ವಲಸೆಗಾರರ ಗಡಿಪಾರಿಗೆ ಫ್ಯಾಸಿಸ್ಟ್ ಪಿತೂರಿಯ ವಿರುದ್ಧ 14 ಲಕ್ಷ ಜನರ ಪ್ರತಿರೋಧ

– ವಸಂತರಾಜ ಎನ್.ಕೆ
ಜರ್ಮನಿ : ಜನವರಿಯ 20/21 ವಾರಾಂತ್ಯದಲ್ಲಿ ಜರ್ಮನಿಯ ಹೆಚ್ಚಿನ ಪ್ರಮುಖ ನಗರ/ಪಟ್ಟಣಗಳಲ್ಲಿ ಭಾರೀ ಪ್ರದರ್ಶನಗಳು ನಡೆದವು.  ಈ ಪ್ರದರ್ಶನಗಳಲ್ಲಿ ಸುಮಾರು 14 ಲಕ್ಷ ಜನ ಭಾಗವಹಿಸಿದ್ದಾರೆಂದು ವರದಿಯಾಗಿದೆ.  ಈ ಭಾರೀ ಪ್ರತಿಭಟನೆಗೆ ಪ್ರಚೋದಕವಾಗಿದ್ದು AfD ಯ   ಸದಸ್ಯರು ಇತರ ಉಗ್ರ ಬಲಪಂಥೀಯ ಫ್ಯಾಸಿಸ್ಟ್ ಗುಂಪುಗಳೊಂದಿಗೆ ವಲಸೆಗಾರರ ಸಾಮೂಹಿಕ ಗಡೀಪಾರು ಮಾಡುವ ವಿವರವಾದ ಯೋಜನೆಗಳನ್ನು ಚರ್ಚಿಸಿದ್ದಾರೆ ಎಂಬ ತನಿಖಾ ವರದಿಗಳು. ಈ ಯೋಜನೆಯ ಪ್ರಕಾರ ಗಡಿಪಾರಾಗುವ ‘ವಲಸೆಗಾರ”ರ ಪಟ್ಟಿಯಲ್ಲಿ ರಾಜಕೀಯ ಅಥವಾ ಇತರ ಕಾರಣಗಳಿಗಾಗಿ ಆಶ್ರಯ ಕೇಳಿ ಬರುವವರು, ಶಾಶ್ವತ ನೆಲೆಸುವ ಹಕ್ಕು ಪಡೆದಿರುವ ವಿದೇಶೀಯರು  ಮತ್ತು “ಮುಖ್ಯಧಾರೆಯಲ್ಲಿ ಮಿಳಿತವಾಗದಿರುವ” ಜರ್ಮನ್ ನಾಗರಿಕರು ಸೇರಿದ್ದಾರೆ. ಲಸೆಗಾರ

“ಜರ್ಮನಿಗೆ ಪರ್ಯಾಯ” (AfD – Alternative for Germany) ಎಂಬ ಉಗ್ರ ಬಲಪಂಥೀಯ ಅರೆ-ಫ್ಯಾಸಿಸ್ಟ್ ಪಕ್ಷದ ವಿರುದ್ಧದ ಜನವರಿಯ ಮೂರನೇ ವಾರದಲ್ಲಿ ಮತ್ತು 20/21 ವಾರಾಂತ್ಯದಲ್ಲಿ ಜರ್ಮನಿಯ ಹೆಚ್ಚಿನ ಪ್ರಮುಖ ನಗರ/ಪಟ್ಟಣಗಳಲ್ಲಿ ಭಾರೀ ಪ್ರದರ್ಶನಗಳು ನಡೆದವು.  AfD ಪಕ್ಷವನ್ನು ನಿಷೇಧಿಸಲು ಈ  ಪ್ರದರ್ಶನಗಳಲ್ಲಿ ಒತ್ತಾಯಪಡಿಸಲಾಯಿತು. ಈ ಪ್ರದರ್ಶನಗಳಲ್ಲಿ ಸುಮಾರು 14 ಲಕ್ಷ ಜನ ಭಾಗವಹಿಸಿದ್ದಾರೆಂದು ವರದಿಯಾಗಿದೆ.  ಇದು ಜರ್ಮನಿ ಮಾತ್ರವಲ್ಲ ಯುರೋಪಿನಲ್ಲಿ ಎಲ್ಲೆಡೆ ಬಲಗೊಳ್ಳುತ್ತಿರುವ ಅರೆ-ಫ್ಯಾಸಿಸ್ಟ್ ಪಕ್ಷಗಳ ವಿರುದ್ಧದ ಅತ್ಯಂತ ದೊಡ್ಡ ಪ್ರತಿಭಟನೆ, ಪ್ರತಿರೋಧ  ಕಾರ್ಯಾಚರಣೆಯಾಗಿತ್ತೆಂದು  ಹೇಳಲಾಗಿದೆ. ವಲಸೆಗಾರ

