– ವಿಶೇಷ ವರದಿ:ಸಂಧ್ಯಾ ಸೊರಬ
ಹೇಳಿಕೇಳಿ ಕರ್ನಾಟಕದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ರಾಜಕೀಯವಾಗಿ ಪ್ರಬಲವಾಗಿರುವಂತಹ ಸಮುದಾಯಗಳೆಂದು ಗುರುತಿಸಿಕೊಂಡಿವೆ. ಲಿಂಗಾಯತ ನಾಯಕತ್ವದ ಚರ್ಚೆ ಸದ್ಯಕ್ಕೆ ಅಷ್ಟಾಗಿಲ್ಲದಿದ್ದರೂ ಮುನ್ನಲೆಗೆ ಈಗ ಬಂದ ವಿಚಾರ ಹಾಗೂ ಸದ್ಯ ಕರ್ನಾಟಕದ ರಾಜಕಾರಣದಲ್ಲಿ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಎದ್ದಿರುವ ವಿಚಾರವೆಂದರೆ, ಅದು “ ಒಕ್ಕಲಿಗ ರಾಜಕಾರಣ”. ಲೋಕಸಭಾ ಚುನಾವಣಾ ದೃಷ್ಟಿಯಿಂದ ಹಾಗೂ ಅಸ್ಮಿತೆಯ ದೃಷ್ಟಿಯಿಂದ ಸದ್ಯಕ್ಕೆ ಎದ್ದಿರುವ ತಲೆದೋರಿರುವ ಪ್ರಶ್ನೆ ಮತ್ತು ರಾಜಕಾರಣದ ನಾಯಕತ್ವ ಮುನ್ನಲೆಗೆ ಬಂದಿರುವುದು ಈ ಒಕ್ಕಲಿಗ ಸಮುದಾಯದ ವಿಚಾರ. ಮುನ್ನಲೆಗೆ
ಅಂದ್ಹಾಗೆ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಈ ಒಕ್ಕಲಿಗ ಸಮುದಾಯದ ರಾಜಕೀಯ ಬೆಳವಣಿಗೆ ಮುನ್ನೆಲೆಗೆ ಕಾಣಿಸಿಕೊಂಡಿತು. ಅಂದಮಾತ್ರಕ್ಕೆ ಇದು ದಿಢೀರಂತಾಗಲೀ, ಚರ್ಚೆಗಾಗಲೀ ಬಂದ ವಿಷಯವಸ್ತುವಲ್ಲ. ಮುನ್ನಲೆಗೆ
ಈ ಒಕ್ಕಲಿಗ ನಾಯಕತ್ವದ ಮೇಲೆ ರಾಜ್ಯದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ಈ ಮೂರು ಪಕ್ಷಗಳಿಗೂ ಕಣ್ಣುಬಿದ್ದಾಗಿದೆ. ಈಗಾಗಲೇ ಹೇಳಿದಂತೆ ರಾಜಕೀಯವಾಗಿ ಪ್ರಬಲ ಎಂದು ಗುರುತಿಸಿಕೊಂಡಿರುವ ಈ ಒಕ್ಕಲಿಗ ನಾಯಕತ್ವದ ಹೋರಾಟ ಇಂದು ನಿನ್ನೆಯಿಂದಾಲೀ ಅಥವಾ ಲೋಕಸಭಾ ಚುನಾವಣೆ ಬಂದಿದ್ದರಿಂದಾಗಲೀ ಪ್ರತ್ಯಕ್ಷಗೊಂಡಿಲ್ಲ. ಪಕ್ಷಗಳು ಗೆಲ್ಲಬೇಕೆಂಬ ಹೋರಾಟ ಒಂದುಕಡೆಯಾದರೆ, ಇನ್ನೊಂದು ಕಡೆ ಈ ಸಮುದಾಯಕ್ಕೆ ನಾನು ನಾಯಕನಾಗಬೇಕು ನಾನು ನಾಯಕನಾಗಬೇಕೆಂಬ ವೈಯಕ್ತಿಕ ಅಸ್ಮಿತೆ ಹೆಚ್ಚಾಗಿ ಇರುವುದು ತಲೆದೋರಿದೆ.
