ಫೆಬ್ರವರಿ 29 ರಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು : 15ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ29 ರಿಂದ ಮಾರ್ಚ್ 7ರ ವರೆಗೆ ನಗರದಲ್ಲಿ ನಡೆಯಲಿದ್ದು ಈ ಬಾರಿಯೂ ಸುಮಾರು 50ಕ್ಕೂ ಹೆಚ್ಚು ದೇಶಗಳಿಂದ ೨೦೦ಕ್ಕೂ ಹೆಚ್ಚು ಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನಗೊಳ್ಳಲಿವೆ. ಫೆಬ್ರವರಿ 29 ರಂದು ವಿಧಾನಸೌಧದ ಮುಂಭಾಗ ಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಚಾಲನೆ ನೀಡಿಲಿದ್ದು ಮಾರ್ಚ್ 7ರಂದು ಸಮಾರೋಪ ಸಮಾರಂಭ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದ್ದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚಲನಚಿತ್ರೋತ್ಸವ

ಒರಾಯಿನ್ ಮಾಲ್‌ನ ಪಿವಿಆರ್ ಸಿನಿಮಾದ 11 ಪರದೆಗಳು, ಚಾಮರಾಜ ಪೇಟೆಯಲ್ಲಿರುವ ರಾಜ್‌ಕುಮಾರ್ ಕಲಾ ಭವನ, ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಚಿತ್ರಸಮಾಜದಲ್ಲಿ ಪ್ರತಿನಿಧಿಗಳಿಗೆ ಮಾರ್ಚ್ 1 ರಿಂದ ಚಲನಚಿತ್ರ ಪ್ರದರ್ಶನ ಆರಂಭವಾಗಲಿದೆ. ಚಲನಚಿತ್ರೋತ್ಸವ

ಈ ಬಾರಿಯೂ ಸ್ಪರ್ಧಾವಿಭಾಗ, ಏಷ್ಯಾ ಚಲನಚಿತ್ರ ವಿಭಾಗ, ಭಾರತೀಯ ಚಲನಚಿತ್ರಗಳ ವಿಭಾಗ (ಚಿತ್ರಭಾರತಿ), ಕನ್ನಡ ಚಲನಚಿತ್ರಗಳ ವಿಭಾಗ, ಸಮಕಾಲೀನ ವಿಶ್ವ ಸಿನಿಮಾ, ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳು, ವಿಮರ್ಶಕರ ವಾರ, ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟದ ಆಯ್ಕೆಯ ಚಿತ್ರಗಳು, ಜೀವನಚರಿತ್ರೆ (ಬಯೋಪಿಕ್‌ಗಳು) ದೇಶ ಕೇಂದ್ರಿತ ಸಿನಿಮಾಗಳ ಪ್ರದರ್ಶನ ನಡೆಯಲಿದೆ.