ಈ ಭಾರೀ ಪ್ರತಿಭಟನೆಗೆ ಪ್ರಚೋದಕವಾಗಿದ್ದು AfD ಯ   ಸದಸ್ಯರು ಇತರ ಉಗ್ರ ಬಲಪಂಥೀಯ ಫ್ಯಾಸಿಸ್ಟ್ ಗುಂಪುಗಳೊಂದಿಗೆ ವಲಸೆಗಾರರ ಸಾಮೂಹಿಕ ಗಡೀಪಾರು ಮಾಡುವ ವಿವರವಾದ ಯೋಜನೆಗಳನ್ನು ಚರ್ಚಿಸಿದ್ದಾರೆ ಎಂಬ ತನಿಖಾ ವರದಿಗಳು. ಪೋಟ್ಸ್ ಡ್ಯಾಮ್ ನಲ್ಲಿ ನಡೆದ ಸಭೆಯೊಂದರಲ್ಲಿ, ಈ ವರದಿಗಳ ಪ್ರಕಾರ ಮುಂದೆ AfD ಸರಕಾರ ರಚಿಸಿದಾಗ “ವಲಸೆಗಾರ”ರನ್ನು ವ್ಯವಸ್ಥಿತವಾಗಿ ಗಡೀಪಾರು ಮಾಡುವ ಕುರಿತು ಚರ್ಚಿಸಲಾಯಿತು. ವಲಸೆಗಾರ

“ಆಸ್ಟ್ರಿಯನ್ ಐಡೆಂಟಿಟೇರಿಯನ್ ಮೂವ್ ಮೆಂಟ್” ನ ನಾಯಕ ಮಾರ್ಟಿನ್ ಸೆಲ್ನರ್ “ಮಾಸ್ಟರ್ ಪ್ಲ್ಯಾನ್” ಒಂದನ್ನು ಮಂಡಿಸಿದರು. ಈ ಯೋಜನೆಯ ಪ್ರಕಾರ ಗಡಿಪಾರಾಗುವ ‘ವಲಸೆಗಾರ”ರ ಪಟ್ಟಿಯಲ್ಲಿ ರಾಜಕೀಯ ಅಥವಾ ಇತರ ಕಾರಣಗಳಿಗಾಗಿ ಆಶ್ರಯ ಕೇಳಿ ಬರುವವರು, ಶಾಶ್ವತ ನೆಲೆಸುವ ಹಕ್ಕು ಪಡೆದಿರುವ ವಿದೇಶೀಯರು  ಮತ್ತು “ಮುಖ್ಯಧಾರೆಯಲ್ಲಿ ಮಿಳಿತವಾಗದಿರುವ” ಜರ್ಮನ್ ನಾಗರಿಕರು ಸೇರಿದ್ದಾರೆ, ಎಂದು ಈ ವರದಿ ತಯಾರಿಸಿದ ‘ಕರೆಕ್ಟಿವ್’ ಸಂಶೋಧನಾ ಸಂಸ್ಥೆ ತಿಳಿಸಿದೆ.  ವಲಸೆಗಾರ