ಬದಲಾದ ರಾಜಕಾರಣದ ವ್ಯವಸ್ಥೆಯಲ್ಲಿ ಈ ಬೆಳವಣಿಗೆಯಾದರೂ, ಈ ಹಿಂದಿನ ಕರ್ನಾಟಕ ರಾಜಕಾರಣವನ್ನು ನೋಡಲು ಹೋದರೆ, ದೇಶದಲ್ಲಿ ನಡೆದಂತಹ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಂದಿನ ಮೈಸೂರು ರಾಜ್ಯದ ಸಿಎಂ ಆಗಿದ್ದಂತಹ ರಾಮನಗರ (ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ್ದ) ಅಂದಿನ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದ ಕೆಂಗಲ್ಹನುಮಂತಯ್ಯ ,ರಾಮನಗರದವರೇ ಆಗಿದ್ದರೂ ಒಕ್ಕಲಿಗ ಪಾರುಪತ್ಯಕ್ಕಾಗಲೀ, ನಾಯಕತ್ವಕ್ಕಾಗಲೀ ಕೇಳಿದವರಲ್ಲ. ಬಳಿಕ ಮಾಜಿ ಸಿಎಂ ಕೆ.ಸಿ.ರೆಡ್ಡಿ ಇದೇ ಸಮುದಾಯಕ್ಕೆ ಸೇರಿದ್ದರೂ ನಾಯಕತ್ವಕ್ಕಾಗಿ ಇವರ ಮಧ್ಯೆ ಸ್ಪರ್ಧೆಯಾಗಲೀ ವೈಷಮ್ಯವಾಗಲೀ ಏರ್ಪಟ್ಟಿರಲಿಲ್ಲ.
ಇದನ್ನು ಓದಿ : ಎನ್.ಐ.ಎ ಹಾಗೂ ಕರ್ನಾಟಕ ಪೊಲೀಸ್ ಕಾರ್ಯ ಶ್ಲಾಘನೀಯ: ಮುಖ್ಯಮಂತ್ರಿ ಸಿದ್ದರಾಮಯ್ಯ
ಒಕ್ಕಲಿಗ ಸಮುದಾಯದಿಂದ ಕರ್ನಾಟಕಕ್ಕೆ 6 ಜನ ಮುಖ್ಯಮಂತ್ರಿಯಾಗಿದ್ದಾರೆ. ಹಿಂದೆ ಕಾಂಗ್ರೆಸ್ನಿಂದ ಎಸ್.ಎಂ.ಕೃಷ್ಣ ಸಿಎಂ ಆಗಿದ್ದರೂ ಹೆಚ್.ಡಿ.ದೇವೇಗೌಡರಿಗೂ ಇವರಿಗೂ ಒಕ್ಕಲಿಗ ಸಮುದಾಯದ ಹೋರಾಟ ಸಣ್ಣದಾಗಿತ್ತು ಎನ್ನುತ್ತವೆ ಮೂಲಗಳು. ಅಂದಿನ ಮೈಸೂರು ರಾಜ್ಯ ಅಂದರೆ, ಹಳೆಯ ಮೈಸೂರು ಭಾಗದ ಹತ್ತು ಜಿಲ್ಲೆಗಳಲ್ಲಿ ಒಕ್ಕಲಿಗರ ಪ್ರಾಧಾನ್ಯತೆ ಹೆಚ್ಚಾಗಿದ್ದರೂ, ಅತೀ ಹೆಚ್ಚು ಒಕ್ಕಲಿಗ ಸಮುದಾಯವನ್ನು ಮಂಡ್ಯ ಮತ್ತು ಹಾಸನದಲ್ಲಿ ಕಾಣಬಹುದು. ಮಂಡ್ಯದಲ್ಲಿ ಶೇ.35, ಹಾಸನ ಜಿಲ್ಲೆಯಲ್ಲಿ ಶೇ.40 ಇರಬಹುದು. ಹಳೆಯ ಮೈಸೂರು ಭಾಗದಲ್ಲಿ ಮೂರು ಜಿಲ್ಲೆಗಳಲ್ಲಿ ಈಗ ಮಾತ್ರ ಒಕ್ಕಲಿಗರ ಪ್ರಾಬಲ್ಯ ಕಂಡುಬರುತ್ತಿದೆ.
