ನವದೆಹಲಿ(ಜ.15): ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತ ಪ್ರತಿಭಟನೆ 51 ನೇ ದಿನಕ್ಕೆ ಕಾಲಿಟ್ಟಿದೆ. ಇದರ ನಡುವೆ ಇಂದು ಕೇಂದ್ರ ನಡೆಸಿದ 9ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. ಇದೀಗ ಜನವರಿ 19 ರಂದು 10ನೇ ಸುತ್ತಿನ ಮಾತುಕತೆ ನಡೆಸಲು ಕೇಂದ್ರ ದಿನಾಂಕ ನಿಗದಿ ಪಡಿಸಿದೆ. ಆದರೆ ಈ ಸಭೆಗೆ ರೈತ ಮುಖಂಡರು ಭಾಗವಹಿಸುವ ಕುರಿತು ಖಚಿತಪಡಿಸಿಲ್ಲ.
ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಬಳಿಕ ನಡೆದ ಮೊದಲ ಸಭೆ ಇದಾಗಿತ್ತು. ಈ ಸಭೆಯು ವಿಫಲಾವಗಬಹುದು ಎಂದು ನಿರೀಕ್ಷಿಸಲಾಗಿತ್ತು, ರೈತರು ಮತ್ತು ರೈತ ಸಂಘಟನೆಗಳು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯನ್ನು ಈಗಾಗಲೆ ತಿರಸ್ಕರಿಸಿದ್ದಾರೆ. ಇತ್ತ ಕೇಂದ್ರದ ಜೊತೆಗಿನ ಮಾತುಕತೆಯಲ್ಲೂ ರೈತರು ಕೃಷಿ ಕಾಯ್ದೆ ರದ್ದಾದರೆ ಮಾತ್ರ ನಾವು ಪ್ರತಿಭಟನೆ ಹಿಂಪಡೆಯುವುದಾಗಿ ಹೇಳಿದರು. ಹೀಗಾಗಿ 9ನೇ ಸುತ್ತಿನ ಮಾತುಕತೆ ವಿಫಲಗೊಂಡಿದೆ.
ಅಗತ್ಯ ಸರಕು ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿಗೆ ಮುಂದಾಗಿದೆ. ಆದರೆ ನಮ್ಮ ಬೇಡಿಕೆ 3 ಕಾಯ್ದೆಗಳನ್ನೇ ಹಿಂಪಡೆಯಿರಿ ಅನ್ನೋದು ಮಾತ್ರ ಎಂದು ರೈತ ಸಂಘಟನೆ ನಾಯಕು ಹೇಳಿದ್ದಾರೆ. ಕೇಂದ್ರ ಕೃಷಿ ಕಾಯ್ದೆಯ ಸಾಧಕ ಬಾಧಕ ಅಧ್ಯಯನ ನಡೆಸಿದ ಬಳಿಕ ಕೃಷಿ ಕಾಯ್ದೆ ಜಾರಿ ಕುರಿತು ನಿರ್ಧಾರ ಕೈಗೊಳ್ಳಲು ಸುಪ್ರೀಂ ಸೂಚಿಸಿದೆ. ಅಲ್ಲೀವರಗೆ ಕಾಯ್ದೆಯನ್ನು ಸುಪ್ರೀಂ ತಡೆ ಹಿಡಿದಿದೆ.
ಇತ್ತ ಜನವರಿ 26 ರಂದು ಗಣರಾಜ್ಯೋತ್ಸವ ದಿನ ಟ್ರಾಕ್ಟರ್ ಪರೇಡ್ ಮಾಡುವುದು ಖಚಿತ ಎಂದು ರೈತರು ತಿಳಿಸಿದ್ದಾರೆ. 3 ಕೃಷಿ ಕಾಯ್ದೆಯಲ್ಲಿನ ತಪ್ಪುಗಳನ್ನು ಕೇಂದ್ರ ಕೇಳುತ್ತಿದೆ. ನಮಗೆ 3 ಕಾಯ್ದೆಗಳೇ ಬೇಡ, ಹಿಂಪಡೆಯಲು ನಮ್ಮ ಹೋರಾಟ ಎಂದು ರೈತ ಸಂಘಟನೆ ಹೇಳಿದೆ.
ಇಂದಿನ ಸಭೆಯಲ್ಲಿ 40 ರೈತ ಸಂಘಟನೆಗಳ ಮುಖಂಡರು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೈ ಸಚಿವ ಪಿಯೂಷ್ ಗೋಯಲ್, ವಾಣಿಜ್ಯ ಖಾತೆ ರಾಜ್ಯ ಸಚಿವ ಸೋಮ್ ಪ್ರಕಾಶ್ ಪಾಲ್ಗೊಂಡಿದ್ದರು.
ನಾವು ಹೆಚ್ಚು ನಿರೀಕ್ಷಿಸುವುದಿಲ್ಲ, ಸರ್ಕಾರದೊಂದಿಗಿನ ಕೊನೆಯ ಸುತ್ತಿನ ಮಾತುಕತೆ ವಿಫಲವಾಗಿದೆ ಮತ್ತು ಈಗ ಅವರಿಗೆ ನ್ಯಾಯಾಲಯದಿಂದ ಸಹಾಯ ಪಡೆಯಲು ಅವಕಾಶ ಸಿಕ್ಕಿದೆ. ಸರ್ಕಾರವು ಚರ್ಚೆಗಳನ್ನು ಮುನ್ನಡೆಸಲು ಹೋಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. 3 ಕೃಷಿ ಕಾನೂನುಗಳಲ್ಲಿ ಹೆಚ್ಚಿನ ಸುಧಾರಣೆಗೆ ಅವಕಾಶವಿಲ್ಲ – ಹನ್ನಾ ಮೊಲ್ಲಾ, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಕಿಸಾನ್ ಸಭಾ. AIKS (ಸರ್ಕಾರದೊಂದಿಗೆ ನಡೆದ ಮಾತುಕತೆಯ ರೈತ ನಿಯೋಗದ ಪ್ರಮುಖ ಮುಖಂಡರು)
Shame on the part of bjp modi government