ಜರ್ಮನಿಯಿಂದ ಗಡಿಪಾರು ಮಾಡಿ ಉತ್ತರ ಆಫ್ರಿಕಾದಲ್ಲಿರುವ ಒಂದು ‘ಮಾದರಿ ದೇಶ”ಕ್ಕೆ ಕಳಿಸುವ ಯೋಚನೆಯನ್ನು ಸಹ ಚರ್ಚಿಸಲಾಯಿತಂತೆ. ಇದು ಜೂನ್ 1940ರಲ್ಲಿ ಮಿಲಿಯಾಂತರ ಜ್ಯೂಗಳನ್ನು ಆಗ ಫ್ರೆಂಚ್ ವಸಾಹತುವಾಗಿದ್ದ ಮಡಗಾಸ್ಕರ್ ಗೆ ಕಳಿಸುವ ನಾಜೀ “ಮಡಗಾಸ್ಕರ್ ಯೋಜನೆ”ಯ ಮಾದರಿಯಲ್ಲಿದೆ.

ಈ ವರದಿ ಪ್ರಕಟವಾಗುತ್ತಿದ್ದಂತೆ ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಈ ಪ್ರದರ್ಶನಗಳನ್ನು ಸಂಘಟಿಸಲಾಯಿತು. ಈ ಕರೆಗೆ ಅಭೂತಪೂರ್ವ ಪ್ರತಿಸ್ಪಂದನೆ ಸಿಕ್ಕಿತು. ಬರ್ಲಿನ್ ನ ರೈಸ್ಟಾಗ್ (ಜರ್ಮನಿಯ ಸಂಸತ್ ಭವನ) ದ ಎದುರು ಲಕ್ಷ ಜನ ಸೇರಿದ್ದರು. ಹ್ಯಾಂಬರ್ಗ ಮತ್ತು ಮುನಿಚ್ ಮುಂತಾದ ದೊಡ್ಡ ನಗರಗಳಲ್ಲಿ ಸೇರಲಾರಂಭಿಸಿದ್ದ ಜನಸಂದಣಿ ಗೆ ಕೇಂದ್ರೀಯ ಸ್ಥಳಗಳಲ್ಲಿ ಜಾಗ ಸಾಲದೆ ನೂಕುನುಗ್ಗಲಾಗಬಹುದೆಂದು ಸಭೆಗೆ ಬರುತ್ತಿದ್ದ ಜನರನ್ನು ಚದುರಲು ಮನವಿ ಮಾಡಲಾಯಿತಂತೆ. ಅಂತಹ ಭಾರೀ ಪ್ರತಿಸ್ಪಂದನೆ ವ್ಯಕ್ತವಾಗಿದೆ.  “ಮತ್ತೆ ನಾಜೀವಾದ ಬೇಡ”, “ಮತ್ತೆಂದೂ ನರಮೇಧ ನಡೆಯಲು ಬಿಡುವುದಿಲ್ಲ” “ಜರ್ಮನಿಯಲ್ಲಿ ಪ್ರಜಾಪ್ರಭುತ್ವವಿದೆ” ಎಂಬ ಆಕ್ರೋಶಭರಿತ ಘೋಷಣೆಗಳು ಪ್ರದರ್ಶನಗಳಲ್ಲಿ ಕೇಳಿ ಬಂದವು.