ಗಮನಾರ್ಹ ವಿಷಯವೇನೆಂದರೆ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ಇದೇ ಸಮುದಾಯಕ್ಕೆ ಸೇರಿದವರು, ಇನ್ನು ಜೆಡಿಎಸ್ನ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿಯತ್ತ ಬರೋದಾದ್ರೆ ಆರ್.ಅಶೋಕ್, ಅಶ್ವತ್ಥನಾರಾಯಣ ಇದ್ದರೂ ಅವರೆಂದಿಗೂ ಒಕ್ಕಲಿಗರ ನಾಯಕರಾಗಲೇ ಇಲ್ಲ. ಅವರು ಪಕ್ಷಕ್ಕಷ್ಟೇ ಸೀಮಿತವಾದರು. ಹೆಚ್.ಡಿ. ದೇವೇಗೌಡರು ರಾಜಕಾರಣಕ್ಕೆ ಬಂದ ನಂತರ ಒಕ್ಕಲಿಗರ ಅಸ್ಮಿತೆ ಎನ್ನುವುದು ಸೃಷ್ಟಿಯಾಯಿತು.ಅಧಿಕಾರದಲ್ಲಿ ಅವರು ಇರೋವರೆಗೂ ಈ ಸಮಾಜ ಅವರನ್ನು ಬೆಂಬಲಿಸುತ್ತಾ ಬಂದಿತು. ದೊಡ್ಡಗೌಡರು ಒಕ್ಕಲಿಗರ ಪ್ರಶ್ನಾತೀತ ನಾಯಕರಾಗಿದ್ದರು. ಇವರ ನಂತರ ಎರಡು ಬಾರಿ ಬೇರೆಪಕ್ಷಗಳ ಮೈತ್ರಿಯಿಂದ ಸಿಎಂ ಆಗಿದ್ದಂತಹ ಹೆಚ್.ಡಿ.ಕುಮಾರಸ್ವಾಮಿ , ತಮ್ಮ ತಂದೆಯ ಒಕ್ಕಲಿಗ ನಾಯಕತ್ವವನ್ನು ಮುಂದುವರೆಸಲು ಪೈಪೋಟಿಗೆ ಬಿದ್ದಂತಿದೆ.
ಬಿಜೆಪಿ, ಕುಸಿಯುತ್ತಿದ್ದ ತೆನೆಹೊತ್ತ ಮಹಿಳೆಯ ಜೊತೆ ಸಖ್ಯ ಬೆಳೆಸಿ ಬೆಲ ನೀಡಲು ಹೊರಟಿದೆಯೋ ಅಥವಾ ಈ ಬಾರಿ ಹಳೆಯ ಮೈಸೂರು ಭಾಗವನ್ನು ಟಾರ್ಗೆಟ್ಮಾಡಿದ್ದಕ್ಕಾಗಿಯೇ ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯವನ್ನು ಗುರಿಯಾಗಿಸಿಕೊಂಡೇ ಮೈತ್ರಿ ಮಾಡಿಕೊಂಡಿತೋ ಗೊತ್ತಿಲ್ಲ. ಒಟ್ಟು ಎರಡೂಲೆಕ್ಕಾಚಾರದಡಿ ಈ ಮೈತ್ರಿಯಾಗಿದ್ದಂತೂ ನಿಜ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಒಕ್ಕಲಿಗ ಸಮುದಾಯದಿಂದ 41 ಸ್ಥಾನಗಳನ್ನಾದರೂ ಪಡೆಯುತ್ತೇನೆ ಎಂಬ ಲೆಕ್ಕಾಚಾರ ಹೆಚ್.ಡಿ.