ರಾಮಮಂದಿರ ಉದ್ಘಾಟನೆ ವೇಳೆ ಸಂವಿಧಾನದ ಪೀಠಿಕೆ ಹಂಚಿಕೊಂಡ ಮಲಯಾಳಂ ಚಿತ್ರರಂಗ!

ತಿರುವನಂತಪುರಂ: ಬಾಬರಿ ಮಸೀದಿ ಒಡೆದ ಸ್ಥಳದಲ್ಲಿ ನಿರ್ಮಾಣ ಮಾಡಿರುವ ಅಯೋಧ್ಯೆಯ ರಾಮಮಂದಿರ ಕಟ್ಟಡದ ಉದ್ಘಾಟನೆಗೆ ಕೆಲವೇ ಗಂಟೆಗಳ ಹಿಂದೆ, ಮಲಯಾಳಂ ಚಿತ್ರರಂಗದ ಗಣ್ಯರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಭಾರತೀಯ ಸಂವಿಧಾನದ ಪೀಠಿಕೆಯ ಚಿತ್ರಗಳನ್ನು ಹಂಚಿಕೊಂಡಿದ್ದು, ಬಿಜೆಪಿ ನಡೆಸುತ್ತಿರುವ ದ್ವೇಷ ರಾಜಕಾರಣದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ನಟರಾದ ಪಾರ್ವತಿ ತಿರುವೋತು, ರಿಮಾ ಕಳ್ಳಿಂಗಲ್, ದಿವ್ಯ ಪ್ರಭಾ, ರಾಜೇಶ್ ಮಾಧವನ್, ಕಣಿ ಕುಸೃತಿ, ನಿರ್ದೇಶಕರಾದ ಜಿಯೋ ಬೇಬಿ, ಆಶಿಕ್ ಅಬು, ಕಮಲ್ ಕೆ.ಎಂ., ಕುಂಜಿಲ ಮಸಿಲ್ಲಾಮಣಿ ಮತ್ತು ಗಾಯಕ ಸೂರಜ್ ಸಂತೋಷ್ ಸೇರಿದಂತೆ ಹಲವಾರು ಮಲಯಾಳಂ ಚಿತ್ರರಂಗದ ಖ್ಯಾತನಾಮರು ಸಂವಿಧಾನದ ಪೀಠಿಕೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಾಮಮಂದಿರ

ಇದನ್ನೂ ಓದಿ: ಸಾಂವಿಧಾನಿಕ ಜವಾಬ್ದಾರಿಯನ್ನು ಎತ್ತಿಹಿಡಿಯಲು ಆಹ್ವಾನ ನಿರಾಕರಣೆ – ಸಿಎಂ ಪಿಣರಾಯಿ ವಿಜಯನ್ ಪುನರುಚ್ಛಾರ

ಖ್ಯಾತ ನಟಿ ಪಾರ್ವತಿ ತಿರುವೋತ್ತು ಅವರು “ನಮ್ಮ ಭಾರತ” ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂವಿಧಾನದ ಪೀಠಿಕೆಯನ್ನು ಪೋಸ್ಟ್ ಮಾಡಿದ್ದು, ನಟಿ ರಿಮಾ ಕಳ್ಳಿಂಗಲ್ ಅವರು, “ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ” ಎಂದು ಬರೆದು ಸಾಂವಿಧಾನಿಕ ಮೌಲ್ಯಗಳನ್ನು ಪುನರುಚ್ಚರಿಸಿದ್ದಾರೆ.

 

View this post on Instagram

 

A post shared by Parvathy Thiruvothu (@par_vathy)

ನಿರ್ದೇಶಕ ಕಮಲ್ ಕೆ.ಎಂ. ಅವರು, “ಭಾರತದ ಜನರಾದ ನಾವು ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವಾಗಿ ರೂಪಿಸಲು ಮತ್ತು ಅದರ ಎಲ್ಲಾ ನಾಗರಿಕರಿಗೆ ಸುರಕ್ಷಿತವಾಗಿರಲು ನಿರ್ಧರಿಸಿದ್ದೇವೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಮೋದಿ ಪ್ರತಿ ಚುನಾವಣೆಗೆ ರಾಜಕೀಯ ಅಜೆಂಡಾ ಬದಲಾಯಿಸುತ್ತಾರೆ; ಶಶಿ ತರೂರ್