ವಲಸೆಗಾರರ ಗಡಿಪಾರಿಗೆ ಫ್ಯಾಸಿಸ್ಟ್ ಪಿತೂರಿಯ ವಿರುದ್ಧ 14 ಲಕ್ಷ ಜನರ ಪ್ರತಿರೋಧ

ಜರ್ಮನಿಯನ್ನು ಫ‍್ಯಾಸಿಸ್ಟ್ ನರಕ ಮಾಢಿದ್ದ ಜ್ಯೂ ನರಮೇಧ ಮತ್ತು ಹಿಟ್ಲರನ ಸರ್ವಾಧಿಕಾರದ ವಿರುದ್ಧ ರಾಜಕೀಯ ಪ್ರಜ್ಞೆ ಜರ್ಮನಿಯಲ್ಲಿ ಜಾಗೃತವಾಗಿದ್ದು AfD ಪಕ್ಷವನ್ನು ನಿಷೇಧಿಸಲು ತೀವ್ರ ಒತ್ತಾಯ ಕೇಳಿ ಬಂದಿದೆ. ಈ ಒತ್ತಾಯ ಈ ವರ್ಷ ನಡೆಯಲಿರುವ ಚುನಾವಣೆಗಳ ದೃ಼ಷ್ಟಿಯಿಂದ ತುರ್ತು ಪಡೆದಿದೆ. ಯುರೋಪಿಯನ್ ಪಾರ್ಲಿಮೆಂಟರಿ ಚುನಾವಣೆಗೆ ಆರು ತಿಂಗಳಿಗಿಂತಲೂ ಕಡಿಮೆ ಸಮಯವಿದೆ.  ಈ ಚುನಾವಣೆಗಳ ಕುರಿತು ನಡೆದ ಅಭಿಪ್ರಾಯ ಸಂಗ್ರಹಗಳಲ್ಲಿ ಹಲವು ತಿಂಗಳುಗಳಿಂದ  ಎರಡನೇ ಸ್ಥಾನದಲ್ಲಿದೆ.  AfD ಪಕ್ಷ ಸಮೀಕ್ಷೆಗಳಲ್ಲಿ ಸುಮಾರು ಶೇ. 22 ಬೆಂಬಲ ಪಡೆದಿದ್ದು  ಸಿಡಿಯು / ಸಿ ಎಸ್ ಯು (ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಮತ್ತು ಕ್ರಿಶ್ಚಿಯನ್ ಸೋಷಿಯಲ್ ಯೂನಿಯನ್) ಎಂದು ಕರೆಯಲ್ಪಡುವ ಪಕ್ಷಗಳ ಬಲ-ನಡುಪಂಥೀಯ ಕೂಟದಿಂದ ಕೆಲವೇ ಶೇಕಡಾ ಅಂಶಗಳಲ್ಲಿ  ಮಾತ್ರ ಹಿಂದಿದೆ. ಆಡಳಿತ ನಡೆಸುತ್ತಿರುವ ನಡು-ಎಡಪಂಥೀಯ ಕೂಟದ ಬೆಂಬಲದ  ರೇಟಿಂಗ್ ಗಳು ಈ ನಡುವೆ ಹೆಚ್ಚಿನ ಜೀವನ ವೆಚ್ಚಗಳು, ಬಜೆಟ್ ಬಿಕ್ಕಟ್ಟು ಮತ್ತು ವಲಸೆಯ ಕುರಿತ ಚರ್ಚೆಯ ಮಧ್ಯೆ ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿವೆ.  ಈ   ವರ್ಷದ ಸೆಪ್ಟೆಂಬರ್-ನವೆಂಬರ್ ತಿಂಗಳುಗಳಲ್ಲಿ ನಡೆಯಲಿರುವ ಪ್ರಾದೇಶಿಕ ಚುನಾವಣೆಗಳ ಮೊದಲು AfD ಪಕ್ಷವನ್ನು ನಿಷೇಧಿಸಬೇಕೆಂಬ ಒತ್ತಾಯಕ್ಕೆ ತುರ್ತು ಬಂದಿದೆ. ಜರ್ಮನಿಯ  ಮೂರು ಪೂರ್ವ ರಾಜ್ಯಗಳಾದ ಬ್ರಾಂಡೆನ್ ಬರ್ಗ್, ಸ್ಯಾಕ್ಸೋನಿ ಮತ್ತು ಥುರಿಂಗಿಯಾ ನಲ್ಲಿ AfD ಪ್ರಬಲ ಪಕ್ಷವಾಗಿ ಹೊಮ್ಮುತ್ತಿದೆ.

ಕರೆಕ್ಟಿವ್ ವರದಿಯಿಂದ ಆಂತರಿಕ ಸಚಿವಾಲಯವು ಆಶ್ಚರ್ಯಗೊಂಡಿದೆಯೇ ಎಂದು ಕೇಳಿದಾಗ, ದೇಶದ ದೇಶೀಯ ಗುಪ್ತಚರ ಈ ವಿಷಯಗಳ ಮೇಲೆ ಕಣ್ಣಿಟ್ಟಿದೆಯೆಂದಷ್ಟೇ ಗೃಹ ಸಚಿವರಾದ ಬ್ರಿಟ್ಟಾ ಬೇಲೇಜ್-ಹರ್ಮನ್ ಹೇಳಿದರು.

