ಪಣಂಬೂರು ಬೀಚ್‌ನಲ್ಲಿ ಯುವಕ-ಯುವತಿ ಮೇಲೆ ಅನೈತಿಕ ಪೊಲೀಸ್ ಗಿರಿ – ಶ್ರೀರಾಮಸೇನೆ ಕಾರ್ಯಕರ್ತರ ಬಂಧನ

ಮಂಗಳೂರು: ಮಂಗಳೂರು ಹೊರವಲಯದ ಪಣಂಬೂರು ಬೀಚ್‌ನಲ್ಲಿ ವಾಕಿಂಗ್‌ ಮಾಡುತ್ತಿದ್ದ ಯುವಕ – ಯುವತಿಯನ್ನು ಶ್ರೀರಾಮಸೇನೆ ಕಾರ್ಯಕರ್ತರು ಅಡ್ಡಗಟ್ಟಿ ಅನೈತಿಕ ಪೊಲೀಸ್‌ಗಿರಿ ಎಸಗಿದ ಘಟನೆ ನಡೆದಿದೆ. ಪಣಂಬೂರು

ಕೇರಳದ ಯುವಕ ಹಾಗೂ ಬೆಂಗಳೂರಿನ ಯುವತಿ ಪಣಂಬೂರು ಬೀಚ್‌ನಲ್ಲಿ ತಿರುಗಾಡುತ್ತಿದ್ದ ವೇಳೆ ತಡೆದ  ಶ್ರೀರಾಮಸೇನೆ ಕಾರ್ಯಕರ್ತರು ಅವರ ಹಿನ್ನೆಲೆಯನ್ನು ಪ್ರಶ್ನೆ ಮಾಡಿದ್ದಾರೆ. ಯುವಕ ಅನ್ಯ ಕೋಮಿನವನಾಗಿದ್ದು,  ಯುವತಿಯ ಜೊತೆ ಪಣಂಬೂರು ಬೀಚ್‌ಗೆ ಬಂದಿದ್ದ. ಈ ವಿಚಾರ ತಿಳಿದು ರಾಮಸೇನೆ ಕಾರ್ಯಕರ್ತರು ವಿಚಾರಿಸುವ ನೆಪದಲ್ಲಿ ಅವರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಈ ವೇಳೆ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪಣಂಬೂರು ಪೊಲೀಸರು ಇಬ್ಬರ ರಕ್ಷಣೆ ಮಾಡಿದ್ದು, ಮೂವರು ಶ್ರೀರಾಮ ಸೇನೆ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಡಿಸೆಂಬರ್‌ 25, 2023 ರಂದು, ಉಳ್ಳಾಲದ ಸೋಮಶ್ವೇರ ದೇವಾಲಯಕ್ಕೆ ಬಂದಿದ್ದ ಅನ್ಯಕೋಮಿನ ವಿದ್ಯಾರ್ಥಿಗಳನ್ನು ಸಂಘಪರಿವಾರದ ಸಂಘಟನೆ ಕಾರ್ಯಕರ್ತರು ತಡೆದು, ವಿಚಾರಣೆ ನಡೆಸಿದ್ದರು. ಮತ್ತೊಂದು ಪ್ರಕರಣದಲ್ಲಿ, ಡಿಸೆಂಬರ್‌ 21 ಹಂಪನಕಟ್ಟೆಯ ಗುಡ್​ಟೈಮ್ ಶಾರ್ಟ್ ಈಟ್ಸ್ ಶಾಪ್ ಬಳಿ ಕೇರಳದ ಯುವಕ ಮತ್ತು ಯುವತಿಯನ್ನು ವ್ಯಕ್ತಿಯೊಬ್ಬ ತಡೆದಿದ್ದ. ಯುವಕ ಮತ್ತು ಯುವತಿ ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾ ಎಂದು ಪರಿಶೀಲಿಸುವ ನೆಪದಲ್ಲಿ ಅವರ ಮೇಲೆ ರೇಗಾಡಿ ಐಡಿ ಕಾರ್ಡ್ ಕೇಳಿದ್ದ ಎನ್ನಲಾಗಿತ್ತು. ಈ‌ ಸಂದರ್ಭದಲ್ಲಿ ಯುವಕ ಮತ್ತು ಯುವತಿ ಆಟೋ ರಿಕ್ಷಾವನ್ನು ಹತ್ತಿ ಅಲ್ಲಿಂದ ತೆರಳಲು ಯತ್ನಿಸಿದ್ದರು. ಆಗ ಆಟೋ ನಿಲ್ಲಿಸಲು ಯತ್ನಿಸಿದ ಆರೋಪಿಯು ಆಟೋ ಚಾಲಕನಿಗೂ ಗದರಿಸಿದ್ದ. ಅಷ್ಟರಲ್ಲಿ ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿದ್ದರು.

ಇದನ್ನೂ ಓದಿಮಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಅನೈತಿಕ ಪೊಲೀಸ್‌ಗಿರಿ ಸಂಘಪರಿವಾರದವರ ಬಗ್ಗೆ ಪೊಲೀಸರಿಗೆ ಸಾಫ್ಟ್‌ ಕಾರ್ನರ್‌ ಯಾಕೆ?

ಉಪ್ಪಿನಂಗಡಿ ತಾಲೂಕಿನಲ್ಲೂ ಇತ್ತೀಚೆಗೆ ನೈತಿಕ ಪೊಲೀಸ್‌ಗಿರಿ ಸದ್ದು ಮಾಡಿತ್ತು. ಯುವಕ ಯುವತಿಯನ್ನು ತಡೆದು ನಿಲ್ಲಿಸಿದ ಯುವಕರ ತಂಡವು ಹಲ್ಲೆ ನಡೆಸಿ, ಬೆದರಿಕೆ ಹಾಕಿತ್ತು. ಯುವತಿ ಪರಿಚಿತ ವಿದ್ಯಾರ್ಥಿಯೊಂದಿಗೆ ಇದ್ದುದನ್ನು ನೋಡಿದ ಯುವಕರ ತಂಡವು ತಡೆದು ನಿಲ್ಲಿಸಿತ್ತು. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ಆ ತಂಡ ಹಲ್ಲೆ ನಡೆಸಿ ನೈತಿಕ ಪೊಲೀಸ್​​ಗಿರಿ ಮೆರೆದಿತ್ತು. ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮಂಗಳೂರಿನಲ್ಲಿ ಅನೈತಿಕ ಪೊಲೀಸ್ ಗಿರಿ ದಿನೇ ದಿನೇ ಹೆಚ್ಚಾಗುತ್ತಿದೆ. ಪೊಲೀಸರ ಎದುರಿನಲ್ಲಿಯೇ ಸಂಘಪರಿವಾರದವರು ಗೂಂಡಾಗಿರಿ ನಡೆಸುತ್ತಿದ್ದಾರೆ. ? ಸಂಘಪರಿವಾರದವರ ಗುಂಡಾಗಿರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವುದನ್ನು ತೋರಿಸುತ್ತಿದದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ವಿಡಿಯೋ ನೋಡಿಹೆಚ್ಚಾಗುತ್ತಿದೆ ಅನೈತಿಕ ಪೊಲೀಸ್‌ಗಿರಿ ; ಸಂಘಪರಿವಾರದವರ ಬಗ್ಗೆ ಪೊಲೀಸರಿಗೆ ಸಾಫ್ಟ್‌ ಕಾರ್ನರ್‌ ಯಾಕೆ?

 

Donate Janashakthi Media

Leave a Reply

Your email address will not be published. Required fields are marked *