ಹಾಸನ: ಹಾಸನದಲ್ಲಿ ಎನ್ಡಿಎ ಮೈತ್ರಿಗೆ ಪೆಟ್ಟು-ತೆನೆಹೊತ್ತ ಮಹಿಳೆಗೆ ದೊಡ್ಡ ಹೊಡೆತ ಬಿದ್ದಿದ್ದು, ಆಘಾತ ಎದುರಾಗಿದೆ.
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಬಿಗ್ ಶಾಕ್ ಎದುರಾಗಿದೆ. ಅದು ಕೂಡ ಹಾಸನದಲ್ಲಿ.ಇದಕ್ಕೆ ಕಾರಣ, ಬಿಜೆಪಿಯಿಂದ ಬಂಡಾಯವೆದ್ದಿರುವ ಪ್ರೀತಂಗೌಡ ಬಣದವರು ಮತ್ತು ಬೆಂಬಲಿಗರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಒಳಪೆಟ್ಟು ಬೀಳುವ ಆತಂಕ ಎದುರಾಗಿದೆ.
ಬಿಜೆಪಿಗೆ ಯಾವುದೇ ಸೂಚನೆ ನೀಡದೇ ಈ ಶಾಕ್ ಅನ್ನು ಪ್ರೀತಂಗೌಡ ನೀಡಿದ್ದಾರೆ. ಹಾಸನದಲ್ಲಿ ಎನ್ಡಿಎ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರ ಮೊಮ್ಮಗ ಪ್ರಜ್ವಲ್‌ರೇವಣ್ಣ, ಮತ್ತೊಮ್ಮೆ ಸಂಸದರಾಗಲು ಬಯಸಿದ್ದರು. ಆದರೆ, ಎನ್ಡಿಎ ಮೈತ್ರಿಯೇ ಮುಳವಾದಂತಿದೆ. ಬಿಜೆಪಿ ಟಿಕೇಟ್ ನೀಡದ ಹಿನ್ನಲೆಯಲ್ಲಿ ಪ್ರೀತಂಗೌಡ ಬೇಸತ್ತಿದ್ದರು. ಇದೀಗ ಪ್ರೀತಂಗೌಡ ಬಲಗೈ ಬಂಟ ಉದ್ದೂರು ಪುರುಷೋತ್ತಮ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಭೇಟಿ ಮಾಡಿದ್ದಾರೆ.
ಇದನ್ನು ಓದಿ : ಬಿಜೆಪಿಯವರಿಂದಲೇ ಗೋ-ಬ್ಯಾಕ್ ಅನ್ನಿಸಿಕೊಂಡ ಶೋಭಾ ಕರಂದ್ಲಾಜೆಯವರನ್ನ ಇಲ್ಲಿಂದಲೂ ನೀವು ವಾಪಾಸ್ ಕಳಿಸಿ – ಸಿದ್ದರಾಮಯ್ಯ
ಈ ಮೂಲಕ ಪ್ರೀತಂಗೌಡ ಆಪ್ತರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದು, ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಒಳಪೆಟ್ಟು ಬೀಳುವ ಆತಂಕ ಎದುರಾಗಿದೆ. ಬಹಿರಂಗವಾಗಿಯೇ ಶ್ರೇಯಸ್ ಪಟೇಲ್ ಪರ ಪ್ರಚಾರಕ್ಕಿಳಿದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳಿಗೂ ಪ್ರೀತಂಗೌಡ ಹಾಗೂ ಅವರ ಬೆಂಬಲಿಗರ ನಡೆ ತಲೆನೋವಾಗಿ ಪರಿಣಮಿಸಿದೆ.
ಅಸಮಾಧಾನ ಶಮನಗೊಳಿಸಲು ಎರಡೂ ಪಕ್ಷಗಳ ಮುಖಂಡರು ಪ್ರಯತ್ನಿಸಿದ್ದರು. ಅಸಮಾಧಾನ ಬಗೆಹರಿಯದ ಹಿನ್ನೆಲೆ ಪ್ರೀತಂಗೌಡ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ಬಹಿರಂಗವಾಗಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನು ನೋಡಿ : 2024ರ ಚುನಾವಣೆಯಲ್ಲಿ BJP ಸೋಲಲಿದೆ, INDIA ಕೂಟ ಅಧಿಕಾರಕ್ಕೆ ಬರುತ್ತದೆ- ಬಿ ಕೆ ಹರಿಪ್ರಸಾದ್ Janashakthi Media