ವರದಿಯ ಹಿನ್ನೆಲೆಯಲ್ಲಿ, ಪಾಟ್ಸ್ ಡ್ಯಾಮ್ ನಲ್ಲೇ 1942 ರ ವಾನ್ಸೀ ಸಮ್ಮೇಳನಕ್ಕೆ ಹೋಲಿಕೆಗಳನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಹಿರಿಯ ನಾಜಿ ಅಧಿಕಾರಿಗಳು ಯಹೂದಿ ಪ್ರಶ್ನೆಗೆ “ಅಂತಿಮ ಪರಿಹಾರವನ್ನು” ರೂಪಿಸಿದ್ದೇ ಆ ಮೇಲಿನ ನರಮೇಧಕ್ಕೆ ಹಾದಿ ಮಾಡಿಕೊಟ್ಟಿದ್ದನ್ನು ಹಲವರು ನೆನಪಿಸಿಕೊಂಡಿದ್ದಾರೆ.

ಜರ್ಮನಿಯ ಪ್ರಮುಖ ಕಾನೂನು ಸಂಸ್ಥೆಗಳು ವರದಿಯಲ್ಲಿ ವಿವರಿಸಿರುವ ಯೋಜನೆಗಳನ್ನು ಬಲವಾಗಿ ಖಂಡಿಸಿವೆ. ನವೆಂಬರ್ ಸಭೆ ಎರಡನೇ ವಾನ್ಸೀ ಸಮ್ಮೇಳನವಾಗಿ ಹೊರಹೊಮ್ಮಬಾರದು ಎಂದು ಎಚ್ಚರಿಸಿದೆ.

“ಇದು ಸಂವಿಧಾನ ಮತ್ತು ಉದಾರವಾದಿ ಸಾಂವಿಧಾನಿಕ ಪ್ರಭುತ್ವದ ಮೇಲಿನ ಆಕ್ರಮಣವಾಗಿದೆ. ಸಾಮೂಹಿಕ ಗಡೀಪಾರಿನಂತಹ ದುರುಳ  ಕನಸು” ಕಾನೂನುಬದ್ಧ ನ್ಯಾಯಸಮ್ಮತ ಆಗುವುದನ್ನು ಎಲ್ಲಾ ಕಾನೂನು ಮತ್ತು ರಾಜಕೀಯ ವಿಧಾನಗಳಿಂದ ತಡೆಯಬೇಕು. ”” ಎಂದು ಜರ್ಮನ್ ಅಸೋಸಿಯೇಷನ್ ಆಫ್ ಜಡ್ಜ್ಸ್ ಮತ್ತು ಜರ್ಮನ್ ಬಾರ್ ಅಸೋಸಿಯೇಷನ್ ಸೇರಿದಂತೆ ಆರು ಸಂಸ್ಥೆಗಳ ಗುಂಪು ಹೇಳಿದೆ.

ಇದನ್ನು ಓದಿ : ಸಮಸ್ಯೆಗಳನ್ನು ಮರೆಮಾಚಲು ಮೋದಿ ಸರ್ಕಾರ ರಾಮ ಭಜನೆ ಮಾಡುತ್ತಿದೆ – ಡಾ.ಪರಕಾಲ ಪ್ರಭಾಕರ್

