗಳ ಪರಿಶೀಲನೆಗಾಗಿ ಜಿಲ್ಲಾ ಚುನಾವಣಾಧಿಕಾರಿಯಾಗಿ ನಿಯೋಜಿತವಾಗಿರುವ ಜಿಲ್ಲಾಧಿಕಾರಿ ಇನ್‌ಬಶೇಖರ್ ಕೆ ದೂರು ಸಲ್ಲಿಸಿದ್ದಾರೆ. ಕಾಸರಗೋಡಿನಲ್ಲಿ ಬಿಜೆಪಿಯ ಎಂಎಲ್ ಅಶ್ವಿನಿ ಎನ್‌ಡಿಎ ಅಭ್ಯರ್ಥಿಯಾಗಿದ್ದಾರೆ.

ಇದನ್ನು ನೋಡಿ : ಬಿಜೆಪಿ ಪ್ರಣಾಳಿಕೆ : ಇವತ್ತೇನು ಎಂಬುದಕ್ಕೆ ಉತ್ತರ ಇಲ್ಲ – 25 ವರ್ಷ ಕಾಯಬೇಕು Janashakthi Media

Donate Janashakthi Media

Leave a Reply

Your email address will not be published. Required fields are marked *