ಜ್ಞಾನೇಶ್‌ ಕುಮಾರ್‌, ಸುಖಬೀರ್‌ ಸಂಧು ಚುನಾವಣಾ ಆಯುಕ್ತರಾಗಿ ಆಯ್ಕೆ

ಹೊಸದಿಲ್ಲಿ: ಜ್ಞಾನೇಶ್‌ ಕುಮಾರ್‌ ಮತ್ತು ಸುಖಬೀರ್‌ ಸಂಧು ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತ್ರಿಸದಸ್ಯ ಸಮಿತಿಯು ಇಂದು  ಚುನಾವಣಾ ಆಯುಕ್ತರನ್ನಾಗಿ ಆಯ್ಕೆ ಮಾಡಿದೆ ಎಂದು ಸಮಿತಿಯ ಸಭೆಯ ನಂತರ ಕಾಂಗ್ರೆಸ್‌ ನಾಯಕ  ಹಾಗೂ  ಆಯ್ಕೆ ಸಮಿತಿ ಸದಸ್ಯ ಅಧೀರ್ ರಂಜನ್ ಚೌಧರಿ ತಿಳಿಸಿದರು. ಚುನಾವಣಾ ಆಯುಕ್ತ

ಮುಂಬರುವ ಲೋಕಸಭೆ ಚುನಾವಣೆಗಾಗಿ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ, ಮುಖ್ಯ ಚುನಾವಣಾ ಆಯಕ್ತ ರಾಜೀವ್ ಕುಮಾರ್ ಅವರಿಗೆ ನೆರವಾಗಲು ಇಬ್ಬರು ಚುನಾವಣಾ ಆಯುಕ್ತರ ನೇಮಕದ ತುರ್ತು ಅಗತ್ಯವಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಇಬ್ಬರು ಅಧಿಕಾರಿಗಳ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಸರ್ಕಾರದ ನಡೆಯನ್ನು ಅವರು ಪ್ರಶ್ನಿಸಿದ್ದಾರೆ, ನಾನು ನನ್ನ ಕ್ಷೇತ್ರವನ್ನು ಬಿಟ್ಟು ಸಭೆಗೆ ಹಾಜರಾಗಲು ಬಂದಿದ್ದೇನೆ ಎಂದು ಅಧೀರ್ ರಂಜನ್ ಹೇಳಿದರು. ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಯೂ ಇರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅವುಗಳನ್ನು ಇರಿಸಲಾಗಿಲ್ಲ. ಇದಕ್ಕೆ ಪ್ರತಿಯಾಗಿ ಗೃಹ ಸಚಿವ ಅಮಿತ್ ಶಾ ಅವರನ್ನು ಸಭೆಯಲ್ಲಿ ಸೇರಿಸಲಾಯಿತು. ಸಭೆಗೂ ಮುನ್ನವೇ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಕೇಳಿದ್ದೆ ಎಂದು ಕಾಂಗ್ರೆಸ್ ಸಂಸದರು ಹೇಳಿದ್ದಾರೆ. ಆದ್ದರಿಂದ ನಾನು ಅವರ ಬಗ್ಗೆ ವಿವರವಾಗಿ ತಿಳಿದುಕೊಳ್ಳಬಹುದು ಆದರೆ ನನಗೆ 212 ಹೆಸರುಗಳ ಪಟ್ಟಿಯನ್ನು ನೀಡಲಾಯಿತು. 212 ಜನರ ಬಗ್ಗೆ ನಾನು ಹೇಗೆ ತಿಳಿಯಬಹುದು? ಸರ್ಕಾರ ಈಗಾಗಲೇ ಆಯ್ಕೆ ಸಮಿತಿಯಲ್ಲಿ ಬಹುಮತ ಹೊಂದಿದೆ. ಸರ್ಕಾರ ಏನು ಬಯಸುತ್ತದೋ ಅದು ನಡೆಯುತ್ತದೆ ಎಂದಿದ್ದಾರೆ. ಚುನಾವಣಾ ಆಯುಕ್ತ

ಇದನ್ನು ಓದಿ : ದೆಹಲಿ| ನಾಲ್ಕಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ| ಹೊಗೆಯಿಂದ ಉಸಿರುಗಟ್ಟಿ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿವೆಯೆನ್ನುವಾಗ ಚುನಾವಣಾ ಆಯುಕ್ತ ಅರುಣ್‌ ಗೋಯಲ್‌ ಅವರ ಅಚ್ಚರಿಯ ರಾಜೀನಾಮೆ ನಂತರ ಈ ಆಯ್ಕೆಗಳು ನಡೆದಿವೆ. ಗೋಯೆಲ್‌ ಅವರ ಸೇವಾವಧಿ ಡಿಸೆಂಬರ್‌ 2027ರವರೆಗೆ ಇದ್ದರೂ ಅವರು ಮಾರ್ಚ್‌ 9ರಂದು ರಾಜೀನಾಮೆ ನೀಡಿದ್ದರು.

ಚುನಾವಣಾ ಆಯುಕ್ತರ ನೇಮಕಾತಿ ಕುರಿತಾದ ಹೊಸ ಕಾನೂನಿನಂತೆ ರಚಿಸಲಾದ ಶೋಧ ಸಮಿತಿಗೆ 200ಕ್ಕೂ ಹೆಚ್ಚು ಅಭ್ಯರ್ಥಿಗಳ ಬೃಹತ್ ಪಟ್ಟಿ ನೀಡಿರುವಾಗ, ಆರು ಹೆಸರುಗಳನ್ನು ಮಾತ್ರ ಹೇಗೆ ಅಂತಿಮಗೊಳಿಸಲಾಗಿತ್ತು ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ ಎಂಬುದು ಪ್ರಮುಖ ಅಂಶವಾಗಿದೆ.  ಆಯ್ಕೆ ವಿಚಾರದಲ್ಲಿಯೂ ಸರ್ಕಾರ ತನ್ನ ಪ್ರಭಾವವನ್ನು ಬಳಸಿಕೊಂಡಿದೆ. ನ್ಯಾಯ ಸಮ್ಮತ ಚುನಾವಣೆಗಳು ನಡೆಯಲು ಸಾಧ್ಯವೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಇದನ್ನು ನೋಡಿ : ಕನ್ನಡದ ಅಸ್ಮಿತೆಯ ಕವಿ ಮಹಾಕವಿ ಪಂಪ -ಡಾ.ಪುರುಷೋತ್ತಮ ಬಿಳಿಮಲೆ Janashakthi Media

Donate Janashakthi Media

Leave a Reply

Your email address will not be published. Required fields are marked *