ಆದಾಗ್ಯೂ, ಜರ್ಮನಿಯ ಸೆಂಟ್ರಲ್ ಕೌನ್ಸಿಲ್ ಆಫ್ ಯಹೂದಿಗಳ ಅಧ್ಯಕ್ಷ ಜೋಸೆಫ್ ಶುಸ್ಟರ್, ವಾನ್ಸೀ ಸಮ್ಮೇಳನದೊಂದಿಗೆ ಹೋಲಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕೆಂದರು. “ಒಂದು ಉದ್ಯಮದಂತೆ ನಡೆದ ಯುರೋಪಿಯನ್ ಯಹೂದಿಗಳ ಸಾಮೂಹಿಕ ಹತ್ಯೆ ಇತಿಹಾಸದಲ್ಲಿ ಅದರ ಕಟುಕತನ ಮತ್ತು ಹುಚ್ಚುತನದಲ್ಲಿ ವಿಶಿಷ್ಟವಾಗಿತ್ತು.” ಎಂದು  ಶುಸ್ಟರ್ ಜರ್ಮನ್ ಸುದ್ದಿ ಸಂಸ್ಥೆ ಡಿ.ಪಿ.ಎ ಗೆ ತಿಳಿಸಿದರು. “ಆದಾಗ್ಯೂ, ಪಾಟ್ಸ್ ಡ್ಯಾಮ್ ನಲ್ಲಿ ನಡೆದ ಸಭೆಯು ನಮ್ಮ ಪ್ರಜಾಪ್ರಭುತ್ವ ಸಮಾಜದ ಅಡಿಪಾಯಕ್ಕೆ ಮಾರಕವಾದ ಭೀಕರ ಯೋಚನೆ ಎಂಬುದಕ್ಕೆ ಎರಡು ಮಾತಿಲ್ಲ.” ಎಂದು ಅವರು ಹೇಳಿದ್ದಾರೆ.

ತಮ್ಮ ಪಾಟ್ಸ್ ಡ್ಯಾಮ್ ಕ್ಷೇತ್ರದಲ್ಲಿ ನಡೆದ ಆರಂಭಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಸೇರಿದಂತೆ ರಾಜಕಾರಣಿಗಳು ಈ ಉಗ್ರ ಬಲಪಂಥೀಯ ಸಭೆಯ ಯೋಜನೆಯನ್ನು ಖಂಡಿಸಿದರು. “ವಲಸಿಗರನ್ನು ಅಥವಾ ನಾಗರಿಕರನ್ನು ಹೊರಹಾಕುವ ಯಾವುದೇ ಯೋಜನೆಯು, ನಮ್ಮ ಪ್ರಜಾಪ್ರಭುತ್ವದ ಮತ್ತು ನಮ್ಮೆಲ್ಲರ ವಿರುದ್ಧದ ಆಕ್ರಮಣವಾಗಿದೆ.” ಅವರು ಹೇಳಿದರು.

ಜರ್ಮನಿಯ ಮೂರು ರಾಜ್ಯಗಳಲ್ಲಿ AfD ಯನ್ನು “ಬಲ ಉಗ್ರಗಾಮಿ” ಎಂದು ನಿಗದಿಸಲಾಗಿದೆ. ಆದರೆ ಪಕ್ಷವನ್ನು ನಿಷೇಧಿಸಲು ಕಾನೂನು ಅಡಚಣೆ ಅತ್ಯಂತ ಹೆಚ್ಚಾಗಿದೆ.“ಮುಕ್ತ ಪ್ರಜಾಪ್ರಭುತ್ವದ ಮೂಲಭೂತ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುವ” ಪಕ್ಷಗಳನ್ನು ನಿಷೇಧಿಸಲು ಜರ್ಮನಿಯ ಸಂವಿಧಾನವು ಅನುಮತಿಸುತ್ತದೆ.  ಮತ್ತು ದೇಶದ ಸಾಂವಿಧಾನಿಕ ನ್ಯಾಯಾಲಯವು ಇದನ್ನು ಎರಡು ಬಾರಿ ಮಾಡಿದೆ.

