ಶಿವಮೊಗ್ಗ: ಬಿಜೆಪಿ ಪಕ್ಷದವರು ದೇವರನ್ನು ಬೀದಿಗೆ ತಂದು ಮತ ಕೇಳುತ್ತಿದ್ದಾರೆ ಎಂದು ಸಚಿವ ಮಧು ಎಸ್.ಬಂಗಾರಪ್ಪ ಮಾರ್ಮಿಕವಾಗಿ ಹೇಳಿದ್ದಾರೆ.
ಸಹೋದರಿಯೂ ಆಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್,ದೇವರ ಹೆಸರಿನಲ್ಲಿ ಮತಯಾಚನೆ,ಧರ್ಮದ ಹೆಸರಿನಲ್ಲಿ ರಾಜಕೀಯ ಸಲ್ಲದು. ಎಲ್ಲರೂ ಕೂಡ ದೇವರ ಭಕ್ತರೆ. ಇಲ್ಲಿ ನ್ಯಾಯ, ನೀತಿ, ಸತ್ಯ, ಧರ್ಮ ಮಾತ್ರ ಗೆಲ್ಲಬೇಕು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಬಡವರ ಹಸಿವು ನೀಗಿಸಲಾಗುತ್ತಿದೆ ಎಂದರು.
ಇದನ್ನು ಓದಿ : ಹರಿಯಾಣದ ಮಹೇಂದ್ರಗಢದಲ್ಲಿ ಶಾಲಾ ಬಸ್ ಪಲ್ಟಿ- 6 ಮಕ್ಕಳ ಸಾವು, 20 ಮಂದಿಗೆ ಗಾಯ
ಕುಂಚೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ’ನಮ್ಮೂರ ಹುಡುಗ ಡಾ.ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ಬಂಜಾರ ಸಮುದಾಯದೊಂದಿಗೆ ಶೀರ್ಷಿಕೆಯಡಿಯ ಯುಗಾದಿ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ತಂದೆ ಬಂಗಾರಪ್ಪನವರೆಂದರೆ ಈ ತಾಂಡಾದ ಜನರಿಗೆ ಬಹಳ ಪ್ರೀತಿ. ನಮ್ಮ ತಂದೆಯವರಿಗೂ ಅಷ್ಟೇ. ನಾವೆಲ್ಲಾ ತಂದೆಯ ಕಾರಿನಲ್ಲಿ ಓಡಾಡುವಾಗ ಈ ಭಾಗದ ಜನರ ಪ್ರೀತಿ ಕಂಡಿದ್ದೇನೆ ಎಂದರು.
ಇದನ್ನು ನೋಡಿ : ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕು- ಎಂ ಎ ಬೇಬಿ ಭಾಗ – 01