ನವದಹೆಲಿ: ಪ್ರಧಾನಿ ಮೋದಿಯ ಆಪ್ತ ಉದ್ಯಮಿಯಾದ ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಎನ್ಡಿಟಿವಿಯನ್ನು ಸ್ವಾಧೀನಪಡಿಸಿಕೊಂಡ ಸುಮಾರು ಒಂದು ವರ್ಷದ ನಂತರ, ಚಾನೆಲ್ನ ಸಂಸ್ಥಾಪಕ ಪ್ರಣಯ್ ರಾಯ್ ಅವರು ಭಾರತದ ಮೊದಲ ಕೃತಕ ಬುದ್ದಿಮತ್ತೆ (ಎಐ) ಚಾಲಿತ ಡಿಜಿಟಲ್ ಪ್ಲಾಟ್ಫಾರ್ಮ್ ‘ಡಿಕೋಡರ್’ ಅನ್ನು ಪರಿಚಯಿಸಿದ್ದಾರೆ. ಇದು ಕೃತಕ ಬುದ್ದಿಮತ್ತೆ(ಎಐ) ಚಾಲಿತ ವೆಬ್ಸೈಟ್ ಮತ್ತು ಆಪ್ ಆಗಿದ್ದು, ಹಲವಾರು ಭಾರತೀಯ ಭಾಷೆಗಳಲ್ಲಿ ವಿಚಾರಗಳನ್ನು ವಿಶ್ಲೇಷಿಸುತ್ತದೆ.
‘ಡಿಕೋಡರ್’ ಚುನಾವಣೆಗಳು ಮತ್ತು ಇತರ ಜಾಗತಿಕ ಪ್ರವೃತ್ತಿಗಳ ಬಗ್ಗೆ ತಮ್ಮದೇ ಆದ ವಿಶ್ಲೇಷಣೆ ಮಾಡಲು ಬಳಕೆದಾರರಿಗೆ ಅಧಿಕಾರ ನೀಡುತ್ತದೆ ಎಂದು ಹೇಳಿಕೆ ತಿಳಿಸಿದೆ. ಸೋಮವಾರ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾದ ತನ್ನ ಮೊದಲ ಕಾರ್ಯಕ್ರಮದಲ್ಲಿ, ಪ್ರಣಯ್ ರಾಯ್ ಅವರು ಲೇಖಕ ರುಚಿರ್ ಶರ್ಮಾ ಅವರೊಂದಿಗೆ ವಿಶ್ವದಾದ್ಯಂತ ನಡೆದ ಚುನಾವಣೆಗಳಿಂದ ಹಿಡಿದು ಆರ್ಥಿಕ ಕುಸಿತದವರೆಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ಇದನ್ನೂ ಓದಿ: ಪ್ರಚೋದನಕಾರಿ ಭಾಷಣ: ಅನಂತಕುಮಾರ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು
Presenting deKoder to you – one of India's first AI-Driven Digital Content Platforms for the analysis of elections & global trends. Soon to be in 15 different Indian languages.
To stay ahead of the curve subscribe to the deKoder channel.
Click here: https://t.co/22XnjEni0e… pic.twitter.com/4BWkdL8jm9— deKoder (@deKoderdigital) January 13, 2024
ಪ್ರಣಯ್ ರಾಯ್ ಅವರು ಕಳೆದ ವರ್ಷ ನವೆಂಬರ್ 29 ರಂದು ಎನ್ಡಿಟಿವಿಯ ಪ್ರವರ್ತಕ ಆರ್ಆರ್ಪಿಆರ್ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾಗಿ ಒಂದು ತಿಂಗಳ ನಂತರ, ಅದಾನಿ ಗುಂಪು ಎನ್ಡಿಟಿವಿಯಲ್ಲಿ ಅತಿದೊಡ್ಡ ಷೇರುದಾರರಾದ ಕೂಡಲೇ, ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ತಮ್ಮ ಉಳಿದ ಶೇರುಗಳನ್ನು ಮಾರಾಟ ಮಾಡಿದ್ದರು.v ಡಿಕೋಡರ್
ಎನ್ಡಿಟಿವಿಯಿಂದ ಪ್ರಣಯ್ ರಾಯ್ ಅವರು ಅವರ ನಿರ್ಗಮಿಸಿದ ನಂತರ ಚಾನೆಲ್ನ ಉನ್ನತ ಅಧಿಕಾರಿಗಳು ಮತ್ತು ಪತ್ರಕರ್ತರು ಕೂಡಾ ರಾಜೀನಾಮೆ ನೀಡಿದ್ದರು. ಅದರಲ್ಲಿ ಪ್ರಮುಖವಾಗಿ ಗುಂಪಿನ ಅಧ್ಯಕ್ಷರಾಗಿದ್ದ ಸುಪರ್ನಾ ಸಿಂಗ್, ಮುಖ್ಯ ಕಾರ್ಯತಂತ್ರ ಅಧಿಕಾರಿ ಅರಿಜಿತ್ ಚಟರ್ಜಿ, ಮುಖ್ಯ ತಂತ್ರಜ್ಞಾನ ಮತ್ತು ಉತ್ಪನ್ನ ಅಧಿಕಾರಿ ಕವಾಲ್ಜಿತ್ ಬೇಡಿ, ಹಾಗೆಯೇ ಹಿರಿಯ ಪತ್ರಕರ್ತ ರವಿಶ್ ಕುಮಾರ್, ಶ್ರೀನಿವಾಸನ್ ಜೈನ್ ಮತ್ತು ನಿಧಿ ರಜ್ದಾನ್ ಸೇರಿದ್ದರು. ಡಿಕೋಡರ್
ವಿಡಿಯೊ ನೋಡಿ: ಸುಗ್ಗಿ ಹಬ್ಬ. ಸಂಕ್ರಾಂತಿಯ ಸೊಬಗು..ಜನಪದ ಹಾಡು… Janashakthi Media