 

ವಲಸೆಗಾರರ ಗಡಿಪಾರಿಗೆ ಫ್ಯಾಸಿಸ್ಟ್ ಪಿತೂರಿಯ ವಿರುದ್ಧ 14 ಲಕ್ಷ ಜನರ ಪ್ರತಿರೋಧ

ನಾಜಿ ಪಕ್ಷದ ಉತ್ತರಾಧಿಕಾರಿಯಾದ ಸೋಷಿಯಲಿಸ್ಟ್ ರೀಚ್ ಪಕ್ಷವನ್ನು 1952 ರಲ್ಲಿ ನಿಷೇಧಿಸಲಾಯಿತು, ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಜರ್ಮನಿಯನ್ನು 1956 ರಲ್ಲಿ ನಿಷೇಧಿಸಲಾಯಿತು. ನಿಷೇಧದ ಸೈದ್ಧಾಂತಿಕ ಮಾನದಂಡಗಳನ್ನು ಪೂರೈಸಿದರೂ, ನವ-ನಾಜಿ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿ (ಎನ್ ಪಿಡಿ) ತೀರಾ ದುರ್ಬಲವಾಗಿರುವುದರಿಂದ ನಿಷೇಧಿಸುವ ಅಗತ್ಯವಿಲ್ಲ ಎಂದು 2017 ರಲ್ಲಿ ಸಾಂವಿಧಾನಿಕ ನ್ಯಾಯಾಲಯ ತೀರ್ಪು ನೀಡಿತು.

ಆಂತರಿಕ ಸಚಿವ ನ್ಯಾನ್ಸಿ ಫೇಸರ್ ಕಳೆದ ವಾರ, ಆದಾಗ್ಯೂ, ಈ “ಸಾಂವಿಧಾನಿಕ ಕೊನೆಯ ಉಪಾಯ” ಗೆ ಅಡೆತಡೆಗಳು ಹೆಚ್ಚಾಗಿದ್ದರೂ ಸಹ, “AfD ಯನ್ನು ನಿಷೇಧಿಸುವ ಕ್ರಮವನ್ನು ತಳ್ಳಿಹಾಕುವುದಿಲ್ಲ” ಎಂದು ಹೇಳಿದರು. ಆದಾಗ್ಯೂ, ನ್ಯಾಯ ಮಂತ್ರಿ ಮಾರ್ಕೊ ಬುಶ್ಮನ್ ಅಂತಹ ನಿಷೇಧ ವಿಚಾರಣೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಶೇಕಡಾ 100 ಖಚಿತವಿದ್ದರೆ  ಮಾತ್ರ ಈ ಕ್ರಮವನ್ನು ಕೈಗೊಳ್ಳಬೇಕು. ಏಕೆಂದರೆ, ಈ ಕಾರ್ಯಾಚರಣೆ ಸಾಂವಿಧಾನಿಕ ನ್ಯಾಯಾಲಯದ ಮುಂದೆ ವಿಫಲವಾದರೆ, ಅದು AfD ಭಾರಿ ಸಾರ್ವಜನಿಕ ಪ್ರಚಾರದ  ಜಯವಾಗುತ್ತದೆ “ ಎಂದು ಬುಶ್ಮನ್ ಹೇಳಿದರು.

ಇಂತಹ ವಿಷಯಗಳಲ್ಲಿ ಸಾಮಾನ್ಯವಾಗಿ ಮೌನವಹಿಸುವ ಜರ್ಮನಿಯ ಪ್ರಮುಖ ಸಿಇಒಗಳೂ ಪರಿಸ್ಥಿತಿಯ ಗಂಭೀರತೆ ತಿಳಿದು ಮಾತಾಡ ಹತ್ತಿದ್ದಾರೆ. ಡಸೆಲ್ಡಾರ್ಫ್ ವಿಮಾನ ನಿಲ್ದಾಣದ ಸಿಇಒ ಲಾರ್ಸ್ ರೆಡೆಲಿಗ್ಕ್ಸ್ “ಸಂವಿಧಾನಕ್ಕೆ ಅಪಾಯಕಾರಿಯಾದ ಈ ಆಲೋಚನೆಗಳು ಜರ್ಮನಿಗೆ ಆರ್ಥಿಕ ಸ್ಥಳವಾಗಿ ವಿಷವಾಗಿದೆ. ಇದು ನಮ್ಮ ಶಾಂತಿಯುತ ಸಹಬಾಳ್ವೆಗೆ ಬೆದರಿಕೆ ಹಾಕುತ್ತದೆ, ಅದು ನಮ್ಮ ಸಮೃದ್ಧಿಗೆ ಧಕ್ಕೆ ತರುತ್ತದೆ ಮತ್ತು ಜಗತ್ತಿಗೆ ಮಾರಕ ಸಂದೇಶವನ್ನು ಕಳುಹಿಸುತ್ತದೆ.” ಎಂದು ಹೇಳಿದ್ದಾರೆ.

