ಬೆಂಗಳೂರು: ಕೆಜಿ ಈರುಳ್ಳಿ ದರ 80 ರೂಪಾಯಿ ಗಡಿ ದಾಟಿ, ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬಂದರೂ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು, ಮತ್ತಷ್ಟು ದರ ಹೆಚ್ಚಳ ಆತಂಕ ಎದುರಾಗಿದೆ.
ಕೆಜಿ ಈರುಳ್ಳಿ ದರ ಚಿಲ್ಲರೆ ಮಾರುಕಟ್ಟೆಯಲ್ಲಿ 75 ರಿಂದ 80 ರೂಪಾಯಿಗೆ ಮಾರಾಟವಾಗಿದೆ. ಮಹಾರಾಷ್ಟ್ರದಿಂದ 500ಕ್ಕೂ ಅಧಿಕ ಲಾರಿಗಳು ಸೇರಿ ಸುಮಾರು 980 ಲಾರಿಗಳು ಬೆಂಗಳೂರಿಗೆ ಬಂದಿವೆ. ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ 95,783, ದಾಸನಪುರ ಮಾರುಕಟ್ಟೆಗೆ 4427 ಚೀಲ ಈರುಳ್ಳಿ ಬಂದಿದೆ.
ಇದನ್ನೂ ಓದಿ: ಹರ್ಯಾಣದಲ್ಲಿ ಬಿಜೆಪಿ ಕೈ ಮೇಲೆ ಮತ್ತು ಜಮ್ಮು-ಕಾಶ್ಮೀರದಲ್ಲಿ ಮುಖಭಂಗ
ಸಗಟು ಮಾರುಕಟ್ಟೆಯಲ್ಲಿ ಹಳೆ ಈರುಳ್ಳಿ ಕ್ವಿಂಟಲ್ ಗೆ 5200 ರೂ. ವರೆಗೆ ಗರಿಷ್ಠ ದರಕ್ಕೆ ಹರಾಜಾಗಿದೆ. ಉತ್ತಮ ಗುಣಮಟ್ಟದ ಹೊಸ ಈರುಳ್ಳಿ 4,000 ರೂ.ವರೆಗೂ ಮಾರಾಟವಾಗಿದೆ. ಮಳೆಯಿಂದ ಈರುಳ್ಳಿ ಬೆಳೆ ಹಾಳಾಗಿರುವುದರಿಂದ ಪೂರೈಕೆಯಲ್ಲಿ ವ್ಯಕ್ತಿಯವಾಗಿದ್ದು, ಈರುಳ್ಳಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದನ್ನೂ ನೋಡಿ: ಸಾಲಕ್ಕಾಗಿ ನೀಡಿದ ಚೆಕ್ ನಿಂದ ಆಗುವ ತೊಂದರೆಗಳು