ಕುಮಾರಸ್ವಾಮಿಗೆ ಇತ್ತು. ಆದರೆ, ಆಗಿದ್ದೇ ಉಲ್ಟಾ. ಇದೇ ಚುನಾವಣೆ ವೇಳೆ ಒಕ್ಕಲಿಗ ಸಮುದಾಯದವರು ಸಿಎಂ ಆಗುತ್ತಾರೆ ಎನ್ನುವ ಸೂಚನೆಯೊಂದನ್ನು ಡಿ.ಕೆ.ಶಿವಕುಮಾರ್ಕೊಟ್ಟಿದ್ದರು. ಅದಕ್ಕಾಗಿ ಸಮುದಾಯದ ಮತಗಳನ್ನು ಸಹ ಅವರು ಕ್ರೋಢೀಕರಿಸಿದ್ದರು. ಮುನ್ನಲೆಗೆ
ಇನ್ನು ಇತ್ತೀಚೆಗೆ ಬಿಜೆಪಿ ಮೈತ್ರಿಯಾದ ಬಳಿಕ ನೋಡುವುದಾದರೆ, ರಾಜ್ಯಸಭೆ ಮತ್ತು ಎಂಎಲ್ಸಿ ಚುನಾವಣೆಯಲ್ಲಿ ಜೆಡಿಎಸ್ಸೋತು ಸುಣ್ಣವಾಗಿದೆ. ಈಗ ಮಂಡ್ಯ ಹಾಸನ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟು ತೆನೆಹೊತ್ತ ಮಹಿಳೆಗೆ ಕಮಲದಡಿ ಜೀವಕೊಡಲು ಹೊರಟಿದ್ದಾರೆ.
ಹಾಸನ ಜಿಲ್ಲೆ ಹೆಚ್.ಡಿ.ಕುಮಾರಸ್ವಾಮಿಗೆ ಜನ್ಮಭೂಮಿ, ರಾಮನಗರ ಕರ್ಮಭೂಮಿ ಈಗ ಅವರ ಹಾದಿ ಮಂಡ್ಯದತ್ತ. ಇದ್ಯಾವ ಭೂಮಿಯಾಗಲಿದೆಯೋ ಗೊತ್ತಿಲ್ಲ? ಅದೀರಲೀ, ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆಶಿ ಸಹೋದರ ಡಿ.ಕೆ.ಸುರೇಶ್ಸ್ಪರ್ಧೆಗೆ ಲೋಕಸಭಾ ಕಣಕ್ಕೆ ಕೈನಿಂದ ಕಣಕ್ಕಿಳಿದಿದ್ದರೂ ಅದು ಮುಖ್ಯವೆನ್ನುವುದು ಎನ್ನುವುದಕ್ಕಿಂತ ಇಲ್ಲಿ ಒಕ್ಕಲಿಗರ ಲೆಕ್ಕಚಾರದಲ್ಲಿ ಇಲ್ಲಿನ ಉಸ್ತುವಾರಿಯನ್ನಾಗಿ ಇದೇ ಸಮುದಾಯಕ್ಕೆ ಸೇರಿದ್ದ ಹಿಂದೆ ರಾಮನಗರ ಜಿಲ್ಲೆಯ ಉಸ್ತುವಾರಿಯಾಗಿದ್ದಂತಹ ಅಶ್ವತ್ಥನಾರಾಯಣರನ್ನು ಚುನಾವಣಾ ಉಸ್ತುವಾರಿಗೆ ಬಿಜೆಪಿ ಹಾಕಿರುವುದು ಗಮನಾರ್ಹ. ಮುನ್ನಲೆಗೆ
