ತುಮಕೂರು : ಬರಗಾಲ, ಉರಿ ಬಿಸಿಲಿನ ಹೊಡೆತ ಜನರ ಮೇಲಷ್ಟೇ ಅಲ್ಲದೆ ಜಾನುವಾರಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಜಾನುವಾರಗಳಿಗೆ ಉಚಿತ ಮೇವನ್ನು ವಿತರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಸರ್ಕಾರವನ್ನು ಒತ್ತಾಯಿಸಿದೆ. ಬರ
ಬೆಳ್ಳಾವಿ ಗ್ರಾಮ ಪಂಚಾಯಾತಿ ಕಚೇರಿ ಮುಂದೆ ರೈತರು ಕೆಪಿಆರ್‌ಎಸ್ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬೆಳ್ಳಾವಿಯ ರೈತ ಮುಖಂಡ ಪ್ರಕಾಶ್ ಮಾತನಾಡಿ, ಮೇವಿನ ಕೊರತೆಯ ಭೀತಿ ಒಂದು ಕಡೆಯಾದರೆ ಮತ್ತೊಂದೆಡೆ ಖರೀದಿಸೋಣವೆಂದರೆ ದುಬಾರಿ ಹಣ ನೀಡಿದರು ಮೇವು ಸಿಗುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ರಾಸುಗಳಿಗೆ ಮೇವು ಒದಗಿಸುವುದು ಸರ್ಕಾರದ ಕರ್ತವ್ಯ, ಈಗ ಮೇವಿನ ಕೊರತೆಯಾಗಿ ಅಡಿಕೆ ಪಟ್ಟೆ ಸಿಗಿದು, ಅದನ್ನೆ ಜಾನುವಾರಗಳಿಗೆ ಹಾಕಿ ಫೋಷಣೆ ಮಾಡುತ್ತಿದ್ದೆವೆ, ಕೂಡಲೇ ರಾಜ್ಯ ಸರ್ಕಾರ ಮೇವಿನ ಅಭಾವಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಬಸವರಾಜು ಮಾತನಾಡಿ ಮೇವಿನ ದರ ದುಭಾರಿಯಾಗಿದೆ. ಮೇವು ಉತ್ಪನ್ನ ಬೇಳೆ ಇಲ್ಲದೆ ರೈತರು ದುಬಾರಿದರ ನೀಡಿ ಮೇವು ಪಡೆಯುತ್ತಿದ್ದಾರೆ. ಇದು ರೈತರನ್ನು ಸಾಲಕ್ಕೆ ತಳ್ಳುತ್ತದೆ ಹಾಗಾಗಿ ಸರ್ಕಾರ ಕೂಡಲೆ ಉಚಿತವಾಗಿ ಮೇವು ವಿರತಣಗೆ ಕ್ರ ಮವಹಿಸಬೇಕೆಂದು ಅಗ್ರಹಿಸಿದರು. ಬರ
ಇದನ್ನೂ ಓದಿ : ಬರ ಪರಿಸ್ಥಿತಿಯ ಬಗ್ಗೆ ವರದಿ ನೀಡಿ ತಿಂಗಳಾಗಿದ್ದರೂ ಮೋದಿ ಸರ್ಕಾರ ನಯಾಪೈಸೆ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ
ಕೆ.ಪಿ.ಆರ್.ಎಸ್‌ಜಿಲ್ಲಾ ಉಪಾಧ್ಯಕ್ಷ ಬಿ.ಉಮೇಶ್ ಮತಾನಾಡಿ ಚುನಾವಣೆಗಳು ಬರುತ್ತಿವೆ ಹಣ, ಜಾತಿ, ಮತಧರ್ಮದ ಅಮಲನ್ನೇರಿಸಿ ಬಡವರ ಬದುಕನ್ನು ಕಿತ್ತು ತಿನ್ನುವ ಕೇಂದ್ರ ಸರ್ಕಾರ ರೈತರ ಆದಾಯ ದುಪ್ಪಟು ಮಾಡುತೇವೆ ಎಂದು ಹೇಳಿತ್ತು. ಅಧಿಕಾರಕ್ಕೆ ಬಂದ ನಂತರ ಅದರ ಬಗ್ಗೆ ಯಾವ ಕೆಲಸವನ್ನು ಮೋದಿ ಸರ್ಕಾರ ಮಾಡಿಲ್ಲ, ಬದಲಾಗಿ ಹೋರಾಟ ನಡೆಸಿದ ರೈತರ ಮೇಲೆ ದಾಳಿ, ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಸಿಐಟಿಯು ರಾಜ್ಯ ಮುಖಂಡ ಸೈಯದ್ ಮುಜೀಬ್ ಮತಾನಾಡಿ, ಬರಪಾರಿಹಾಕ್ಕೆ ಕೇಂದ್ರ ತಂಡ ಬಂದು ಸಮಿಕ್ಷೆ ನಡೆಸಿದೆ. ರಾಜ್ಯ ದಲ್ಲಿ 196 ತಾಲ್ಲೂಕುಗಳು ತಿವ್ರ ಬರಗಾಲ ತಾಲ್ಲೂಕುಗಳೆಂದು ತಿಳಿಸಿದೆ. ಆದರೆ ಪರಿಹಾರ ವಿತರಣೆಗೆ ರಾಜ್ಯಕ್ಕೆ ಹಣ ನೀಡುತ್ತಿಲ್ಲ. ರಾಜ್ಯದವರು ಕೇಂದ್ರದ ಮೇಲೆ, ಕೇಂದ್ರದವರೂ ರಾಜ್ಯದ ಮೇಲೆ ಹೊಣಗಾರಿಕೆ ತೋರಿಸಿ ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬರ
ಪ್ರತಿಭಟನೆಯಲ್ಲಿ ಸಿ.ಅಜ್ಜಪ್ಪ, ಗೌರಮ್ಮ, ಪವಿತ್ರ, ದ್ರಾಕ್ಷಯಣಮ್ಮ , ರಾಮಣ್ಣ, ದೇವರಜು, ಜಯಮ್ಮ, ಗುರುಸಿದ್ದಯ್ಯ, ಅಂಜಿನಪ್ಪ,ರಾಜೇಶ್ ಲಕ್ಷ್ಮಯ್ಯ ,ನಾಗರಾಜು ಸೇರಿದಂತೆ ಅನೇಕ ರೈತರಿದ್ದರು.
ವಿಡಿಯೋ ನೋಡಿ : ಬರಗಾಲದಿಂದ ರೈತರು ಕಂಗಾಲು : ರಾಮ ಭಜನೆಯಲ್ಲಿ ಕೇಂದ್ರ ಸರ್ಕಾರ, ನಿದ್ದೆಗೆ ಜಾರಿದ ರಾಜ್ಯ ಸರ್ಕಾರ