ಹರಿಯಾಣ | ಸರ್ಕಾರಿ ವೈದ್ಯರಿಂದ ಮುಷ್ಕರ; ಒಪಿಡಿ ಸೇವೆ ಸ್ಥಗಿತ

ಚಂಡೀಗಢ: ಸ್ಪೆಷಲಿಸ್ಟ್ ಕೇಡರ್ ರಚನೆ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಬಾಂಡ್ ಮೊತ್ತವನ್ನು ಕಡಿತಗೊಳಿಸುವಂತೆ ಒತ್ತಾಯಿಸಿ ಹರಿಯಾಣದ ಸರ್ಕಾರಿ ವೈದ್ಯರು ಶುಕ್ರವಾರ ಮುಷ್ಕರ ನಡೆಸಿದ್ದು, ಕೆಲವು ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ (ಒಪಿಡಿ) ಸೇವೆಗಳ ಮೇಲೆ ಪರಿಣಾಮ ಬೀರಿದೆ. ರಾಜ್ಯದಲ್ಲಿ ಸರ್ಕಾರಿ ವೈದ್ಯರು ಈ ವಾರದಲ್ಲಿ ಎರಡನೇ ಬಾರಿ ನಡೆಸುತ್ತಿರುವ ಮುಷ್ಕರವಾಗಿದ್ದು, ಅದಕ್ಕೂ ಮೊದಲು ಬುಧವಾರ ಮುಷ್ಕರ ನಡೆಸಿದ್ದರು.

ಪ್ರತಿಭಟನೆಯ ನೇತೃತ್ವ ವಹಿಸಿರುವ ಹರಿಯಾಣದ ಸರ್ಕಾರಿ ವೈದ್ಯರನ್ನು ಪ್ರತಿನಿಧಿಸುವ ಸಂಸ್ಥೆಯಾದ ಹರಿಯಾಣ ನಾಗರಿಕ ವೈದ್ಯಕೀಯ ಸೇವಾ ಸಂಘದ (ಎಚ್‌ಸಿಎಂಎಸ್) ಪ್ರತಿನಿಧಿಗಳ ನಡುವೆ ಆರೋಗ್ಯ ಸಚಿವರು ಸಭೆ ಏರ್ಪಡಿಸಲಾಗುವುದು ಎಂದು ಭರವಸೆ ನೀಡಿದ ನಂತರ ಅವರು ಬುಧವಾರ ತುರ್ತು ಕರ್ತವ್ಯಗಳನ್ನು ಪುನರಾರಂಭಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ – ರಾಹುಲ್ ಗಾಂಧಿ

ಸರ್ಕಾರ ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳದಿದ್ದಲ್ಲಿ ವೈದ್ಯರು ಶುಕ್ರವಾರದಿಂದ ಎಲ್ಲಾ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಎಚ್‌ಸಿಎಂಎಸ್ ಬುಧವಾರ ತಿಳಿಸಿತ್ತು. ತಜ್ಞ ವೈದ್ಯರಿಗೆ ಕೇಡರ್ ರಚನೆ, ಸ್ನಾತಕೋತ್ತರ ಕೋರ್ಸ್‌ಗಳಿಗೆ ಬಾಂಡ್ ಮೊತ್ತದಲ್ಲಿ ಕಡಿತ ಮತ್ತು ಕೇಂದ್ರ ಸರ್ಕಾರದ ವೈದ್ಯರಿಗೆ ಸರಿಸಮನಾಗಿ ಡೈನಾಮಿಕ್ ಅಶ್ಯೂರ್ಡ್ ವೃತ್ತಿ ಪ್ರಗತಿ ಯೋಜನೆ ಜಾರಿ ಮಾಡಬೇಕು ಎಂದು ವೈದ್ಯರು ಬೇಡಿಕೆ ಇಟ್ಟು ಹೋರಾಟ ನಡೆಸುತ್ತಿದ್ದಾರೆ.

ಶುಕ್ರವಾರ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಒಪಿಡಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ತುರ್ತು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು ಎಂದು ಎಚ್‌ಸಿಎಂಎಸ್‌ನ ಪ್ರಧಾನ ಕಾರ್ಯದರ್ಶಿ ಡಾ.ಅನಿಲ್ ಯಾದವ್ ಹೇಳಿದ್ದಾರೆ. ವೈದ್ಯರ ಈ ಬೇಡಿಕೆಗಳು ಹೊಸದಲ್ಲ ಎಂದು ಅವರು ಹೇಳಿದ್ದು, “ಈ ಹಿಂದೆಯೂ ಆರೋಗ್ಯ ಸಚಿವರು ಭರವಸೆ ನೀಡಿದ್ದರು ಆದರೆ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜನವರಿ 10 ರಿಂದ ದೇಶದಾತ್ಯಂತ RSS & BJP ವಿರುದ್ಧ ಮನೆ ಮನೆ ಭೇಟಿ ಮತ್ತು ಕರಪತ್ರ ವಿತರಣೆ – ಎಸ್‌ಕೆಎಂ

“ನಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದೊಂದಿಗಿನ ಸಭೆಯ ಭರವಸೆಯ ದೃಷ್ಟಿಯಿಂದ ಮತ್ತು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಸೇವೆಗಳ ಸಂಪೂರ್ಣ ಸ್ಥಗಿತಕ್ಕೆ ಮುಂದಾಗಿಲ್ಲ ಮತ್ತು ತುರ್ತು ಸೇವೆಗಳಿಗೆ ಹಾಜರಾಗಲಾಗುತ್ತಿದೆ. ಆದಾಗ್ಯೂ, ಒಪಿಡಿಗಳು ಮತ್ತು ಕೆಲವು ಶಸ್ತ್ರಚಿಕಿತ್ಸೆಗಳನ್ನು ಅಮಾನತುಗೊಳಿಸಲಾಗಿದೆ. ಮುಂದಿನ ಕ್ರಮವು ಸರ್ಕಾರದೊಂದಿಗಿನ ಮಾತುಕತೆಯ ಫಲಿತಾಂಶವನ್ನು ಅವಲಂಬಿಸಿರುತ್ತದೆ” ಎಂದು ಅವರು ಹೇಳಿದ್ದಾರೆ.

ಬುಧವಾರ ಸಂಜೆ, ಆರೋಗ್ಯ ಸೇವೆಗಳ ಮಹಾನಿರ್ದೇಶಕ ಆರ್. ಎಸ್. ಪುನಿಯಾ ಅವರು ಎಲ್ಲಾ ರಾಜ್ಯ ಸಿವಿಲ್ ಸರ್ಜನ್‌ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ನಿರಂತರ ಆರೋಗ್ಯ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಸೂಚನೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

ವಿಡಿಯೊ ನೋಡಿ: ತೀವ್ರಗೊಂಡ ಕರವೇ ಕನ್ನಡ ನಾಮಫಲಕ ಹೋರಾಟ Janashakthi Media

Donate Janashakthi Media

Leave a Reply

Your email address will not be published. Required fields are marked *