ಬಿಹಾರದಲ್ಲಿ ಜೆಡಿಯು-ಬಿಜೆಪಿ ಹೊಸ ಸರ್ಕಾರ ಅಸ್ತಿತ್ವಕ್ಕೆ :  ಸಿಎಂ ಆಗಿ ‘ನಿತೀಶ್ ಕುಮಾರ್’ ಪ್ರಮಾಣ ವಚನ ಸ್ವೀಕಾರ

ಪಾಟ್ನಾ :ಬಿಜೆಪಿ ನೇತೃತ್ವ NDA ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಭಾನುವಾರ ಸಾಯಂಕಾಲ ಪ್ರಮಾಣ ವಚನ ಸ್ವೀಕರಿಸಿದರು. ಇವರ ಜತೆಗೆ, 2 ಉಪಮುಖ್ಯಮಂತ್ರಿಗಳು ಮತ್ತು 6 ಕ್ಯಾಬಿನೆಟ್​ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬಿಜೆಪಿಯಿಂದ ಸಾಮ್ರಾಟ್​ ಚೌಧರಿ,ವಿಜಯ್ ಕುಮಾರ್ ಸಿನ್ಹಾ ಮತ್ತು ಡಾ. ಪ್ರೇಮ್ ಕುಮಾರ್, ಜೆಡಿಯುನಿಂದ ವಿಜಯ್ ಚೌಧರಿ, ವಿಜೇಂದ್ರ ಯಾದವ್ ಮತ್ತು ಶ್ರವಣ್ ಕುಮಾರ್, ಎಚ್ ಎ ಎಂ ನಿಂದ ಜಿತಿನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಕುಮಾರ್ ಸುಮನ್ ಮತ್ತು ಸ್ವತಂತ್ರ ಅಭ್ಯರ್ಥಿ ಸುಮಿತ್ ಸಿಂಗ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

ಆರ್‌ಜೆಡಿ – ಜೆಡಿಯು ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಗಂಟೆಗಳ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಜತೆ ಸೇರಿ ಮತ್ತೆ ಹೊಸ ಸರ್ಕಾರವನ್ನು ನಿತೀಶ್ ಕುಮಾರ್ ರಚಿಸಿದ್ದಾರೆ.

ಭಾರತ್ ಮಾತಾ ಕಿ ಜೈ ಮತ್ತು ಜೈ ಶ್ರೀ ರಾಮ್ ಘೋಷಣೆಗಳ ನಡುವೆ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ, ಜಿತನ್ ರಾಮ್ ಮಾಂಝಿ, ಚಿರಾಗ್ ಪಾಸ್ವಾನ್, ಸಾಮ್ರಾಟ್ ಚೌಧರಿ, ಜೆಪಿ ನಡ್ಡಾ ಉಪಸ್ಥಿತರಿದ್ದರು.

9ನೇ ಬಾರಿ ಸಿಎಂ ಆಗಿ ನಿತೀಶ್ ಪ್ರಮಾಣ ವಚನ

ಜೆಡಿಯು ನಾಯಕ ನಿತೀಶ್ ಕುಮಾರ್ ಬಿಹಾರದಲ್ಲಿ 9ನೇ ಬಾರಿ ಸಿಎಂ ಆಗಿ ದಾಖಲೆ ನಿರ್ಮಿಸಿದ್ದಾರೆ. 2000ನೇ ವರ್ಷದಲ್ಲಿ ಮೊದಲ ಬಾರಿ ಸಿಎಂ ಆದ ನಿತೀಶ್ ಕುಮಾರ್, ಕೇವಲ 7 ದಿನ ಆಡಳಿತ ನಡೆಸಿದ್ರು. ಬಳಿಕ 2005ರಿಂದ 2010 ರವರೆಗೆ 2ನೇ ಬಾರಿ, 2010ರಿಂದ 2014ರವರೆಗೆ 3ನೇ ಬಾರಿ, 2015ರಲ್ಲಿ ಮತ್ತೆ 4ನೇ ಬಾರಿ, 2015ರಿಂದ 2017ರವರೆಗೆ 5ನೇ ಬಾರಿ, 2017ರಿಂದ 2020ರವರೆಗೆ 6ನೇ ಬಾರಿ, 2020ರಿಂದ 2022ರವರೆಗೆ 7ನೇ ಬಾರಿ, 2022ರಿಂದ 2024ರವರೆಗೆ 8ನೇ ಬಾರಿ ಸಿಎಂ ಆಗಿದ್ದರು. ಇದೀಗ ಮತ್ತೊಮ್ಮೆ ಸಿಎಂ ಆಗಿ, 9ನೇ ಬಾರಿ ಆಡಳಿತ ನಡೆಸುತ್ತಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *