ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದೆ. ಶುಕ್ರವಾರ ಮಧ್ಯಾಹ್ನ ಈ ಸ್ಫೋಟ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಬೆಂಗಳೂರಿನ
ಸ್ಫೋಟಕ್ಕೆ ಕಾರಣವೇನು ಎಂಬುದು ಬಹಿರಂಗವಾಗಿಲ್ಲ. ಬಾಯ್ಲರ್ ಸ್ಫೋಟವಾಗಿರುವುದಾ ಅಥವಾ ಸಿಲಿಂಡರ್ ಸ್ಫೋಟವಾಗಿರುವುದಾ ಎಂಬುದು ಖಚಿತವಾಗಿಲ್ಲ. ಎಎಚ್ಎಎಲ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಪರಿಹಾರ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಮಧ್ಯಾಹ್ನ ಊಟದ ಸಮಯವಾದ ಕಾರಣ ಹೋಟೆಲ್ನಲ್ಲಿ ಜನದಟ್ಟಣೆ ಇತ್ತು. ಸ್ಫೋಟದ ಬಳಿಕ ಗಾಯಗೊಂಡವರನ್ನು ಕೂಡಲೇ ಸ್ಥಳದಲ್ಲಿ ಸಿಕ್ಕ ಆಟೋ ಮತ್ತು ಇತರೆ ವಾಹನಗಳ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳದಲ್ಲಿ ಹೋಟೆಲ್ನಲ್ಲಿದ್ದ ಗ್ರಾಹಕರ ಕೆಲವರ ಕಂಪನಿ ಐಡಿ ಕಾರ್ಡ್ಗಳು ಬಿದ್ದಿರುವುದು ಕಂಡುಬಂದಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ : ಬೆಂಗಳೂರು| ತಡರಾತ್ರಿ ಅಗ್ನಿ ಅವಘಡ : ಬೆಂಕಿ ಕೆನ್ನಾಲಿಗೆಗೆ ಹೊತ್ತಿ ಉರಿದ ಕಟ್ಟಡ
ನಿಗೂಢ ಸ್ಫೋಟ ಸಂಭವಿಸಿದ್ದು ಹೇಗೆ ಎಂಬುದು ದೃಢಪಟ್ಟಿಲ್ಲ. ಆದರೂ ಎಲ್ಪಿಜಿ ಸಿಲಿಂಡರ್ ಸ್ಫೋಟದ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸ್ಫೋಟದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಒಂದೇ ಕಂಪನಿಯ 5 ಉದ್ಯೋಗಿಗಳು ಗಾಯಗೊಂಡಿದ್ದಾರೆ. ಅವರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ರಾಜಧಾನಿ ಬೆಂಗಳೂರಲ್ಲಿ ಪದೇ ಪದೇ ಹೋಟೆಲ್ಗಳಲ್ಲಿ ದುರಂತ ಸಂಭವಿಸುತ್ತಿವೆ. ಅದ್ರಲ್ಲೂ ಕಳೆದ ಕೆಲವು ತಿಂಗಳಿಂದ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು ಗ್ರಾಹಕರಲ್ಲಿ ಭಯ ಹುಟ್ಟಿಸಿದೆ. ರಾಜಧಾನಿ ಬೆಂಗಳೂರಿನ ನಿವಾಸಿಗಳು ನಲುಗಿ ಹೋಗುತ್ತಿದ್ದಾರೆ. ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಲು ಹಾಗೂ ಸೂಕ್ತ ರಕ್ಷಣಾ ಕವಚಗಳನ್ನು ಬಳಸಲು ಹೊಟೆಲ್ಗಳು ಮುಂದಾಗಬೇಕಾಗಿದ್ದು, ಸರಕಾರ ಸರಿಯಾದ ನಿಯಮಾವಳಿಗಳನ್ನು ರೂಪಿಸಬೇಕಿದೆ. ಬೆಂಗಳೂರಿನ
ವಿಡಿಯೋ ನೋಡಿ : ಕೂಗಿದ್ದು ನಾಸೀರ್ಸಾಬ್ ಜಿಂದಾಬಾದ್ ಸೃಷ್ಟಿಸಿದ್ದು ಪಾಕಿಸ್ತಾನ್ ಜಿಂದಾಬಾದ್ ಬೆತ್ತಲಾದ ಮಾಧ್ಯಮಗಳು