ಬೆಂಗಳೂರು : ದಿ. ಮಹೇಂದ್ರ ಕುಮಾರ್ ಕುರಿತ ಅನುಭವ ಕಥನ ʻನಡು ಬಗ್ಗಿಸದ ಎದೆಯ ದನಿʼ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾರ್ಚ್ 09, 2024 ರಂದು ಬೆಂಗಳೂರಿನಲ್ಲಿ ಗಾಂಧಿಭವನದ ಬಾಪೂಜಿ ಸಭಾಂಗಣದಲ್ಲಿ ನಡೆಯಲಿದೆ. ನಡು
ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಲನಚಿತ್ರ ನಟ ಪ್ರಕಾಶ್ ರೈ ವಹಿಸಲಿದ್ದಾರೆ. ನಯನ ಮೋಟಮ್ಮ, ಎಸ್.ಬಾಲನ್, ಸುಧೀರ್ ಮುರೋಳ್ಳಿ, ಬಸವರಾಜ ಸೂಳಿಭಾವಿ, ನವೀನ್ ಸೂರಿಂಜೆ, ನಿಕೇತ್ರಾಜ್ ಮೌರ್ಯ,ಮುನೀರ್ ಕಾಟಿಪಳ್ಳಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಜನಶಕ್ತಿ ಮೀಡಿಯದಲ್ಲಿ ನೇರ ಪ್ರಸಾರವಾಗಲಿದೆ.
ಲೈವ್ ವಿಡಿಯೋ ಲಿಂಕ್ : ಪುಸ್ತಕ ಬಿಡುಗಡೆ| ಮಹೇಂದ್ರ ಕುಮಾರ್ | “ನಡು ಬಗ್ಗಿಸದ ಎದೆಯ ದನಿ”
ಪುಸ್ತಕದಲ್ಲಿ ಏನಿದೆ : ಪುಸ್ತಕದಲ್ಲಿ ಏನಿದೆ ಎಂಬುದರ ಕುರಿತು ಡಾ. ರಹಮತ್ ತರೀಕೆರೆ ಈ ರೀತಿ ಬರೆದಿದ್ದಾರೆ. “ನಡು ಬಗ್ಗಿಸದ ಎದೆಯ ದನಿ” ಎನ್ನುವ 199 ಪುಟಗಳ ಈ ಪುಸ್ತಕವನ್ನು ಒಂದೇ ಬಾರಿಗೆ ಮೂರುವರೆ ಗಂಟೆಗಳ ಕಾಲ ಓದಿ ಮುಗಿಸಿದೆ. ನಡುವೆ ಕೆಳಗಿಡಲು ಆಗಲೇ ಇಲ್ಲ.
ಈ ಪುಸ್ತಕ ಒಂದು ಕಾಲದಲ್ಲಿ ಭಜರಂಗದಳದ ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಅವರ ಅನುಭವ ಕಥನ. ಪತ್ರಕರ್ತರಾಗಿರುವ ನವೀನ್ ಸೂರಿಂಜೆ ಸರಳವಾಗಿ ಇದನ್ನು ನಿರೂಪಿಸಿದ್ದಾರೆ.
ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಅತ್ಯಂತ ಮುಖ್ಯವಾಗಿ ಡಾ.ಡಿ.ಡೊಮಿನಿಕ್ ಅವರು ತುಂಬಾ ಆಳವಾದ, ವಿಶ್ಲೇಷಣಾತ್ಮಕವಾದ ಮುನ್ನುಡಿ ಬರೆದಿದ್ದಾರೆ. ‘ ದತ್ತ ಪಾದುಕೆಯ ಬೆನ್ನ ಬಿದ್ದು ಮತ್ತು ಮಹಿಳೆಯರಿಗಾಗಿ ಅನಸೂಯಾ ಜಯಂತಿ ತಗುಲಿಸುವ ಯೋಚನೆ’ ಎನ್ನುವ ಹಾಗೂ ಇನ್ನೂ ನಾಲ್ಕಾರು ಅಧ್ಯಾಯಗಳು ಓದಲೇ ಬೇಕಾದ ಪುಟಗಳು. ಇವು ಹಲವು ಸತ್ಯಗಳನ್ನು ಜಾಹಿರುಗೊಳಿಸುತ್ತಿವೆ. “ಮಹೇಂದ್ರ ಕುಮಾರ್ ಈಗ ಇರಬೇಕಿತ್ತು” ಎನ್ನುವ ಮಾತು ಸೂರಿಂಜೆಯವರ ಮಾತು ಖಂಡಿತ ಸತ್ಯ..