ಕಣ್ಣೂರು: ಕೇರಳದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಭರದಿಂದ ನಡೆದಿದೆ. ಇದರ ನಡುವೆಯೇ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಾರ್ಯಕರ್ತ , ಸಿಪಿಐ(ಎಂ) ಹಿರಿಯ ನಾಯಕಿ ಕೆ. ಶೈಲಜಾ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನಕಲಿ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ.
ಶಾಸಕಿ ಕೆಕೆ ಶೈಲಜಾ ಟೀಚರ್ ವಡಕರದಿಂದ ಎಲ್ಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಕಾಂಗ್ರೆಸ್ನ ಶಫಿ ಪರಂಬಿಲ್ ಮತ್ತು ಬಿಜೆಪಿಯ ಪ್ರಫುಲ್ ಕೃಷ್ಣ ಪ್ರತಿಸ್ಪರ್ಧಿಗಳಾಗಿದ್ದಾರೆ. ಶೈಲಜಾ ಟೀಚರ್ಗೆ ಉತ್ತಮ ಸ್ಪಂದನೆ ಸಿಗುತ್ತಿದ್ದು ಇದನ್ನು ಸಹಿಸಿಕೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಈ ಕುರಿತಾಗಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹೊಸ ಮಾಹೆ ಗ್ರಾಮ ಪಂಚಾಯತ್ನ 3ನೇ ವಾರ್ಡ್ (ಪೆರಿಂಗಡಿ) ಸದಸ್ಯ ಹಾಗೂ ಐಯುಎಂಎಲ್ ಪಂಚಾಯತ್ ಸಮಿತಿಯ ಕಾರ್ಯದರ್ಶಿ ಟಿ.ಎಚ್.ಅಸ್ಲಂ ವಿರುದ್ಧ ವಾಟ್ಸಾಪ್ ಗ್ರೂಪ್ನಲ್ಲಿ ಎಲ್ಡಿಎಫ್ ಅಭ್ಯರ್ಥಿ ವಿರುದ್ಧ ಕಪೋಲಕಲ್ಪಿತ ವಿಡಿಯೋ ಶೇರ್ ಮಾಡಿದ್ದರು. ʻಆರೋಪಿ ವಿರುದ್ಧ ಐಪಿಸಿಯ ಸೆಕ್ಷನ್ 153 ಮತ್ತು ಕೇರಳ ಪೊಲೀಸ್ ಕಾಯಿದೆಯ 120 (ಒ) ಅಡಿ ಪ್ರಕರಣ ದಾಖಲಿಸಿದ್ದೇವೆ. ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಕಲಿ ವೀಡಿಯೊಗಳು ಮತ್ತು ಫೋಟೋಗಳು ಬಳಸಿಕೊಂಡು ಶೈಲಜಾ ಟೀಚರ್ ಕುರಿತು ತುಚ್ಯವಾಗಿ ಪೋಸ್ಟ್ ಮಾಡಲಾಗಿತ್ತು. ‘ಅಭಿಸಾರಿಕಾ’ (ವೇಶ್ಯೆ) ಮತ್ತು ‘ಪೂತನಾ’ ಎಂದು ಕರೆಯಲಾಗಿದೆ. ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳ ಮೇಲೆ ದ್ವೇಷ ಮತ್ತು ಗಲಭೆಯನ್ನು ಹರಡಲು ಎಡಿಟ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಜಂಟಿ ಗೋಷ್ಠಿ ; ಬಿಜೆಪಿ ವಿರುದ್ಧ ವಾಗ್ದಾಳಿ
ಮಾತೃಭೂಮಿ ಆನ್ಲೈನ್ ಹೆಸರಿನಲ್ಲಿ ಮತ್ತೊಂದು ನಕಲಿ ಸಂದೇಶದಲ್ಲಿ ಲವ್ ಜಿಹಾದ್ ಕುರಿತು ಕಾಮೆಂಟ್ ಮಾಡಲಾಗಿದೆ. ದೂರುದಾರರು ಅಥವಾ ಮಾತೃಭೂಮಿ ಆನ್ಲೈನ್ ಎಂದಿಗೂ ಅಂತಹ ಹೇಳಿಕೆಯನ್ನು ನೀಡಿಲ್ಲ. ಮತದಾರರಲ್ಲಿ ಒಡಕು ಮತ್ತು ತಪ್ಪು ಮನೋಭಾವನೆ ಸೃಷ್ಟಿಸಲು ನಕಲಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಿಂದ ಸಂದೇಶಗಳನ್ನು ಹರಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮುಸ್ಲಿಂ ವಿರೋಧಿಗಳು ವಾಹಿನಿಯೊಂದರ ಸಂದರ್ಶನದ ಕೆಲವು ಭಾಗಗಳನ್ನು ಹೊರತೆಗೆದು ಶೈಲಜಾ ಅವರ ವಿರುದ್ದ ಕೆಟ್ಟ ಭಾವನೆ ಬಿಂಬಿಸಲು ಹರಡಲಾಗಿದೆ.