ವಯಸ್ಸಾದ ಜನಸಂಖ್ಯೆ ಮತ್ತು ದೇಶೀಯ ನುರಿತ ಕಾರ್ಮಿಕರ ಕೊರತೆಯಿರುವ ಸಮಯದಲ್ಲಿ ವಿದೇಶಿ ಹೂಡಿಕೆ ಮತ್ತು ನುರಿತ ಕೆಲಸಗಾರರಿಗೆ ಆಕರ್ಷಕ ತಾಣವಾಗಿ ಜರ್ಮನಿಯ ಚಿತ್ರಣವನ್ನು ಇದು ಅಪಾಯಕ್ಕೆ ಸಿಲುಕಿಸುತ್ತದೆ ಮತ್ತು ಜರ್ಮನಿಯ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂಬ ಕಳವಳವನ್ನು ಇದು ಆಳುವವರಲ್ಲೂ ಹೆಚ್ಚಿಸಿದೆ.

ಪಕ್ಷವನ್ನು ನಿಷೇಧಿಸುವುದು “ಪ್ರಜಾಪ್ರಭುತ್ವ ವಿರೋಧಿ” ಎಂದು AfD ಹೇಳಿದೆ. ”ಕರೆಕ್ಟಿವ್ ವರದಿಯ ನಂತರ, ಪಕ್ಷದ ಸಹ-ನಾಯಕ ಆಲಿಸ್ ವೀಡೆಲ್ “ಕರೆಕ್ಟಿವ್ ಸಿಬ್ಬಂದಿ ಖಾಸಗಿತನದ ಹಕ್ಕುಗಳನ್ನು ಕಡೆಗಣಿಸಿ, ರಹಸ್ಯ ಸೇವಾ ವಿಧಾನಗಳನ್ನು ಬಳಸಿ ಖಾಸಗಿ ಸಭೆಯಲ್ಲಿ ಒಳನುಸುಳಿ ಬೇಹುಗಾರಿಕೆ ನಡೆಸಿದ್ದಾರೆ.” ಎಂದು ಆರೋಪಿಸಿದರು.  ಆದರೆ ಅವರು ಕರೆಕ್ಟಿವ್ ವರದಿಯನ್ನು ನಿರಾಕರಿಸಿಲ್ಲ!

ಸುಮಾರು ಆರು ದಶಕಗಳಲ್ಲಿ ಮೊದಲ ಬಾರಿಗೆ ಉಗ್ರ ಬಲಪಂಥೀಯ ಪಕ್ಷವು ಸಂಸತ್ತನ್ನು ಪ್ರವೇಶಿಸಿದಾಗ 2017 ಮತ್ತು 2018 ರಲ್ಲಿ AfD ವಿರುದ್ಧದ ದೊಡ್ಡ ಪ್ರದರ್ಶನಗಳು ಕಂಡು ಬಂದವು, ಫೆ.20/21ರ ಪ್ರತಿರೋಧದ ಮುಂದೆ ಆ ಪ್ರತಿಭಟನೆಗಳು ಚಿಕ್ಕದಾಗಿದ್ದವು.

ಇದನ್ನು ನೋಡಿ : ಗಣತಂತ್ರ 75 : ಎತ್ತ ಚಲಿಸುತ್ತಿದೆ ಭಾರತ | ಜಾತ್ಯಾತೀತ ಆಶಯಗಳ ಆಚರಣೆ, ವಿಶ್ಲೇಷಣೆ : ಕೆ.ಎನ್‌ ಉಮೇಶ್‌

Donate Janashakthi Media

Leave a Reply

Your email address will not be published. Required fields are marked *