ಶತಮಾನೋತ್ಸವ ನೆನಪು ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿಜಯಭಾಸ್ಕರ್ , ಹಾಲಿವುಡ್‌ನಲ್ಲಿ ಖ್ಯಾತಿ ಪಡೆದ ಮೈಸೂರು ಮೂಲದ ನಟ ಸಾಬು ದಸ್ತಗೀರ್, ಶತಮಾನೋತ್ಸವ ನೆನಪು ಕುರಿತು ನಿರ್ದೇಶಕ ದೊರೆ-ಭಗವಾನ್ ಖ್ಯಾತಿಯ ಭಗವಾನ್ , ಹಿರಿಯ ನಟಿ ಲೀಲಾವತಿ, ನಿರ್ದೇಶಕ ಸಿ.ವಿ.ಶಿವಶಂಕ , ಗಾಯಕಿ ವಾಣಿ ಜಯರಾಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.ವಿಶ್ವದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಚಿತ್ರಗಳು ಸಮಕಾಲೀನ ವಿಶ್ವ ಸಿನಿಮಾ ವಿಭಾಗಗಳಲ್ಲಿ ಪ್ರದರ್ಶನ ಕಾಣಲಿವೆ. ಆಹ್ವಾನಿತ ಪ್ರತಿನಿಧಿಗಳಲ್ಲಿ ಚಿತ್ರ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಪತ್ರಕರ್ತರು, ವಿಮರ್ಶಕರು, ಚಿತ್ರೋತ್ಸವದ ಸಂಘಟಕರು. ಸಿನಿಮಾ ಶಿಕ್ಷಣ ತಜ್ಞರು ಸೇರಿದ್ದಾರೆ. ವಿದೇಶಿ ರಾಯಭಾರಿ ಕಚೇರಿಗಳ ಅಧಿಕಾರಿ ವರ್ಗ, ವಿದೇಶಿ ಸಾಂಸ್ಕೃತಿ ಸಂಘಟನೆಗಳ ಪ್ರತಿನಿಧಿಗಳ ಬಹುಸಂಖ್ಯೆಯಲ್ಲಿ ನಿರೀಕ್ಷಿಸಬಹುದಾಗಿದೆ. ಫೆಬ್ರವರಿ 15ರಿಂದ ನೋಂದಣಿ ಚಿತ್ರೋತ್ಸವದ ಜಾಲತಾಣದಲ್ಲಿ ಪ್ರತಿನಿಧಿಗಳ ನೋಂದಣಿ ಕಾರ್ಯ ಫೆಬ್ರವರಿ 15ರಿಂದ ಆರಂಭವಾಗಲಿದೆ.ಆಸಕ್ತರು ಚಿತ್ರೋತ್ಸವದ ಜಾಲತಾಣದಲ್ಲಿ ಹೆಸರು ನೊಂದಾಯಿಸಿ ಕೊಳ್ಳಬಹುದಾಗಿದೆ. ಸಾರ್ವಜನಿಕರಿಗೆ 8೦೦ ರೂಪಾಯಿ ನಿಗಧಿ ಪಡಿಸಲಾಗಿದ್ದು ಚಿತ್ರೋದ್ಯಮದ ಸದಸ್ಯರು, ಚಿತ್ರ ಸಮಾಜಗಳ ಸದಸ್ಯರು, ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರೂ.4೦೦ ರೂಪಾಯಿ ನಿಗದಿ ಮಾಡಲಾಗಿದೆ.

ಇದನ್ನು ನೋಡಿ : ಬಾಬರಿ ಮಸೀದಿ ಪ್ರಕರಣದ ತೀರ್ಪು ನೀಡಿದ್ದ 5 ನ್ಯಾಯಮೂರ್ತಿಗಳಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ!

ಕಾರ್ಯಾಗಾರ, ಸಂವಾದ

ಚಿತ್ರೋತ್ಸವ ನಡೆಯುವ ದಿನಗಳಲ್ಲಿ ಚಲನಚಿತ್ರ ಮಾಧ್ಯಮ ಮತ್ತು ಉದ್ಯಮಕ್ಕೆ ಸಂಬಂಧಪಟ್ಟ ತಜ್ಞರಿಂದ ಕಾರ್ಯಾಗಾರ, ಸಂವಾದ ಮತ್ತು ಉಪನ್ಯಾಸಗಳು ನಡೆಯಲಿವೆ. ಸಿನಿಮಾ ಸಂಕಲನ ಕಲೆಯ ಕುರಿತಂತೆ ಕಾರ್ಯಾಗಾರ ನಡೆಯಲಿದ್ದು ಕನ್ನಡ ಸಿನಿಮಾ 90 ,ಕರ್ನಾಟಕ 50 ಕುರಿತಂತೆ ಚರ್ಚೆ ಸಂವಾದ, ಹೆಸರಾಂತ ನಿರ್ದೇಶಕ, ನಿರ್ದೇಶಕ, ತಂತ್ರಜ್ಞ ,ಸಿನಿ ತಜ್ಞರಿಂದ ಚಿತ್ರಕಥಾ ರಚನೆಯ ಕಾರ್ಯಾಗಾರ ನಡೆಯಲಿದೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿ.ಕೆ.ಮೂರ್ತಿ ಸ್ಮಾರಕ ವಿಶೇಷ ಉಪನ್ಯಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನು ನೋಡಿ : ಕೆಮಿಕಲ್​ ಮಿಶ್ರಿತ ನೀರು ಹೊರಹಾಕುತ್ತಿರುವ ಯತ್ನಾಳ ಸಕ್ಕರೆ ಕಾರ್ಖಾನೆ : ಜನರ ಹೊಟ್ಟೆ ಸೇರುತ್ತಿದೆ ವಿಷಕಾರಿ ನೀರು

Donate Janashakthi Media

Leave a Reply

Your email address will not be published. Required fields are marked *