“ಎಂಟೆ ವಡಕರ ಕೆಎಲ್ 18” ಹೆಸರಿನ ಫೇಸ್ಬುಕ್ ಪುಟವು ಸುಳ್ಳು ಪ್ರಚಾರವನ್ನು ನಡೆಸುತ್ತಿದೆ. ಸಾಮಾಜಿಕ ಮಾಧ್ಯಮ ಗುಂಪು “ಟ್ರೋಲ್ ರಿಪೋರ್ಟರ್ ಟಿಆರ್” ಮುಖ್ಯಮಂತ್ರಿ ಮತ್ತು ಅವರ ಮಾರ್ಫ್ ಮಾಡಿದ ಚಿತ್ರಗಳೊಂದಿಗೆ ಅಶ್ಲೀಲ ನಕಲಿ ಚಿತ್ರವನ್ನು ಪ್ರಕಟಿಸಿದೆ. ಈ ನಕಲಿ ಪೋಸ್ಟರ್ಗಳು ಮತ್ತು ವೀಡಿಯೊಗಳಲ್ಲಿ ಶೈಲಜಾರನ್ನು ರಾಕ್ಷಸಿ ಮತ್ತು ಇತರ ಅಶ್ಲೀಲ ಹೆಸರುಗಳು ಎಂದು ಕರೆಯಲಾಗಿದೆ. ನಕಲಿ ಪ್ರಚಾರದ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಶೈಲಜಾರನ್ನು ಕೆಟ್ಟದಾಗಿ ಚಿತ್ರಿಸುತ್ತಿದ್ದಾರೆ, ಈ ಈ ರೀತಿ ಸುಳ್ಳು ಸೈಬರ್ ಕ್ರೈಂ ದಾಳಿ ಮಾಡುವ ಮೂಲಕ ಮತದಾರರ ಮೇಲೆ ನಕಾರಾತ್ಮಕ ಪ್ರಭಾವ ಬೀರಲು ಯುಡಿಎಫ್ ಅಭ್ಯರ್ಥಿಯ ಕೆಲವು ಹೇಳಿಕೆಗಳನ್ನು ಹೈಲೈಟ್ ಮಾಡಿದ್ದಾರೆ.
ಯುಡಿಎಫ್ ಅಭ್ಯರ್ಥಿ ಮತ್ತು ಆತನ ಸಹಚರರು ತನ್ನ ವಿರುದ್ಧ ನಕಲಿ ಸಂದೇಶಗಳು ಮತ್ತು ಚಿತ್ರಗಳನ್ನು ಬಳಸಿಕೊಂಡು ಇಂತಹ ದುರುದ್ದೇಶಪೂರಿತ ಪ್ರಚಾರವನ್ನು ನಡೆಸಲು ಸಂಚು ರೂಪಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಏತನ್ಮಧ್ಯೆ ಸಿಪಿಐಎಂ ನಾಯಕತ್ವವು ಸೈಬರ್ ದಾಳಿಗಾಗಿ ಯುಡಿಎಫ್ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು “ಕಾಂಗ್ರೆಸ್ ಅಭ್ಯರ್ಥಿಗಳ ಸಾಮಾಜಿಕ ಮಾಧ್ಯಮ ತಂಡವು ಶೈಲಜಾ ಟೀಚರ್ ವಿರುದ್ಧ ನಾಚಿಕೆಗೇಡಿನ ಲೈಂಗಿಕ ಭಾಷೆ ಬಳಸಿರುವುದು ಅತ್ಯಂತ ಖಂಡನೀಯ. ಇದು ಕೇರಳದ ಮಹಿಳೆಯರಿಗೆ ಮಾಡಿದ ಅವಮಾನ. ಹತಾಶೆಗೊಂಡಿರುವ ಕಾಂಗ್ರೆಸ್ ಸಿಪಿಐಎಂ ಅಭ್ಯರ್ಥಿ ವಿರುದ್ಧ ಇಂತಹ ಹೊಲಸು ಭಾಷೆಯನ್ನು ಬಳಸುತ್ತಿದೆ ಎಂದು ಸಿಪಿಐಎಂ ಪಾಲಿಟ್ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಹೇಳಿದ್ದಾರೆ. ಯುಡಿಎಫ್ ಅಭ್ಯರ್ಥಿ ಮತ್ತು ಕಾಂಗ್ರೆಸ್ ನಾಯಕರು ಶೈಲಜಾ ವಿರುದ್ಧ ಸೈಬರ್ ದಾಳಿ ನಡೆಸುತ್ತಿರುವು ಅವರ ಯೋಗ್ಯತೆಯನ್ನು ತೋರಿಸುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಹೇಳಿದ್ದಾರೆ. ಸೈಬರ್ ದಾಳಿಯನ್ನು ಕೊನೆಗಾಣಿಸಲು ಯುಡಿಎಫ್ ನಾಯಕತ್ವ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ನಾವು ಬಿಜೆಪಿಗೆ ಓಟು ಹಾಕುವುದಿಲ್ಲ – ಕಟ್ಟಡ ಕಾರ್ಮಿಕರ ನಿರ್ಧಾರ Janashakthi Media