ಈ ಎಲ್ಲಾ ಬೆಳವಣಿಗೆಗೆ ಪುಷ್ಠಿ ನೀಡುವಂತೆ ಮೂರು ದಿನಗಳ ಹಿಂದೆ ಆದಿಚುಂಚನಗಿರಿ ಮಠಕ್ಕೆ ಹೆಚ್.ಡಿ.ಕುಮಾರಸ್ವಾಮಿ , ಬಿಜೆಪಿಯ ಕೆಲ ಒಕ್ಕಲಿಗ ಸಮುದಾಯದ ನಾಯಕರೂ ಸೇರಿದಂತೆ ಇನ್ನೂ ಒಂದಿಬ್ಬರ ಜೊತೆ ಭೇಟಿ ನೀಡಿದ್ದರು. ಮಠದಿಂದ ಒಕ್ಕಲಿಗ ಸಮುದಾಯದ ಮತಗಳಿಗೆ ಸಂದೇಶ ಹೋಗಬೇಕು.ತಮ್ಮನ್ನು ಅಂದರೆ ಹೆಚ್.ಡಿ.ಕುಮಾರಸ್ವಾಮಿಗೆ ಬೆಂಬಲವನ್ನು ಸ್ವಾಮೀಜಿಗಳಿಂದ ಪರೋಕ್ಷವಾಗಿ ಪಡೆಯಬೇಕು ಎಂಬ ಲೆಕ್ಕಾಚಾರ ಹಿಂದೆ ಇದ್ದೇಇತ್ತು. ಹೀಗೆ ಭೇಟಿ ನೀಡಿದ್ದೇ ತಡ, ಡಿ.ಕೆ.ಶಿವಕುಮಾರ್, ಮಠಕ್ಕೆ ಸರ್ಕಾರವನ್ನು ಅಂದರೆ ಬಿಜೆಪಿ-ಜೆಡಿಎಸ್ಮೈತ್ರಿಯ ಹಿಂದಿನ ಉರುಳಿಸಿವರ ಜೊತೆಗೆಯೇ ಕುಮಾರಸ್ವಾಮಿ ಭೇಟಿ ಕೊಟ್ಟಿದ್ದಾರೆ. ಅಲ್ಲದೇ ಮಠಕ್ಕೆ ಸೇರಿದ್ದ ಸ್ವಾಮೀಜಿಯೊಬ್ಬರ ಫೋನ್ಟ್ಯಾಪಿಂಗ್ ಹೆಚ್.ಡಿ.ಕುಮಾರಸ್ವಾಮಿ ಮಾಡಿದ್ದಾರೆ ಅದಕ್ಕೆ ಸಾಕ್ಷಿಯೂ ಇದೆ. ಸಮಯಬಂದಾಗ ಹೇಳುತ್ತೇನೆ ಎಂದಿದ್ದಾರೆ. ಸರ್ಕಾರವನ್ನು ಉಳಿಸಿಕೊಳ್ಳಲು ನಾನು ಪ್ರಯತ್ನ ಪಟ್ಟೆನಾದರೂ ಅದು ಸಾಧ್ಯವಾಗಲಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮುನ್ನಲೆಗೆ
ಅದೇನೇ ಆಗಲೀ ಸದ್ಯಕ್ಕೆ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಎದ್ದಿರುವ “ಒಕ್ಕಲಿಗರ ನಾಯಕ ಜಿದ್ದಾಜಿದ್ದಿ”ಗೆ ಚುನಾವಣಾ ಫಲಿತಾಂಶವೇ ಉತ್ತರ ಹೇಳಬೇಕು. ಈ ನಾಯಕತ್ವದ ಹೋರಾಟ ಫಲಿತಾಂಶ ಬರೋವರೆಗೂ ಇರುತ್ತದೆಯೋ ಅಥವಾ ಹಾಗೆಯೇ ಇನ್ನೂ ಮುಂದುವರೆಯುತ್ತದೆಯೋ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನು ನೋಡಿ : ನರೇಂದ್ರ ಮೋದಿ ಹೆಸರಿಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಪ್ರಚಾರ ಮಾಡಲು ಸಾಧ್ಯವಿಲ್ಲವೆ? Janashakthi Media