ಚಲನಚಿತ್ರ ನಿರ್ಮಾಪಕ ಆಶಿಕ್ ಅಬು ಅವರು ಸಂವಿಧಾನದಲ್ಲಿ “ಸಾರ್ವಭೌಮ,” “ಸಮಾಜವಾದಿ”, “ಜಾತ್ಯತೀತ”,  “ಪ್ರಜಾಪ್ರಭುತ್ವ” ಮತ್ತು “ಗಣರಾಜ್ಯ” ಪದಗಳನ್ನು ಹೈಲೈಟ್ ಮಾಡಿದ್ದಾರೆ.

 

View this post on Instagram

 

A post shared by Aashiq Abu (@aashiqabu)

ದೇಶದ ಜಾತ್ಯತೀತ ಮೌಲ್ಯಗಳ ಬಗ್ಗೆ ಮಾತನಾಡುವ ಸೆಲೆಬ್ರಿಟಿಗಳ ಧೈರ್ಯವನ್ನು ಹಲವಾರು ಜನರು ಇದನ್ನು ಮೆಚ್ಚಿಕೊಂಡು ಶ್ಲಾಘಿಸಿದ್ದು, ಅದರನ್ನು ಹಂಚಿಕೊಂಡಿದ್ದಾರೆ. ಕೆಲವರು ಅವರನ್ನು ಹಿಂದೂ ವಿರೋಧಿ ಎಂದು ಕರೆದು ನಿಂದಿಸಿದ್ದಾರೆ. ರಾಮಮಂದಿರ

ಕಳೆದ ವಾರ, ಖ್ಯಾತ ಮಲಯಾಳಂ ಗಾಯಕಿ ಕೆ.ಎಸ್. ಚಿತ್ರಾ ಅವರು ಮನೆಯಲ್ಲಿ ಐದು ಬತ್ತಿಯ ದೀಪಗಳನ್ನು ಬೆಳಗಿಸುವಂತೆ ಮತ್ತು ರಾಮ ಮಂತ್ರವನ್ನು ಪಠಿಸಲು ವಿಡಿಯೊ ಸಂದೇಶದ ಮೂಲಕ ವಿನಂತಿಸಿದ್ದರು. ಆದರೆ ಸಾಮಾಜಿಕ ಮಾಧ್ಯಮಗದಲ್ಲಿ ಅವರಿಗೆ ತೀವ್ರ ಹಿನ್ನಡೆಯಾಗಿತ್ತು. ಅಲ್ಲದೆ, ಜಾತ್ಯತೀತ ಸಿದ್ದಾಂತದ ಹಲವಾರು ಜನರು ಬಾಬರಿ ಮಸೀದಿಯ ಅವಶೇಷಗಳ ಮೇಲೆ ನಿರ್ಮಿಸಲಾದ ದೇವಾಲಯವನ್ನು ಅನುಮೋದಿಸಿದ್ದಕ್ಕಾಗಿ ಅವರನ್ನು ತೀವ್ರವಾಗಿ ಟೀಕಿಸಿದ್ದರು.

ಈ ನಡುವೆ ರಾಮಮಂದಿರ ಉದ್ಘಾಟನೆಯಲ್ಲಿ ನಟ ವಿಕ್ಕಿ ಕೌಶಲ್, ಮಾಧುರಿ ದೀಕ್ಷಿತ್, ಆಲಿಯಾ ಭಟ್, ರಾಜ್‌ಕುಮಾರ್ ಹಿರಾನಿ, ಮಹಾವೀರ್ ಜೈನ್ ಮತ್ತು ರೋಹಿತ್ ಶೆಟ್ಟಿ ಸೇರಿದಂತೆ ಬಾಲಿವುಡ್ ತಾರೆಯರು ಭಾಗವಹಿಸಿದ್ದಾರೆ.

ವಿಡಿಯೊ ನೋಡಿ: ಪ್ರಧಾನಿ ಮೋದಿಯವರ ‘ರಾಮಜಪ’ ರಾಜಕಾರಣ ಭಾರತವನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ? Janashakthi Media

Donate Janashakthi Media

Leave a Reply

Your email address will not be published. Required fields are marked *