ಚಂಡಿಗಢ: ಕನಿಷ್ಠ ಬೆಲೆ ಕಾನೂನು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ, ಪಂಜಾಬ್ನಲ್ಲಿ ಸರ್ಕಾರಿ ಸ್ವಾಮ್ಯದ ಪಂಜಾಬ್ ರೋಡ್ವೇಸ್, ಪನ್ಬಸ್ ಮತ್ತು ಖಾಸಗಿ ಸಾರಿಗೆ ಬಸ್ ನಿರ್ವಾಹಕರು ಶುಕ್ರವಾರ ಮುಷ್ಕರ ನಡೆಸಿದ್ದಾರೆ. ಸುಮಾರು 5,000 ಕ್ಕೂ ಹೆಚ್ಚು ಬಸ್ಗಳು ರಸ್ತೆಗಿಳಿಯದ ಕಾರಣ ಅನೇಕ ಪ್ರಯಾಣಿಕರು ಪರದಾಡುವಂತಾಯಿತು ಎಂದು ವರದಿಯಾಗಿದೆ.ರೈತ ಹೋರಾಟ
ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ‘ಭಾರತ್ ಬಂದ್’ಗೆ ಪಂಜಾಬ್ನ ನೆರೆಯ ಹರಿಯಾಣದಲ್ಲಿಯೂ ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಮುಚ್ಚಲಾಗಿದೆ. ಪಂಜಾಬ್ನಲ್ಲಿ ಪೆಟ್ರೋಲಿಯಂ ವಿತರಕರು ಬಂದ್ ಕರೆಯನ್ನು ಬೆಂಬಲಿಸಿ ಫಿಲ್ಲಿಂಗ್ ಸ್ಟೇಷನ್ಗಳನ್ನು ಮುಚ್ಚಿದ್ದಾರೆ. ಪಂಜಾಬ್ ರೋಡ್ವೇಸ್, ಪನ್ಬಸ್ ಮತ್ತು ಪಿಆರ್ಟಿಸಿ ಗುತ್ತಿಗೆ ಕಾರ್ಮಿಕರ ಒಕ್ಕೂಟವು ಸಂಯುಕ್ತ ಕಿಸಾನ್ ಮೋರ್ಚಾದ (ಎಸ್ಕೆಎಂ) ಬಂದ್ ಕರೆಗೆ ಬೆಂಬಲ ನೀಡುತ್ತಿವೆ.ರೈತ ಹೋರಾಟ
ಇದನ್ನೂ ಓದಿ:ಕರ್ನಾಟಕ ಬಜೆಟ್ 2024 LIVE: ವಿಪಕ್ಷಗಳ ಗದ್ದಲದ ನಡುವೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ
ಇಷ್ಟೆ ಅಲ್ಲದೆ, ಭಾರತಿ ಕಿಸಾನ್ ಯೂನಿಯನ್ (ರಾಜೇವಾಲ್), ಭಾರತೀಯ ಕಿಸಾನ್ ಯೂನಿಯನ್ (ದಕುಂದ), ಭಾರತೀಯ ಕಿಸಾನ್ ಯೂನಿಯನ್ (ಲಖೋವಲ್), ಭಾರತೀಯ ಕಿಸಾನ್ ಯೂನಿಯನ್ (ಖಾಡಿಯನ್) ಮತ್ತು ಕೀರ್ತಿ ಕಿಸಾನ್ ಯೂನಿಯನ್ ಸೇರಿದಂತೆ ಹಲವು ರೈತ ಸಂಘಟನೆಗಳು ಈ ಬಂದ್ನಲ್ಲಿ ಭಾಗವಹಿಸುತ್ತಿವೆ.
ಎಎಪಿ ಆಡಳಿತವಿರುವ ಪಂಜಾಬ್ನಲ್ಲಿ ಹಲವಾರು ರೈತ ಸಂಘಗಳ ಕಾರ್ಯಕರ್ತರು ಪ್ರತಿಭಟನೆ ಅಂಗವಾಗಿ ತಮ್ಮ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳನ್ನು ಮುಚ್ಚುವಂತೆ ವ್ಯಾಪಾರಿಗಳನ್ನು ಕೇಳಿಕೊಂಡಿದ್ದಾರೆ. ಬಂದ್ ಸಂದರ್ಭದಲ್ಲಿ ಪ್ರಮುಖ ರಸ್ತೆಗಳನ್ನು ತಡೆದು ಟೋಲ್ ಪ್ಲಾಜಾಗಳನ್ನು ಆಕ್ರಮಿಸುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ. ರಾಜ್ಯದ ಪಟಿಯಾಲ, ಲುಧಿಯಾನ, ಬಟಿಂಡಾ, ಮೊಗಾ, ಹೋಶಿಯಾರ್ಪುರ, ಜಲಂಧರ್ ಮತ್ತು ಇತರ ಸ್ಥಳಗಳಿಂದ ಅಂಗಡಿಗಳು ಮತ್ತು ಇತರ ಸಂಸ್ಥೆಗಳ ಸಂಪೂರ್ಣ ಬಂದ್ ಆಗಿವೆ ಎಂದು ವರದಿಯಾಗಿವೆ.
ಇದನ್ನೂ ಓದಿ: ಉಪ್ಪು ಹುಳಿ ಖಾರ ಇಲ್ಲದ ಜನ ವಿರೋಧಿ ಬಜೆಟ್: ಸಿಎಂ ನಿಲುವು ಖಂಡಿಸಿ ಬಿಜೆಪಿ ಸಭಾತ್ಯಾಗ
ಯಾವುದೇ ಅಹಿತಕರ ಘಟನೆ ನಡೆಯದಂತೆ ಎರಡೂ ರಾಜ್ಯಗಳಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಷ್ಕರದಿಂದಾಗಿ ರಾಜ್ಯಾದ್ಯಂತ ಪ್ರಯಾಣಿಕರು ಪರದಾಡುವಂತಾಯಿತು. ಅನೇಕ ಪ್ರಯಾಣಿಕರು ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಟ್ಯಾಕ್ಸಿಗಳನ್ನು ಆರಿಸಿಕೊಳ್ಳಬೇಕಾಗಿ ಬಂದಿದೆ ಎಂದುವರದಿಯಾಗಿದೆ.
ಪ್ರತಿಭಟನಾ ನಿರತ ರೈತರು ಕನಿಷ್ಠ ಬೆಲೆಯ ಕಾನೂನು ಖಾತರಿಯ ಜೊತೆಗೆ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ವಿದ್ಯುತ್ ದರ ಹೆಚ್ಚಳ, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು 2021 ರ ಸಂತ್ರಸ್ತರಿಗೆ “ನ್ಯಾಯ”ಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಲಖಿಂಪುರ ಖೇರಿ ಹಿಂಸಾಚಾರ, ಭೂಸ್ವಾಧೀನ ಕಾಯಿದೆ 2013ರ ಮರುಸ್ಥಾಪನೆ ಮತ್ತು 2020-21ರಲ್ಲಿ ಹಿಂದಿನ ಆಂದೋಲನದ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು ರೈತರ ಬೇಡಿಕೆಗಳಲ್ಲಿ ಸೇರಿದೆ.
ವಿಡಿಯೊ ನೋಡಿ: ರಾಮನಿಗೆ ಭವ್ಯ ಮಂದಿರ, ಶ್ರಮಿಕರಿಗೆ ಟೆಂಟ್ – ನಾಗೇಶ ಹೆಗಡೆ ವಿಶ್ಲೇಷಣೆ Janashakthi Media